UPSC Prelims Results: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಮೇ 28, 2023 ರಂದು ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯನ್ನು ನಡೆಸಲಾಗಿತ್ತು. ಇದೀಗ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. UPSC ಪ್ರಿಲಿಮ್ಸ್ ಪರೀಕ್ಷೆಯ ರಿಸಲ್ಟ್ (UPSC Prelims Results) ಚೆಕ್ ಮಾಡುವ ವಿಧಾನ ಇಲ್ಲಿದೆ.
ಅಭ್ಯರ್ಥಿಗಳು www.upsconline.nic.in ಅಥವಾ upsc.gov.in
ಮೂಲಕ ಫಲಿತಾಂಶ ಚೆಕ್ ಮಾಡಬಹುದು. 14,624 ಅಭ್ಯರ್ಥಿಗಳು ಮುಂದಿನ ಸುತ್ತಿಗೆ ಹಾಜರಾಗಲು ಅರ್ಹತೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಯುಪಿಎಸ್ಸಿ ಪ್ರಿಲಿಮ್ಸ್ ರಿಸಲ್ಟ್ ಚೆಕ್ ಮಾಡುವ ವಿಧಾನ ಈ ಕೆಳಗಿನಂತಿದೆ.
ಯುಪಿಎಸ್ಸಿ ಪ್ರಿಲಿಮ್ಸ್ ರಿಸಲ್ಟ್ ಚೆಕ್ ಮಾಡುವ ವಿಧಾನ:-
• ಕೇಂದ್ರ ಲೋಕಸೇವಾ ಆಯೋಗದ ಅಧಿಕೃತ ವೆಬ್‌ಸೈಟ್ upsc.gov.in ಗೆ ಭೇಟಿ ನೀಡಿ.
• ‘Written Result -Civil Services (Preliminary) -Examination, 2023 ’ ಮೇಲೆ ಕ್ಲಿಕ್ ಮಾಡಿ
• ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಕಾಣಿಸುತ್ತದೆ.
• ನಿಮ್ಮ ಹೆಸರು ಅಥವಾ ರೋಲ್ ಸಂಖ್ಯೆಯನ್ನು ಕಂಡುಹಿಡಿಯಲು
ಪಿಡಿಎಫ್ ಫೈಲ್ ಸ್ಕ್ರಾಲ್ ಮಾಡಿ.
• ಫಲಿತಾಂಶಗಳ ಪುಟವನ್ನು ಡೌನ್ಲೋಡ್ ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.
ಇದನ್ನೂ ಓದಿ: D.K Shivakumar: ಡಿ.ಕೆ ಶಿವಕುಮಾರ್ ಕಿಡ್ನಾಪ್, ಯಾವಾಗ ಯಾಕೆ ?!
