KCET 2025 Result: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2025 ರ ಫಲಿತಾಂಶ ಪ್ರಕಟಗೊಂಡಿದೆ. ಸಿಇಟಿ ಎಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಮಾರತಹಳ್ಳಿ ಚೈತನ್ಯ ಸಿಬಿಎಸ್‌ಇ ಶಾಲೆಯ ಭವೇಶ್ ಜಯಂತಿ ಮೊದಲ ರ್ಯಾಂಕ್ ಗಳಿಸಿದ್ದಾರೆ ಎಂದು ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಹೇಳಿದ್ದಾರೆ.
ಸಿಇಟಿ ಎಂಜಿನಿಯರಿಂಗ್ ವಿಭಾಗದಲ್ಲಿ- ಭವೇಶ್ ಜಯಂತಿಗೆ ಮೊದಲ ರ್ಯಾಂಕ್ (99.67%)
ಚೈತನ್ಯ ಟೆಕ್ನೋ ಸ್ಕೂಲ್, ಕನಕಪುರ ರಸ್ತೆ ಉತ್ತರಹಳ್ಳಿ ಶಾಲೆಯ ವಿದ್ಯಾರ್ಥಿ ಸಾತ್ವಿಕ್ ಬಿರಾದರ್ (99.33%) ಎರಡನೇ ರ್ಯಾಂಕ್
ದಿನೇಶ್ ಗೋಮತಿ ಶಂಕರ್ ಮೂರನೇ ರ್ಯಾಂಕ್ (99%) ಪಡೆದಿದ್ದಾರೆ.
ಅಗ್ರಿಕಲ್ಚರ್ ವಿಭಾಗದಲ್ಲಿ ಅಕ್ಷಯ್ ಎಂ ಪ್ರಥಮ ಸ್ಥಾನ, ಸಾಯಿಶ್ ಶರವಣ ಪಂಡಿತ್ ದ್ವಿತೀಯ ಸ್ಥಾನ ಹಾಗೂ ಸುಚಿತ್.ಪಿ. ಪ್ರಸಾದ್ ಮೂರನೇ ಸ್ಥಾನ ಪಡೆದಿದ್ದಾರೆ.
ನರ್ಸಿಂಗ್ ವಿಭಾಗದಲ್ಲಿ-
ಯಲಹಂಕ ನಾರಾಯಣ ಇ-ಟೆಕ್ನೋ ಕಾಲೇಜಿನ ಹರೀಶ್ ರಾಜ್ ಪ್ರಥಮ ಸ್ಥಾನ
ಹೆಚ್ಎಸ್ಆರ್ ಲೇಔಟ್ನ ನ್ಯಾಷನಲ್ ಪಬ್ಲಿಕ್‌ಸ್ಕೂಲ್ ವಿದ್ಯಾರ್ಥಿ ಆತ್ರೇಯ ದ್ವಿತೀಯ ಸ್ಥಾನ
ಮಂಗಳೂರಿನ ವಳಚ್ಚಿಲ್ನ ಎಕ್ಸ್ಪರ್ಟ್ ಕಾಲೇಜಿನ ಶಾಪಲ್ ಶೆಟ್ಟಿ ಮೂರನೇ ರ್ಯಾಂಕ್ ಗಳಿಸಿದ್ದಾರೆ.
ಪಶು ವೈದ್ಯಕೀಯ ವಿಭಾಗದಲ್ಲಿ:
ಯಲಹಂಕದ ನಾರಾಯಣ ಇ-ಟೆಕ್ನೋ ಕಾಲೇಜಿನ ಹರೀಶ್ ರಾಜ್ ಪ್ರಥಮ ರ್ಯಾಂಕ್
ಹೆಚ್ಎಸ್ಆರ್ ಲೇಔಟ್ನ ಆತ್ರೇಯ ನ್ಯಾಷನಲ್ ಪಬ್ಲಿಕ್‌ಸ್ಕೂಲ್ ವಿದ್ಯಾರ್ಥಿ ಆತ್ರೇಯ ದ್ವಿತೀಯ
ಮಂಗಳೂರಿನ ವಳಚ್ಚಿಲ್ನ ಎಕ್ಸ್ಪರ್ಟ್ ಕಾಲೇಜಿನ ಶಾಪಲ್ ಶೆಟ್ಟಿ ಮೂರನೇ ರ್ಯಾಂಕ್ ಗಳಿಸಿದ್ದಾರೆ.
