Home » PU question Paper Leak: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಗಣಿತ ಪೂರ್ವಸಿದ್ಧತಾ ಪರೀಕ್ಷೆ: ವಾಟ್ಸಾಪ್‌ನಲ್ಲಿ ಪ್ರಶ್ನೆ ಪತ್ರಿಕೆ ಲೀಕ್!

PU question Paper Leak: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಗಣಿತ ಪೂರ್ವಸಿದ್ಧತಾ ಪರೀಕ್ಷೆ: ವಾಟ್ಸಾಪ್‌ನಲ್ಲಿ ಪ್ರಶ್ನೆ ಪತ್ರಿಕೆ ಲೀಕ್!

0 comments
Open Book Exam

PU question Paper Leak:ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪೂರ್ವಸಿದ್ಧತಾ ಗಣಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ಪರೀಕ್ಷೆಗೂ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದೆ.

ಹೌದು, ರಾಜ್ಯ ಪಿಯು ಮಂಡಳಿ ನಡೆಸುತ್ತಿರುವ ದ್ವಿತೀಯ ಪಿಯುಸಿ ‘ಗಣಿತ’ (Mathematics) ವಿಷಯದ ಪ್ರಶ್ನೆ ಪತ್ರಿಕೆಯು ಪರೀಕ್ಷೆಗೂ ಮೊದಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಪೋಷಕರು ಮತ್ತು ಪ್ರಾಮಾಣಿಕ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ.ಇಂದು ರಾಜ್ಯಾದ್ಯಂತ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗಣಿತ ಪರೀಕ್ಷೆ ನಿಗದಿಯಾಗಿತ್ತು. ಆದರೆ, ಈ 80 ಅಂಕಗಳ ಪ್ರಶ್ನೆ ಪತ್ರಿಕೆಯು ನಿನ್ನೆ ಸಂಜೆಯೇ ವಿದ್ಯಾರ್ಥಿಗಳ ವಾಟ್ಸಾಪ್ (WhatsApp) ಗ್ರೂಪ್‌ಗಳಲ್ಲಿ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗಿದೆ.

ವಿಶೇಷವೆಂದರೆ, ಲೀಕ್ ಆಗಿರುವ ಪತ್ರಿಕೆಯಲ್ಲಿರುವ 47 ಪ್ರಶ್ನೆಗಳೂ ಇಂದು ಪರೀಕ್ಷಾ ಕೇಂದ್ರಗಳಲ್ಲಿ ನೀಡಲಾದ ಪತ್ರಿಕೆಯಲ್ಲಿ ಯಥಾವತ್ತಾಗಿ ಇರುವುದು ದೃಢಪಟ್ಟಿದೆ.ಮಂಡಳಿಯ ನಡೆಗೆ ಆಕ್ಷೇಪಪ್ರಶ್ನೆ ಪತ್ರಿಕೆ ನಿನ್ನೆಯೇ ಲೀಕ್ ಆಗಿದ್ದರೂ, ಅದನ್ನು ಗಮನಿಸದ ಅಥವಾ ನಿರ್ಲಕ್ಷಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆಯು ಅದೇ ಪ್ರಶ್ನೆ ಪತ್ರಿಕೆಯ ಮೂಲಕ ಇಂದು ಪರೀಕ್ಷೆ ನಡೆಸುತ್ತಿದೆ. ಇದು ಪರೀಕ್ಷಾ ಮಂಡಳಿಯ ಕಾರ್ಯವೈಖರಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ‘ತಿಂಗಳುಗಟ್ಟಲೆ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳಿಗೆ ಈ ಲೀಕ್ ದೆಸೆಯಿಂದ ಅನ್ಯಾಯವಾಗುತ್ತಿದೆ. ಹಣ ನೀಡಿ ಪತ್ರಿಕೆ ಪಡೆದವರು ಸುಲಭವಾಗಿ ಅಂಕ ಗಳಿಸುತ್ತಾರೆ’ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

You may also like