NEET Exam 2024: ನೀಟ್ ಅಂದರೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಿಂದ ರಾಜ್ಯಕ್ಕೆ ವಿನಾಯಿತಿ ನೀಡುವಂತೆ ಕೇಂದ್ರವನ್ನು ಒತ್ತಾಯಿಸುವ ನಿರ್ಣಯವನ್ನು ತಮಿಳುನಾಡು ಸರ್ಕಾರ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಿದೆ.
ಸೆಕೆಂಡ್ ಪಿಯುಸಿ ಮಾರ್ಕುಗಳ ಆಧಾರದ ಮೇಲೆ ಮೆಡಿಕಲ್ ಕೋರ್ಸ್‌ಗಳಿಗೆ ಪ್ರವೇಶ ನೀಡಬೇಕೆಂದು ನಿರ್ಣಯದಲ್ಲಿ ಒತ್ತಾಯಿಸಲಾಗಿದೆ. ತಮಿಳುನಾಡಿನ ಬಿಜೆಪಿ ಸದಸ್ಯರ ವಿರೋಧ ಮತ್ತು ಸಭಾತ್ಯಾಗದ ನಡುವೆ ರಾಷ್ಟ್ರೀಯ ವೈದ್ಯಕೀಯ ಆಯೋಗದ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಪ್ರಶ್ನೆಪತ್ರಿಕೆ ಸೋರಿಕೆ ಅಕ್ರಮ ಕೇಳಿಬಂದಿರುವ ನೀಟ್ ಪರೀಕ್ಷೆಯನ್ನು ರದ್ದು ಮಾಡಬೇಕು ಎಂದು ಅಲ್ಲಿನ ಡಿಎಂಕೆ ಸರಕಾರವು ಕೇಂದ್ರವನ್ನು ಒತ್ತಾಯಿಸಲಾಗಿದೆ.
Ujire: ಬೆಳಾಲು ಕ್ರಾಸ್ ಹತ್ತಿರ ಡಿವೈಡರಿಗೆ ಡಿಕ್ಕಿ ಹೊಡೆದ ಬೆಂಝ್ ಕಾರು- ವ್ಯಕ್ತಿ ಸಾವು
ತಮಿಳುನಾಡಿನ ಸಿಎಂ ಎಂ.ಕೆ. ಸ್ಟಾಲಿನ್ ಮಂಡಿಸಿದ ನಿರ್ಣಯವನ್ನು ಬಿಜೆಪಿಯ ಮಿತ್ರ ಪಕ್ಷ ಪಿಎಂಕೆ ಕೂಡಾ ಬೆಂಬಲಿಸಿದ್ದು ವಿಶೇಷ. ಈಗ ಇರುವ ಈ ನೀಟ್ ಪರೀಕ್ಷೆಯು ತಾರತಮ್ಯದಿಂದ ಕೂಡಿದ್ದು, ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳನ್ನು ವೈದ್ಯಕೀಯ ವಿದ್ಯಾಭ್ಯಾಸದಿಂದ ವಂಚಿತರನ್ನಾಗಿ ಮಾಡುತ್ತದೆ. ಅಲ್ಲದೆ, ಪ್ಲಸ್-2 ಅಂಕಗಳ ಆಧಾರದ ಮೇಲೆ ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಕೊಡುವ ರಾಜ್ಯಗಳ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಡಿಎಂಕೆ ಮುಖ್ಯಮಂತ್ರಿ ಸ್ಟಾಲಿನ್ ವಾದಿಸಿದ್ದಾರೆ. ಬಡವರು ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ನಿರಾಕರಿಸಿರುವ ಮೂಲಕ ನೀಟ್, ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ವೈದ್ಯಕೀಯ ಸೇವೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ವಾದಿಸಿದ್ದಾರೆ.
ಇನ್ನೊಂದೆಡೆ ನೀಟ್ ಪರೀಕ್ಷೆಯಿಂದ ಹಲವು ಅನುಕೂಲವಿದ್ದು, ಅದು ನಮ್ಮ ರಾಜ್ಯಕ್ಕೆ ಅತ್ಯವಶ್ಯಕ. ನೀಟ್ ವಿರುದ್ಧದ ವಿಧಾನಸಭೆಯ ನಿರ್ಣಯವು ಸ್ವೀಕಾರಾರ್ಹವಲ್ಲ. ನಾವು ಸಭಾತ್ಯಾಗ ಮಾಡುತ್ತೇವೆ’ ಎಂದು ಹೇಳಿ ಬಿಜೆಪಿ ನಾಯಕ ನಾಗೇಂದ್ರನ್ ಸದನದಿಂದ ಹೊರನಡೆದಿದ್ದಾರೆ.
ಈ ಸಂದರ್ಭದಲ್ಲಿ ವಿರೋಧ ಪಕ್ಷ ಎಐಎಡಿಎಂಕೆಯ ಯಾವೊಬ್ಬ ಸದಸ್ಯರೂ ಸದನದಲ್ಲಿ ಹಾಜರಿರಲಿಲ್ಲ. ವಿಷಯುಕ್ತ ಮದ್ಯ ಸೇವನೆ ಪ್ರಕರಣಕ್ಕೆ ಗದ್ದಲ ಎಬ್ಬಿಸಿದ ಕಾರಣದಿಂದ ಎಐಎಡಿಎಂಕೆಯ ಎಲ್ಲ ಸದಸ್ಯರನ್ನು ಸದನದಿಂದ ಅಮಾನತು ಮಾಡಲಾಗಿದೆ.
ನೀಟ್ ಪರೀಕ್ಷೆಗೆ ತಮಿಳುನಾಡು ಮೊದಲಿನಿಂದಲೂ ವಿರೋಧ
ದೇಶ ವ್ಯಾಪಿಯಾಗಿ 2017ರಲ್ಲಿ ನೀಟ್ ಪರೀಕ್ಷೆ ಕಡ್ಡಾಯ ಮಾಡಿದಾಗಿನಿಂದ ಡಿಎಂಕೆ ಇದನ್ನು ವಿರೋಧಿಸುತ್ತಲೇ ಬರುತ್ತಿದೆ. ನೀಟ್ ರದ್ದತಿಗೆ ಕೋರಿ ಬೃಹತ್ ಸಹಿ ಸಂಗ್ರಹ ಅಭಿಯಾನವನ್ನೂ ನಾವು ಹಿಂದೆ ಹಮ್ಮಿಕೊಂಡಿದ್ದೆವು ಎಂದು ಅವರು ಹೇಳಿದ್ದಾರೆ. ಹಲವು ರಾಜ್ಯಗಳಲ್ಲಿ ಹಗರಣದ ಬಗ್ಗೆ ಕೇಳಿಬಂದಿದ್ದು, ಈಗ ಕೃಪಾಂಕ ನೀಡಿ ಬಳಿಕ ಹಿಂಪಡೆಯಲಾಗಿದೆ. ಈಗ ಸಿಬಿಐ ತನಿಖೆ ನಡೆಯುತ್ತಿದೆ. ಈಗ ಹಲವು ರಾಜ್ಯಗಳು ನೀಟ್ ಪರೀಕ್ಷೆಯನ್ನು ವಿರೋಧಿಸುತ್ತಿವೆ ಎಂದಿದ್ದಾರೆ ಸ್ಟಾಲಿನ್.
