SSLC Exam: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಬ್ಲೂಪ್ರಿಂಟ್ ಸಿದ್ಧವಾಗಿದೆ. 100 ಅಂಕಗಳ ಪ್ರಶ್ನೆ ಪತ್ರಿಕೆ ಹೇಗಿರಲಿದೆ? 100 ಕ್ಕೆ ಎಷ್ಟು ಅಂಕ ಬಂದ್ರೆ ತೇರ್ಗಡೆ? ಎಷ್ಟು ಆಂತರಿಕ ಅಂಕಗಳನ್ನು ಪಡೆಯಬೇಕು? ಎಷ್ಟು ಲಿಖಿತ ಅಂಕ ಬಂದರೆ ಪಾಸ್ ಎಂಬ ಕುರಿತು ಸಂಪೂರ್ಣ ನೀಲಿ ನಕಾಶೆಯನ್ನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿದ್ಧಪಡಿಸಿದೆ.
ಈ ಪರೀಕ್ಷೆಯ ತಯಾರಿಯು ಮಕ್ಕಳಿಗೆ ನೆರವಾಗಲಿದೆ. ಬ್ಲೂಪ್ರಿಂಟ್‌ನಿಂದ ಮಕ್ಕಳಿಗೆ ಯಾವೆಲ್ಲ ವಿಷಯಕ್ಕೆ ಹೇಗೆ ತಯಾರಿ ಮಾಡಬೇಕು? ಎಷ್ಟು ಪ್ರಶ್ನೆಗಳು ಬರಲಿದೆ? ಎಷ್ಟು ಅಂಕದ ಎಷ್ಟು ಪ್ರಶ್ನೆಗಳು ಇರಲಿದೆ? ಎನ್ನುವ ಕುರಿತು ದೊರಕಲಿದೆ.
ನಾಲ್ಕು ಮಾದರಿ ಪ್ರಶ್ನೆ ಪತ್ರಿಕೆ ನೀಡಲಾಗಿದೆ. ಪರೀಕ್ಷೆಯ ಮಾನದಂಡದಲ್ಲಿ ಮಾತ್ರ ಬದಲಾವಣೆ ಮಾಡಲಾಗಿದ್ದು, ಬ್ಲೂಪ್ರಿಂಟ್ ಯಾವುದೇ ಇಲ್ಲ. ಕಳೆದ ವರ್ಷದ್ದಂತೆ ರಚನೆ ಮಾಡಿದ್ದು, ಇದು ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತಯಾರಿ ಮಾಡಲು ನೆರವಾಗಲಿದೆ ಎಂದು ಸರಕಾರಿ ಪ್ರೌಢ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ದೇವರಾಜ್ ಹೇಳಿದ್ದಾರೆ.
