Home » February 14 School Holiday: ಫೆಬ್ರವರಿ 14ಕ್ಕೆ ಈ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

February 14 School Holiday: ಫೆಬ್ರವರಿ 14ಕ್ಕೆ ಈ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

0 comments
Dakshina Kannada

School Holiday: ಫೆ.14ರಂದು ಪ್ರೇಮಿಗಳ ದಿನಾಚರಣೆ ಮಾಡಲಾಗುತ್ತದೆ. ಈ ದಿನದಂದು ಪ್ರೇಮಿಗಳು ಆಚರಣೆ ಮಾಡುವುದು ಹೆಚ್ಚು. ಈ ವರ್ಷ ಫೆ.14ರಂದು( School Holiday)ಸರಸ್ವತಿ ಪೂಜೆ ಎಂದು, ವಸಂತ ಪಂಚಮಿಯು ಸಹ ಬಂದಿದೆ. ಹಿಂದೂ ಕ್ಯಾಲೆಂಡರ್‌ ಪ್ರಕಾರ ವಸಂತ ಪಂಚಮಿಗೆ ಬಹಳ ಮಹತ್ವ ಇದೆ.

ಜ್ಞಾನ, ಬುದ್ಧಿವಂತಿಕೆ, ಸಂಗೀತ, ಕಲೆ ಮತ್ತು ಶಿಕ್ಷಣವನ್ನು ಅನುಗ್ರಹಿಸುವ ಸರಸ್ವತಿ ದೇವಿಗೆ ವಸಂತ ಪಂಚಮಿ ಹಬ್ಬವನ್ನು ಮಾಡಲಾಗುತ್ತದೆ. ವಸಂತ ಪಂಚಮಿ ಹಬ್ಬವನ್ನು ವಿದ್ಯಾದೇವಿ ಸರಸ್ವತಿಯನ್ನು ಭಕ್ತಿಭಾವದಿಂದ ಪೂಜೆ ಮಾಡಲಾಗುತ್ತದೆ.

ಹಾಗಾಗಿ ದೇಶದ ಹಲವು ರಾಜ್ಯಗಳಲ್ಲಿ ವಸಂತ ಪಂಚಮಿಯಂದು ಶಾಲಾ ಕಾಲೇಜುಗಳಿಗೆ ಸಾರ್ವಜನಿಕ ರಜೆಯನ್ನು ಘೋಷಣೆ ಮಾಡಲಾಗಿದೆ. ದೆಹಲಿ, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಲ್ಲಿ ಈ ವರ್ಷ ಫೆಬ್ರವರಿ 14 ರಂದು ವಸಂತ ಪಂಚಮಿಗೆ ರಜೆ ಘೋಷಣೆ ಮಾಡಲಾಗಿದೆ. ಆದರೆ ಕರ್ನಾಟಕದಲ್ಲಿ ರಜೆ ಘೋಷಣೆ ಮಾಡಿಲ್ಲ.

ಇದನ್ನೂ ಓದಿ :ವಾಟ್ಸಪ್‌ನಿಂದ ಬಳಕೆದಾರರಿಗೆ ಮಹತ್ವದ ಫೀಚರ್‌ ಬಿಡುಗಡೆ, ಇನ್ನು ಮುಂದೆ ಈ ಕಿರಿಕಿರಿ ಇರಲ್ಲ

You may also like

Leave a Comment