Home » Karnataka SSLC Results 2023: ಎಸ್‌ಎಸ್‌ಎಲ್‌ಸಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಕೆ ದಿನಾಂಕ ಯಾವಾಗ? 625ಕ್ಕೆ 625ಅಂಕ ಗಳಿಸಿದ ವಿದ್ಯಾರ್ಥಿಗಳ ಕಂಪ್ಲೀಟ್‌ ವಿವರ ಇಲ್ಲಿದೆ!

Karnataka SSLC Results 2023: ಎಸ್‌ಎಸ್‌ಎಲ್‌ಸಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಕೆ ದಿನಾಂಕ ಯಾವಾಗ? 625ಕ್ಕೆ 625ಅಂಕ ಗಳಿಸಿದ ವಿದ್ಯಾರ್ಥಿಗಳ ಕಂಪ್ಲೀಟ್‌ ವಿವರ ಇಲ್ಲಿದೆ!

by Mallika
1 comment
Karnataka SSLC Results 2023

Karnataka SSLC Results 2023: SSLC ಫಲಿತಾಂಶ ಈಗಾಗಲೇ ಪ್ರಕಟವಾಗಿದೆ. ಈ ಬಾರಿ ನಗರದ ಭಾಗದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ. ನಗರದ ಭಾಗದಲ್ಲಿ ಫಲಿತಾಂಶ ಶೇ 79.62ರಷ್ಟು ದಾಖಲಾಗಿದೆ. ಶೇ,87.00 ರಷ್ಟು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹಾಗಾಗಿ ಈ ಬಾರಿ ನಗರ ಭಾಗದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ವಿಭಾಗದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ.

ಈ ಬಾರಿ 625 ಕ್ಕೆ 625 ಅಂಕ ಪಡೆದ 4 ವಿದ್ಯಾರ್ಥಿಗಳು ಯಾರೆಲ್ಲಾ ಗೊತ್ತೇ?
ಅನುಪನಾ ಶ್ರೀಶೈಲ– ಕುಮಾರೇಶ್ವರ ಶಾಲೆ ಸವದತ್ತಿ.
ಭೀಮನಗೌಡ ಹನುಮಂತಗೌಡ ಪಾಟೀಲ್ – ಆಕ್ಸ್ ಫರ್ಡ್ ಇಂಗ್ಲೀಷ್ ಶಾಲೆ, ಮುದ್ದೇಬಿಹಾಳ.
ಭೂವಿಕಾ ಪೈ – ನ್ಯೂ ಮೆಕಲೆ ಇಂಗ್ಲಿಷ್ ಶಾಲೆ ಹೂಸೂರು ರೋಡ್, ಬೆಂಗಳೂರು.
ಯಶಸ್ ಗೌಡ – ಬಾಲಗಂಗಾಧರನಾಥ ಹೈಸ್ಕೂಲ್, ಚಿಕ್ಕಬಳ್ಳಾಪುರ.

ಮರುಮೌಲ್ಯಮಾಪನ ದಿನಾಂಕ:
ಮರುಮೌಲ್ಯಮಾಪನ ಅರ್ಜಿಗೆ ಮೇ 15 ರಿಂದ ಮೇ 21 ರವರೆಗೆ ಅವಕಾಶ.

ಮೇ 15 ಪೂರಕ ಪರೀಕ್ಷೆ ಅರ್ಜಿಗೆ ಕೊನೆ ದಿನ
ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಮೇ 15 ರಿಂದ ಮೇ 21 ರವರೆಗೆ ಅವಕಾಶ ನೀಡಲಾಗಿದೆ.

ಉತ್ತರ ಪತ್ರಿಕೆ ಇಂದಿನಿಂದಲೇ ಲಭ್ಯ
ಇಂದಿನಿಂದಲೇ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗೆ ಅರ್ಜಿ ಸಲ್ಲಿಸಬಹುದು. ಮೇ 14 ರವರೆಗೆ ಅರ್ಜಿ ಸಲ್ಲಿಸಬಹುದು. ಹಂತ ಹಂತವಾಗಿ ಅರ್ಜಿ ಸ್ವೀಕಾರಗೊಂಡ ನಂತರ ಸ್ಕ್ಯಾನ್‌ ಕಾಪಿಗಳನ್ನು ಅಪ್‌ಲೋಡ್‌ ಮಾಡಲಿದ್ದು, ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕವೇ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಈ ಕುರಿತು ಎಸ್‌ಎಂಎಸ್‌ ಸಹ ಕಳುಹಿಸಲಾಗುತ್ತದೆ. ನಂತರ ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕೆ ಕಳುಹಿಸಬಹುದು.

ಇದನ್ನೂ ಓದಿ:Karnataka SSLC Results 2023: ಈ ಬಾರಿಯ ಎಸ್‌ಎಸ್‌ಎಲ್‌ಸಿ ಜಿಲ್ಲಾವಾರು ಫಲಿತಾಂಶ ಇಲ್ಲಿದೆ! ಎಸ್‌ಎಂಎಸ್‌ ಮೂಲಕ ರಿಸಲ್ಟ್‌ ಚೆಕ್‌ ಮಾಡುವುದು ಹೇಗೆ?

You may also like

Leave a Comment