NEET Exam: ಈ ಬಾರಿ NEET ಪರೀಕ್ಷೆ (NEET Exam) ಬರೆಯಲಿರುವ ವಿದ್ಯಾರ್ಥಿಗಳಿಗೆ (Students) ಮಹತ್ವದ ಮಾಹಿತಿ ಇಲ್ಲಿದೆ. ಸದ್ಯ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನೀಟ್ ಪರೀಕ್ಷೆಯನ್ನು ನಡೆಸುತ್ತಿದ್ದು, ಈ NEET ಪರೀಕ್ಷೆಯು ಮೇ 7 ರಂದು ನಡೆಯಲಿದೆ. ಪ್ರಶ್ನೆ ಪತ್ರಿಕೆ ಕನ್ನಡ ಸೇರಿದಂತೆ ಹದಿಮೂರು ಭಾಷೆಗಳಲ್ಲಿ ಇರಲಿದೆ. ಪರೀಕ್ಷೆಯ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ(ನೀಟ್) ಪ್ರವೇಶ ಪತ್ರವನ್ನು ಪರೀಕ್ಷೆಗೆ (Neet exam hall ticket) ಮೂರು ದಿನ ಮುಂಚಿತವಾಗಿ ಬಿಡುಗಡೆ ಮಾಡಲಾಗುತ್ತದೆ. ಪರೀಕ್ಷೆಗೆ ನೋಂದಣಿ ಮಾಡಿರುವ ವಿದ್ಯಾರ್ಥಿಗಳು ಪರೀಕ್ಷಾ ಸೂಚನಾ ಪತ್ರವನ್ನು ಈ ವೆಬ್ ಸೈಟ್’ಗೆ https://neet.nta.nic.in ಭೇಟಿ ನೀಡಿ, ಡೌನ್ಲೋಡ್ ಮಾಡಿಕೊಳ್ಳಬಹುದು.
ಈ ಬಾರಿ ಪರೀಕ್ಷೆಗೆ ಸುಮಾರು 21 ಲಕ್ಷ ವಿದ್ಯಾರ್ಥಿಗಳು ನೋಂದಾವಣೆ ಮಾಡಿದ್ದಾರೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗೆ ತೆರಳುವ ಮುನ್ನ ಈ ವಿಚಾರ ತಿಳಿದುಕೊಳ್ಳಿ. ಹಾಗೂ ಈ ಸೂಚನೆಗಳನ್ನು ಪಾಲಿಸಿಬೇಕು. ಯಾವುದೆಲ್ಲಾ ಎಂದರೆ, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಕುರ್ತಾ ರೀತಿಯ ಬಟ್ಟೆಯನ್ನು ಧರಿಸಬಾರದು. ಹೆಣ್ಣು ಮಕ್ಕಳು ಕಿವಿ ಓಲೆ, ನೆಕ್ಲೆಸ್, ಉಂಗುರ (Ring) ಸೇರಿದಂತೆ ಇತರೆ ಚಿನ್ನಾಭರಣಗಳನ್ನು ಧರಿಸುವಂತಿಲ್ಲ ಎಂದು ತಿಳಿಸಲಾಗಿದೆ.
ಇದನ್ನೂ ಓದಿ:Ramya : ಅಂಬರೀಶ್ ಅಂತಿಮ ಸಂಸ್ಕಾರಕ್ಕೆ ರಮ್ಯಾ ತಪ್ಪಿಸಿಕೊಂಡದ್ದು ಯಾಕೆ ಗೊತ್ತೇ, ಸತ್ಯ ಬಹಿರಂಗ !