ಡಿ ಪಾರ್ಮ್
ಪ್ರಥಮ – ಆತ್ರೆಯಾ ವೆಂಕಟಚಲಂ, ನ್ಯಾಷನಲ್ ಪಬ್ಲಿಕ್ ಸ್ಕೂಲ್, HSR ಲೇಔಟ್.ಬೆಂಗಳೂರು
ದ್ವಿತೀಯ – ಭವೇಶ್ ಜಯಂತಿ, ಚೈತನ್ಯ ಟೆಕ್ನೊ, ಮಾರತ್ ಹಳ್ಳಿ. ಬೆಂಗಳೂರು
ತೃತೀಯ – ಹರೀಶ್ ರಾಜ್, ನಾರಾಯಣ ಇ ಟೆಕ್ನೊ ದೊಡ್ಡಬೆಟ್ಟಹಳ್ಳಿ, ಬೆಂಗಳೂರು
ಬಿ ಫಾರ್ಮ್ ಟಾಪರ್ಸ್
ಪ್ರಥಮ – ಆತ್ರೆಯಾ ವೆಂಕಟಚಲಂ,ನ್ಯಾಷನಲ್ ಪಬ್ಲಿಕ್ ಸ್ಕೂಲ್, HSR ಲೇಔಟ್.ಬೆಂಗಳೂರು
ದ್ವಿತೀಯ – ಭವೇಶ್ ಜಯಂತಿ, ಚೈತನ್ಯ ಟೆಕ್ನೊ, ಮಾರತ್ ಹಳ್ಳಿ. ಬೆಂಗಳೂರು
ತೃತೀಯ – ಹರೀಶ್ ರಾಜ್ .ಡಿ.ವಿ,ನಾರಾಯಣ ಇ ಟೆಕ್ನೊ ದೊಡ್ಡಬೆಟ್ಟಹಳ್ಳಿ, ಬೆಂಗಳೂರು
ವೆಟರ್ನರಿ ಪ್ರಾಕ್ಟಿಕಲ್
ಪ್ರಥಮ – ರಕ್ಷಿತಾ.ವಿ.ಪಿ,HMR ನ್ಯಾಷನಲ್ ಪಬ್ಲಿಕ್ ಸ್ಕೂಲ್, ಕಲ್ಯಾಣ ನಗರ, ಬೆಂಗಳೂರು
ದ್ವಿತೀಯ – ನಂದನ್,ಟಿ.ಎಸ್- RK ವಿಷನ್ ಪಿಯು ಕಾಲೇಜ್, ಚಿಕ್ಕಬಳ್ಳಾಪುರ
ತೃತೀಯ – ಭುವನೇಶ್ವರಿ,ಶ್ರೀ ಉಮಾಮಹೇಶ್ವರಿ ಪಿಯು ಕಾಲೇಜ್,ರಾಯಚೂರು
ಅಗ್ರಿಕಲ್ಚರ್ ಪ್ರಾಕ್ಟಿಕಲ್
ಕೀರ್ತನಾ ಪ್ರಥಮ- ಶಾರದಾಂಬ ಪಿಯು ಕಾಲೇಜ್,ತುಮಕೂರು
ರಕ್ಷಿತಾ ದ್ವಿತೀಯ- HMR ನ್ಯಾಷನಲ್ ಪಿಯು ಕಾಲೇಜ್, ಕಲ್ಯಾಣ ನಗರ, ಬೆಂಗಳೂರು
ಅಶ್ವಿನಿ ತೃತೀಯ ಯಕ್ಕುಂಡಿ- ಎಕ್ಸಲೆನ್ಸ್ ಸೈನ್ಸ್ ಪಿಯು ಕಾಲೇಜ್, ವಿಜಯಪುರ
ಸಿಇಟಿ ಪರೀಕ್ಷಾ ಸಂದರ್ಭದಲ್ಲಿ ಜನಿವಾರ ತೆಗೆದ ವಿಚಾರವವನ್ನು ಸಚಿವ ಸುಧಾಕರ್ ಉಲ್ಲೇಖ ಮಾಡಿದ್ದು, ಈ ಘಟನೆ ಉದ್ದೇಶಪೂರ್ವಕವಾಗಿ ಆಗಿದ್ದಲ್ಲ. ಸಿಬ್ಬಂದಿ ಎಡವಟ್ಟಿನಿಂದ ಆಗಿದೆ. ಗದಗದ ಸುಚಿವೃತ ಕುಲಕರ್ಣಿ ವಿದ್ಯಾರ್ಥಿಗೆ ಈ ವಿಚಾರದಲ್ಲಿ ನ್ಯಾಯ ದೊರಕಿಸಿದ್ದೇವೆ. ಸರಾಸರಿ ಅಂಕ ಹಂಚಿಕೆ ಮಾಡುವ ಮೂಲಕ ರ್ಯಾಂಕ್ ನೀಡಲಾಗಿದೆ. ಆತನಿಗೆ 2 ಲಕ್ಷದ 6 ಸಾವಿರ ರ್ಯಾಂಕ್ ಬಂದಿದೆ ಎಂದು ಸಚಿವರ ಫಲಿತಾಂಶ ಪ್ರಕಟಿಸುವ ಸಂದರ್ಭದಲ್ಲಿ ಹೇಳಿದ್ದಾರೆ.
