Home » SSLC Result 2023 Date: ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2023 ಫಲಿತಾಂಶ ನಾಳೆ(ಮೇ.08) ಪ್ರಕಟ!

SSLC Result 2023 Date: ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2023 ಫಲಿತಾಂಶ ನಾಳೆ(ಮೇ.08) ಪ್ರಕಟ!

by Mallika
4 comments
Karnataka SSLC Result 2023

Karnataka SSLC Result 2023: ಮಾಹಿತಿ ಪ್ರಕಾರ ಮೇ 8 ರಂದೇ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಲಿದೆ ಎನ್ನಲಾಗಿದೆ. ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯುವ ಹಿನ್ನೆಲೆ ಮೇ 8 ರಂದು ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿ (KSEEB) ಎಸ್‌ಎಸ್‌ಎಲ್‌ಸಿ ಫಲಿಶಾಂತ ಕುರಿತ ದಿನಾಂಕ ಮತ್ತು ಸಮಯವನ್ನು ಪ್ರಕಟಿಸಿದೆ. ನಾಳೆ ಮೇ.08 ರಂದು ಬೆಳಗ್ಗೆ 11ಗಂಟೆಗೆ ಶಿಕ್ಷಣ ಇಲಾಖೆ ಫಲಿತಾಂಶ ಪ್ರಕಟ ಮಾಡಲಿದೆ.

2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಮುಕ್ತಾಯವಾಗಿದ್ದು, ಅಂಕಗಳ ಕೂಡುವಿಕೆಯ ಕಾರ್ಯ ನಡೆಯುತ್ತದೆ.

ಹಾಗಾಗಿ ಮಾರ್ಚ್‌ 8 ರಂದು ಎಸ್‌ಎಸ್ಎಲ್‌ಸಿ ಫಲಿತಾಂಶ ಪ್ರಕಟಗೊಳ್ಳಲಿದೆ . ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ವೆಬ್‌ಸೈಟ್‌ನಲ್ಲಿ ಮಾತ್ರವಲ್ಲದೇ, ತಮ್ಮ ತಮ್ಮ ಶಾಲೆಗಳಲ್ಲಿಯೂ ಫಲಿತಾಂಶವನ್ನು ನೋಡಬಹುದಾಗಿದೆ.

ವಿದ್ಯಾರ್ಥಿಗಳೇ ಫಲಿತಾಂಶ ಚೆಕ್‌ ಮಾಡಲು ರಿಜಿಸ್ಟ್ರೇಷನ್‌ ನಂಬರ್‌ ಅತ್ಯಗತ್ಯ. ಎಸ್‌ಎಸ್‌ಎಲ್‌ಸಿ ಫಲಿತಾಂಶ ಚೆಕ್‌ ಮಾಡಲು ರೋಲ್‌ ನಂಬರ್‌ ಬೇಕು. ಜೊತೆಗೆ ಜನ್ಮ ದಿನಾಂಕವೂ ಬೇಕು. ರಿಜಿಸ್ಟ್ರೇಷನ್‌ ನಂಬರ್‌ ಅಥವಾ ರೋಲ್‌ ನಂಬರ್‌ ನಮೂದಿಸಿ, ನಂತರ ಜನ್ಮ ದಿನಾಂಕ ಮಾಹಿತಿಯನ್ನು ನೀಡಿದ ನಂತರ ಫಲಿತಾಂಶ ಚೆಕ್‌ ಮಾಡಬೇಕು.

2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ (SSLC Exam 2023) ಕೊನೆಗೊಂಡಿದೆ. ಈಗಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾದ ರಾಜ್ಯದ ವಿದ್ಯಾರ್ಥಿಗಳು ಮತ್ತು ಪೋಷಕರು ಫಲಿತಾಂಶಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಮಾರ್ಚ್ 30 ರಿಂದ ಏಪ್ರಿಲ್ 15 ಈ ಬಾರಿಯ 2023ರ ಕರ್ನಾಟಕ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯನ್ನು(Karnataka SSLC Result 2023) ನಡೆಸಲಾಗಿತ್ತು. ಈ ಪರೀಕ್ಷೆಗೆ ರಾಜ್ಯದ್ಯಾಂತ ಒಟ್ಟು 8.69 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು.

ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ಗಳಾದ karresults.nic.in ಮತ್ತು https://kseab.karnataka.gov.in/ ನಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪರಿಶೀಲನೆ ಮಾಡುವ ವಿಧಾನ ಹೀಗಿದೆ:
# ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧಿಕೃತ ವೆಬ್‌ಸೈಟ್‌ https://kseab.karnataka.gov.in/ ಅಥವಾ karresults.nic.in ಗೆ ಭೇಟಿ ನೀಡಬೇಕು.
# ಈ ಪೇಜ್‌ ಓಪನ್ ಆದ ಬಳಿಕ ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
# ಆ ಬಳಿಕ, ತಮ್ಮ ಎಸ್‌ಎಸ್‌ಎಲ್‌ಸಿ ರಿಜಿಸ್ಟರ್ ನಂಬರ್ ಮತ್ತು ಜನ್ಮ ದಿನಾಂಕ ಮಾಹಿತಿ ಟೈಪ್‌ ಮಾಡಬೇಕು.
# ‘Submit’ ಎಂಬಲ್ಲಿ ಕ್ಲಿಕ್ ಮಾಡಿಕೊಂಡರೆ ಫಲಿತಾಂಶದ ಪೇಜ್‌ ಓಪನ್‌ ಆಗುತ್ತದೆ.
# ಈ ಕಾಪಿ ಅನ್ನು ಡೌನ್‌ಲೋಡ್‌ ಮಾಡಿ ಪ್ರಿಂಟ್ ತೆಗೆದುಕೊಂಡರೆ ಒಳ್ಳೆಯದು.

ಯಾವುದೇ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲ್‌ ಆದರೆ ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳದೆ, ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹಲವಾರು ಆಯ್ಕೆಗಳು ನಿಮ್ಮ ಮುಂದೆ ಇದೆ ಎಂಬುವುದನ್ನು ಮರೆಯಬಾರದು. ಹಾಗಾಗಿ ಯಾವುದೇ ಭರವಸೆಯನ್ನು ಕಳೆದುಕೊಳ್ಳದೆ, ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು. ಪೂರಕ ಪರೀಕ್ಷೆಗೆ ತಯಾರಿ ಮಾಡಿ, ಜಯ ಗಳಿಸಿ, ಆಯ್ಕೆ ನಿಮ್ಮ ಮುಂದೆ ಹಲವಾರಿದೆ.

You may also like

Leave a Comment