Puttur: ಅನುಭವಗಳನ್ನು ಅನುಭವಿಸಿದಾಗ ಮಾತ್ರ ಅನುಭವ ಉಂಟಾಗುತ್ತದೆ ಎಂಬ ಮಾತು ಅನುಭಾವತ್ಮಕ ಕ್ರೀಡಾಕ್ಷೇತ್ರ ಭೇಟಿಯಿಂದ ದೃಢವಾಯಿತು.
* ತರಗತಿ ಕೋಣೆಯೊಳಗಿನ ಓದು ಹೊರಗಿನ ಪ್ರಪಂಚಕ್ಕೆ ಸೇತುವೆಯಾಗುತ್ತದೆ.* ಪ್ರತ್ಯಕ್ಷ ಅನುಭವಗಳು ಪರಿಪೂರ್ಣತೆಗೆ ಸಾಕ್ಷಿಯಾಗುತ್ತದೆ* ಕೋಶ ಓದಿ ನೋಡು ದೇಶ ಸುತ್ತಿ ನೋಡು ಎನ್ನುವ ಉಕ್ತಿಗೆ ಸರಿಹೊಂದುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಪಿಎಂಶ್ರೀ ಶಾಲಾ ಮಕ್ಕಳ ಕ್ರೀಡಾಕ್ಷೇತ್ರ ಭೇಟಿ ಕಾರ್ಯಕ್ರಮ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲೆಯ 20 ಪಿಎಂಶ್ರೀ ಶಾಲೆಯ 100 ಕ್ರೀಡಾ ವಿದ್ಯಾರ್ಥಿಗಳಿಗಾಗಿ ಅನುಭಾವತ್ಮಕ ಕ್ರೀಡಾ ಕ್ಷೇತ್ರ ಭೇಟಿಯನ್ನು ದಿನಾಂಕ 12/01/2026 ರಂದು ದಕ್ಷಿಣ ಕನ್ನಡ ಸಮಗ್ರ ಶಿಕ್ಷಣ ಕರ್ನಾಟಕ ಇವರ ಉಸ್ತುವಾರಿಯಲ್ಲಿ ಆಯೋಜಿಸಲಾಗಿತ್ತು. ಮಕ್ಕಳು ಅಧಿಕೃತವಾಗಿ ಮಾಹಿತಿ ಪಡೆಯಬೇಕೆಂದು NITK ಸುರತ್ಕಲ್ ಮಂಗಳೂರು, ಮಂಗಳಾ ಸ್ಟೇಡಿಯಂ ಮಂಗಳೂರು ಇಲ್ಲಿಗೆ ಭೇಟಿ ನೀಡಿ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಚಟುವಟಿಕೆ ಗಳನ್ನು , ವಿವಿಧ ಆಟಗಳ ಕೋರ್ಟ್ ಗಳನ್ನು ವೀಕ್ಷಣೆ ಮಾಡಿಸಲಾಯಿತು. ಶಾಲಾ ಶಿಕ್ಷಣ ಇಲಾಖೆಯ ಮಾನ್ಯ ಉಪ ನಿರ್ದೇಶಕರಾದ ಶ್ರೀ ಶಶಿಧರ್ ಜಿ ಎಸ್ ಇವರ ಮಾರ್ಗದರ್ಶನದಲ್ಲಿ ನಡೆದ ಈ ಕ್ಷೇತ್ರ ಭೇಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಪ ಯೋಜನಾಸಮನ್ವಯಾಧಿಕಾರಿ ಡಾ.ಸುಮಂಗಲ ನಾಯಕ್, ಎಪಿಸಿ ಗಳಾದ ಶ್ರೀಮತಿ ವಿದ್ಯಾ,ಶ್ರೀಮತಿ ಶೋಬಾ, ಎಸ್ ಎಸ್ ಕೆಯ ಶ್ರೀಮತಿ ಗಾಯತ್ರಿ ಇವರು ಉಪಸ್ಥಿತರಿದ್ದರು.
ಒಂದು ದಿನ ನಡೆದ ಕ್ರೀಡಾ ಕ್ಷೇತ್ರ ಭೇಟಿಯು ಮಕ್ಕಳಿಗೆ ಉಪಯುಕ್ತ ಕ್ರೀಡಾ ಮಾಹಿತಿ ದೊರಕಿಸಿತು. ಉಚಿತ ಬಸ್,ಊಟ ತಿಂಡಿ ನೀಡಿ ಮಕ್ಕಳಿಗೆ ಟಿ-ಶರ್ಟ್ ಕ್ಯಾಪ್ ,ಪುಸ್ತಕ ಪೆನ್ನು ನೀಡಲಾಗಿತ್ತು. ಎಲ್ಲಾ ಪಿಎಂಶ್ರೀ ಶಾಲೆಗಳ 20 ಉಸ್ತುವಾರಿ ಶಿಕ್ಷಕರು ಪ್ರತಿ ತಾಲೂಕಿನಿಂದ ಒಬ್ಬರು ನೋಡೆಲ್ ಅಧಿಕಾರಿಗಳು ಭಾಗವಹಿಸಿ ಕ್ಷೇತ್ರ ಭೇಟಿಯ ಮೆರಗನ್ನು ಹೆಚ್ಚಿಸಿದರು.ಮಕ್ಕಳ ಜೊತೆ ಅಧಿಕಾರಿಗಳು ಭಾಗವಹಿಸಿ ಪ್ರೇರಣೆ ನೀಡಿರುವುದು ಕ್ಷೇತ್ರ ಭೇಟಿಯ ಘನತೆ ಹೆಚ್ಚಿಸಿತು. ಮಕ್ಕಳು ಹುರುಪಿನಿಂದ ಪಾಲ್ಗೊಂಡರು.