KCET 2025 ಫಲಿತಾಂಶದ ಲಿಂಕ್ ಅನ್ನು ಇಂದು (ಮೇ 24 ರಂದು ಮಧ್ಯಾಹ್ನ 2:00 ಗಂಟೆಗೆ) ಅಧಿಕೃತ ವೆಬ್‌ಸೈಟ್‌ನಲ್ಲಿ ಸಕ್ರಿಯಗೊಳಿಸಲಾಗುತ್ತದೆ. ಕರ್ನಾಟಕ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಬೆಳಿಗ್ಗೆ ಪತ್ರಿಕಾಗೋಷ್ಠಿಯ ಮೂಲಕ KEA KCET ಫಲಿತಾಂಶಗಳನ್ನು ಪ್ರಕಟಿಸಿದ್ದು, ಕರ್ನಾಟಕ ಪದವಿಪೂರ್ವ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು KEA ಯ ಅಧಿಕೃತ ವೆಬ್‌ಸೈಟ್ kea.kar.nic.in ಅಥವಾ cetonline.karnataka.gov.in ಮೂಲಕ ಫಲಿತಾಂಶಗಳನ್ನು ಪ್ರಕಟಿಸಿದಾಗ ಪರಿಶೀಲಿಸಬಹುದು.
ಸಿಇಟಿ ಫಲಿತಾಂಶ ಪರಿಶೀಲಿಸುವುದು ಹೇಗೆ?
ಮೊದಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಪೋರ್ಟಲ್ https://cetonline.karnataka.gov.in/kea ಗೆ ಭೇಟಿ ನೀಡಿ
ಮುಖಪುಟದಲ್ಲಿ KCET ಫಲಿತಾಂಶಗಳು 2024 ಎಂಬ ಲಿಂಕನ್ನು ಕ್ಲಿಕ್ ಮಾಡಿ
ನಿಮ್ಮ ಹೆಸರಿನ ಮೊದಲ ನಾಲ್ಕು ಅಕ್ಷರಗಳೊಂದಿಗೆ ನಿಮ್ಮ KCET ನೋಂದಣಿ ಸಂಖ್ಯೆಯನ್ನು ನಮೂದು ಮಾಡಬೇಕು.
ನಂತರ Submit ಮೇಲೆ ಕ್ಲಿಕ್ ಮಾಡಿ.
ಇಂದು ಫಲಿತಾಂಶಗಳು ಹೊರಬಂದ ನಂತರ, ಮುಂದಿನ ಪ್ರಮುಖ ಹಂತವೆಂದರೆ ಕೌನ್ಸೆಲಿಂಗ್ ಪ್ರಕ್ರಿಯೆ. ಕೆಇಎ ಜೂನ್‌ನಲ್ಲಿ ಕೆಸಿಇಟಿ 2025 ಕೌನ್ಸೆಲಿಂಗ್ ಅನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಅರ್ಹತೆ ಪಡೆದ ಅಭ್ಯರ್ಥಿಗಳು ಆನ್‌ಲೈನ್ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಬೇಕಾಗುತ್ತದೆ, ಇದರಲ್ಲಿ ನೋಂದಣಿ, ಆಯ್ಕೆ ಭರ್ತಿ, ಸೀಟು ಹಂಚಿಕೆ ಮತ್ತು ದಾಖಲೆ ಪರಿಶೀಲನೆಯಂತಹ ಹಂತಗಳು ಸೇರಿವೆ.
