1
KEA: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(KEA) ವತಿಯಿಂದ ನಡೆಸಲ್ಪಡುವ, 26ರಂದು ನಿಗದಿಯಾಗಿದ್ದ ಕರ್ನಾಟಕ ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆಯನ್ನು ಮುಂದೂಡಲಾಗಿದೆ.

ಹೌದು, ಈ ತಿಂಗಳಾಂತ್ಯ ಅಂದರೆ ನವೆಂಬರ್ 26 ರಂದು ನಿಗದಿಯಾಗಿದ್ದ ಕರ್ನಾಟಕ ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆಯನ್ನು ಮುಂದೂಡಲಾಗಿದ್ದು ಡಿ 31ರಂದು ನಡೆಸಲು ತಾತ್ಕಾಲಿಕ ದಿನಾಂಕವನ್ನು ನಿಗದಿ ಮಾಡಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಪ್ರಕಟಣೆ ಹೊರಡಿಸಿದ್ದಾರೆ.
ಅಂದಹಾಗೆ ನಿಖರವಾಗಿ ದಿನಾಂಕವನ್ನು ತಿಳಿಸದ ಕಾರಣ ತಾತ್ಕಾಲಿಕವಾಗಿ ನಿದಿಪಡಿಸಿದ ದಿನಾಂಕವೂ ಮುಂದೂಡಬಹುದು. ಹೀಗಾಗಿ ಅಭ್ಯರ್ಥಿಗಳು KEA ವೆಬ್ ಸೈಟ್ ಅನ್ನು ಪರಿಶೀಸುತ್ತಿದ್ದರೆ ಉತ್ತಮ.
