41
Puttur: ಪಿಎಂಶ್ರೀ ವೀರಮಂಗಲ ಶಾಲೆಗೆ ನಗರಾಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿ ಐಎಎಸ್ ಅಧಿಕಾರಿ ಕೃಷ್ಣಮೂರ್ತಿ ಭೇಟಿ ನೀಡಿದರು. ಶಾಲೆಯ ಪರಿಸರ ಸ್ವಚ್ಛತೆ, ಮಕ್ಕಳ ಶೈಕ್ಷಣಿಕ ಪ್ರಗತಿ ಶಾಲಾ ನಿರ್ವಹಣೆ ಯನ್ನು ವೀಕ್ಷಿಸಿ ಮುಕ್ತ ಕಂಠದಿಂದ ಶ್ಲಾಘಿಸಿದರು. ಸರ್ಕಾರಿ ಶಾಲೆಯು ಮಾದರಿಯಾಗಿ ಹೇಗೆ ಕಾರ್ಯ ಮಾಡುತ್ತದೆ ಎನ್ನುವುದಕ್ಕೆ ವೀರಮಂಗಲ ಶಾಲೆ ರಾಜ್ಯಕ್ಕೆ ಮಾದರಿಯಾಗಿದೆ ಎಂದು ನುಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣು ಪ್ರಸಾದ್, ಸಮಾಜ ಕಲ್ಯಾಣಾಧಿಕಾರಿ ಜೋಸೆಪ್, ತಾಲೂಕು ಪಂಚಾಯತ್ ಎನ್ ಆರ್ ಎಂ ಎಲ್ ವಿಭಾಗದ ಕಾರ್ಯಕ್ರಮ ಸಂಯೋಜನಾಧಿಕಾರಿ ಜಗತ್ ಭೇಟಿ ಸಂದರ್ಭದಲ್ಲಿ ಜೊತೆಗಿದ್ದರು.ಶಾಲಾ ಮುಖ್ಯಗುರು ತಾರಾನಾಥ ಪಿ ಸ್ವಾಗತಿಸಿದರು. ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು.
