IAS Double Meaning Question: ಇದು ಒಂದು ತಮಾಷೆಯ ಮತ್ತು ವಿಯರ್ಡ್ ಅಥವಾ ಅಸಹ್ಯ ಅನ್ನಿಸುವಂತಹ ಪ್ರಶ್ನೆ. ಇಂತಹ ಪ್ರಶ್ನೆಗಳಿಗೆ ಡರ್ಟಿ ಮೈಂಡ್ ಕ್ವೆಶ್ಚನ್ ಅನ್ನುತ್ತಾರೆ. ಈ ಪ್ರಶ್ನೆ ಕೇಳಿದ ಕೂಡಲೇ ಜನರು ನಗುವುದು, ನಾಚಿಕೊಳ್ಳುವುದು, ಬಿದ್ದು ಬಿದ್ದು ನಗುವುದು, ಸಾಮಾನ್ಯ. ಇಂತಹ ಪ್ರಶ್ನೆಯನ್ನು ಬ್ರಿಲಿಯಂಟ್ ಹುಡುಗಿ, ಐಎಎಸ್ ಆಕಾಂಕ್ಷಿಯಾದವಳಿಗೆ ಕೇಳಿದರೆ ಆಕೆ ಏನು ಉತ್ತರಿಸಬಹುದು ? ತುಂಬಾ ಇಂಟರೆಸ್ಟಿಂಗ್ ಆಗಿರುವ ಈ ಪ್ರಶ್ನೆಯೊಂದಿಗೆ ನಾವು ಇವತ್ತಿನ ಈ ಶಾರ್ಟ್ ಲೇಖನವನ್ನು ಶುರು ಮಾಡುತ್ತಿದ್ದೇವೆ.
ಪ್ರಶ್ನೆ 1: ನಾನು ಎತ್ತರದಿಂದ ಪ್ರಾರಂಭಿಸುತ್ತೇನೆ, ಆದರೆ ನಂಗೆ ತುಂಬಾ ಹೊತ್ತು ನೆಟ್ಟಗೆ ನಿಲ್ಲಲು ಆಗೋದಿಲ್ಲ, ಕೊನೆಗೆ ನಾನು ಚಿಕ್ಕ ಆಗಿ ಬಿದ್ದು ಹೋಗುತ್ತೇನೆ. ಹಾಗಾದ್ರೆ ನಾನ್ಯಾರು ?
ವಿವರಣೆ: ಸಹಜವಾಗಿ ನಮ್ಮ ಮನಸ್ಸು dirty mind. ಕೆಟ್ಟದ್ದನ್ನೇ ನಾವು ಯೋಚಿಸುತ್ತೇವೆ. ಡಬ್ಬಲ್ ಮೀನಿಂಗ್ ಪ್ರಶ್ನೆ ಇದು ಅಂತ ಎಂತ ಮುಗ್ದರಿಗೂ ಅರ್ಥ ಆಗಿ ಹೋಗುತ್ತದೆ. ಅದರಂತೆ, ಅದು ಸಾರ್ ಅಂತ ನೀವಂದುಕೊಳ್ಳಬಹುದು. ಆದರೆ ನಿಮ್ಮ ಉತ್ತರ ತಪ್ಪು.
ಉತ್ತರ: ಇದು ಮೇಣದ ಬತ್ತಿ. ನಾನು ಎತ್ತರದಿಂದ ಪ್ರಾರಂಭಿಸುತ್ತೇನೆ. ಮೊದಲು ಉದ್ದಕ್ಕೆ ಎತ್ತರವಾಗಿ ಇರುತ್ತದೆ. ಆದರೆ ನಂಗೆ ತುಂಬಾ ಹೊತ್ತು ನೆಟ್ಟಗೆ ನಿಲ್ಲಲು ಆಗೋದಿಲ್ಲ, ಕಾರಣ ಉರಿದಂತೆ ಬತ್ತಿ ಚಿಕ್ಕದು ಆಗ್ತಾ ಹೋಗುತ್ತೆ. ಕೊನೆಗೆ ನಾನು ಚಿಕ್ಕ ಆಗಿ ಬಿದ್ದು ಹೋಗುತ್ತೇನೆ. ಅಷ್ಟೇ, ಹತ್ತಿಸಿದ ಬತ್ತಿ ಪೂರಾ ಆರಿ ಹೋಗುತ್ತೆ !
