Home » Open Book Exam: 8 ರಿಂದ 10 ನೇ ತರಗತಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ತೆರೆದ ಪುಸ್ತಕ ಪರೀಕ್ಷೆ

Open Book Exam: 8 ರಿಂದ 10 ನೇ ತರಗತಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ತೆರೆದ ಪುಸ್ತಕ ಪರೀಕ್ಷೆ

0 comments
Open Book Exam

Open Book Exam: 2024-25 ರ ಶೈಕ್ಷಣಿಕ ವರ್ಷದಲ್ಲಿ 8 ರಿಂದ 10 ನೇ ತರಗತಿ ಮಕ್ಕಳಿಗೆ ತೆರೆದ ಪುಸ್ತಕ ಪರೀಕ್ಷೆ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತೀರ್ಮಾನ ಮಾಡಿದೆ.

ಇದನ್ನೂ ಓದಿ: Madhu Bangarappa: ಹಳೆಯ ಕತ್ತರಿಗೆ ಹೊಳಪಿನ ಸಾಣೆ ಕೊಡಿಸಿ ಶಿಕ್ಷಣ ಸಚಿವರ ಹೇರ್ ಸ್ಟೈಲ್ ಬದಲಿಸಲು ಸವಿತ ಸಮಾಜ ರೆಡಿ, ಬಿಜೆಪಿಯಿಂದ ದೇಣಿಗೆ ಸಂಗ್ರಹ ಬೇರೆ !

ಈ ಕುರಿತು ಇಲಾಖೆ ತನ್ನ ಶೈಕ್ಷಣಿಕ ಮಾರ್ಗದರ್ಶಿಯಲ್ಲಿ ಉಲ್ಲೇಖ ಮಾಡಿದೆ. ಈ ವರ್ಷದಿಂದ ಸಿಬಿಎಸ್‌ಇ ಶಾಲೆಗಳಲ್ಲಿ 9 ರಿಂದ 12 ನೇ ತರಗತಿಯ ತನಕ ಪ್ರಾಯೋಗಿಕವಾಗಿ ತೆರೆದ ಪುಸ್ತಕ ಪರೀಕ್ಷೆ ನಡೆಸುವ ಪ್ರಸ್ತಾವನೆ ಚರ್ಚೆಯಲ್ಲಿರುವ ಕುರಿತು ವರದಿಯಾಗಿದೆ.

ಇದನ್ನೂ ಓದಿ: Astro Tips: ಮನೆಯ ಮುಂದೆ ಹಾಕುವ ಡೋರ್ ಮ್ಯಾಟ್ ಗು ಇದೆ ವಾಸ್ತು ಟಿಪ್ಸ್, ಇಲ್ಲಿದೆ ನೋಡಿ ಡೀಟೇಲ್ಸ್

ವಿಷಯವಾರು 25 ಅಂಕಗಳಿಗೆ ಪ್ರಶ್ನೆ ಪತ್ರಿಕೆ ತಯಾರು ಮಾಡಿ, ಸಮಯ ನಿಗದಿಪಡಿಸಿ ವಿದ್ಯಾರ್ಥಿಗಳಿಗೆ ಪುಸ್ತಕ ನೋಡಿ ಉತ್ತರಿಸಲು ಅವಕಾಶ ನೀಡಬೇಕು ಎಂದು ಶೈಕ್ಷಣಿಕ ಮಾರ್ಗದರ್ಶಿಯಲ್ಲಿ ಹೈಸ್ಕೂಲ್‌ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳು ಈ ತೆರೆದ ಪುಸ್ತಕ ಪರೀಕ್ಷೆ ಇದ್ದರೆ ಪುಸ್ತಕ ಓದುವುದನ್ನು ಮಾಡಬೇಕು. ನೋಟ್‌ಬುಕ್‌, ಪಠ್ಯ, ಸಂಬಂಧಿತ ರೆಫರೆನ್ಸ್‌ ಬುಕ್‌ಗಳಲ್ಲಿ ಯಾವ ವಿಷಯ ಎಲ್ಲಿದೆ ಎಂಬುವುದರ ಜ್ಞಾನ ಇರಬೇಕು. ಇದು ಮಕ್ಕಳಲ್ಲಿ ಪಠ್ಯ ಓದುವ ಮನೋಭಾವವನ್ನು ಹೆಚ್ಚಿಸುತ್ತದೆ.

ಈ ಪರೀಕ್ಷೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ, ಸಂಕಲನಾತ್ಮಕ ಮೌಲ್ಯಾಂಕನ ಅಥವಾ ರೂಪಣಾತ್ಮಕ ಮೌಲ್ಯಾಂಕನ ಇದರ ಭಾಗವಲ್ಲ. ಇದು ಶೈಕ್ಷಣಿಕ ಚಟುವಟಿಕೆಯ ಒಂದು ಭಾಗ ಎಂದು ಹೇಳಲಾಗಿದೆ.

You may also like

Leave a Comment