Home » ವಿಶ್ವವಿದ್ಯಾನಿಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆ!! ಅಭ್ಯರ್ಥಿಗಳ ಫಲಿತಾಂಶ ಪ್ರಕಟ-ಶೀಘ್ರ ಪ್ರವೇಶಾತಿ ಆರಂಭ!!

ವಿಶ್ವವಿದ್ಯಾನಿಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆ!! ಅಭ್ಯರ್ಥಿಗಳ ಫಲಿತಾಂಶ ಪ್ರಕಟ-ಶೀಘ್ರ ಪ್ರವೇಶಾತಿ ಆರಂಭ!!

0 comments

ನವದೆಹಲಿ: ಆನ್ಲೈನ್ ಮೂಲಕ ನಡೆದಿದ್ದ ವಿಶ್ವವಿದ್ಯಾನಿಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಶೀಘ್ರವೇ ದಾಖಲಾತಿ ಪ್ರಕ್ರಿಯೆ ಆರಂಭಗೊಳ್ಳಲಿದೆ.

ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಯುಇಟಿ-ಪಿಜಿ)ಯನ್ನು ಬಿ.ಎಚ್.ಯು ವಿಶ್ವವಿದ್ಯಾನಿಲಯದಿಂದ 3.5 ಲಕ್ಷ ವಿದ್ಯಾರ್ಥಿಗಳು ಹಾಗೂ ಜೆ.ಎನ್.ಯು ವಿಶ್ವವಿದ್ಯಾನಿಲಯಗಳ 2.3 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ಒಟ್ಟು 6.07 ಲಕ್ಷ ಅಭ್ಯರ್ಥಿಗಳು ಪಾಲ್ಗೊಂಡಿದ್ದು, ಹೆಚ್ಚು ಬಹು ಆಯ್ಕೆಯ ಪ್ರಶ್ನೆಗಳನ್ನೇ ಕೇಳಲಾಗಿತ್ತು ಎನ್ನಲಾಗಿದೆ.

ಪರೀಕ್ಷೆ ನಡೆಸಿದ ಫಲಿತಾಂಶದ ಅಡಿಯಲ್ಲಿ ಕೇಂದ್ರ ರಾಜ್ಯ ಮತ್ತು ಖಾಸಗಿ ವಿಶ್ವವಿದ್ಯಾನಿಲಯಗಳ ಸಹಿತ ಒಟ್ಟು 60 ವಿಶ್ವವಿದ್ಯಾನಿಲಯಗಳನ್ನು ಆಯ್ಕೆ ಮಾಡಲಾಗಿದ್ದು, ಶೀಘ್ರ ಪ್ರವೇಶಾತಿ ಆರಂಭಿಸುವಂತೆ ಯು.ಜಿ.ಸಿ ಆದೇಶ ಹೊರಡಿಸಿದೆ.

You may also like

Leave a Comment