ಪ್ರಶ್ನೆ 2: ವಿರಾಟ್ ಕೊಹ್ಲಿ ಬರ್ತ್ ಡೇ ಯಾವಾಗ
ಗಂಡ: 5 ನೇ ನವೆಂಬರ್ 1988
ಹೆಂಡತಿ (ಕೋಪದಿಂದ) – ಅವನ ಬರ್ತಡೇ ನಿಮಗೆ ನೆನಪಿದೆ. ನೀವು ನನ್ನ ಹುಟ್ಟು ಹಬ್ಬವನ್ನು ಮರೆತು ಬಿಟ್ಟಿದ್ದೀರಾ ? ಎಂದು ಹೆಂಡತಿ ರಗಳೆ ತೆಗೀತಾಳೆ. ಈಗ ಪರ್ಫೆಕ್ಟ್ ಆಗಿ ಹೆಂಡತಿಯನ್ನು ಹೇಗೆ ಸಮಾಧಾನ ಮಾಡ್ಬೋದು ? ಇದು IAS ಸಂದರ್ಶಕ ಕೇಳಿದ ಪ್ರಶ್ನೆ.
ಉತ್ತರ (ಪತಿ) – ಅರೆ, ನಾನ್ಯಾಕೆ ನಿಂಗೆ ವಿಶ್ ಮಾಡಲಿ ? ನಿನಗೆ ಕಳೆದ ವರ್ಷಕ್ಕಿಂತ ಒಂದು ದಿನ ಕೂಡಾ ಹೆಚ್ಚು ವಯಸ್ಸಾದ ಹಾಗೆ ನನಗೆ ಕಾಣ್ತಿಲ್ಲ. ಗ್ರೇಟ್ ಗರ್ಲ್ !!
ಹೆಂಡತಿ (ಅವಳ ಗಂಟಲು ಮತ್ತು ಸ್ಮೈಲ್ ಅನ್ನು ವಿಸ್ತರಿಸಿ): ಜಾನು ಪಾಪು, ನಿಜವಾಗಿಯೂ ?! ಎಂದು ಕೇಳುತ್ತಾಳೆ.
ಪತಿ: (ಮನಸ್ಸಿನಲ್ಲಿ) ‘ಅರೆ ಮಗ್ನೇ ಸರಿಯಾದ ಸಮಯದಲ್ಲಿ ಡೈಲಾಗ್ ನೆನಪು ಮಾಡಿಕೊಂಡೆ. ಇಲ್ದೆ ಹೋಗಿದ್ರೆ ಕಥೆ ಕೈಲಾಸ ! ‘ಎಂದು ತನ್ನನ್ನು ತಾನೇ ಬೆನ್ನು ತಟ್ಟಿಕೊಂಡ ಗಂಡ.
ಸಂದರ್ಶಕ ಪರ್ಫೆಕ್ಟ್ ಅನ್ನಿಸುವಂತಹ ಉತ್ತರವನ್ನು ಹೇಳಲು ಮಾತ್ರ ಹೇಳಿದ್ದು ಆದರೆ ಈ ಬುದ್ಧಿವಂತ ವಿದ್ಯಾರ್ಥಿ ಇನ್ನೊಂದಷ್ಟು ಸ್ಕ್ರೀನ್ ಪ್ಲೇ ಸೇರಿಸಿ ಹೇಳಿ ಸಂದರ್ಶಕರ ಮೆಚ್ಚುಗೆ ಗಳಿಸಿದ್ದ. ಇಂತಹಾ ಹೊಸ ಮತ್ತು ಆಸಕ್ತಿಕರ ಪ್ರಶ್ನೋತ್ತರಗಳನ್ನು ನಾವು ನೀಡುತ್ತಾ ಹೋಗುತ್ತೇವೆ. ಅದು ನಮ್ಮೆಲ್ಲರ ಯೋಚನೆಯ (ದಿಮಾಕ್) ನ ಬತ್ತಿಯನ್ನು ಪ್ರಜ್ವಲಿಸಲಿ.
