SSLC -PU Exam: ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಕುರಿತು ವರ್ಷಕ್ಕೆ ಮೂರು ಪರೀಕ್ಷೆ ನಡೆಸುವ ಕುರಿತು ವ್ಯವಸ್ಥೆ ಪರಿಷ್ಕರಣೆ ಮಾಡಿ ಪರೀಕ್ಷೆ-3 ನ್ನು ಕೈ ಬಿಡುವ ಕುರಿತು ಸರಕಾರ ಚಿಂತನೆ ಮಾಡಿರುವ ಕುರಿತು ವರದಿಯಾಗಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಗೆ ಶಾಲಾ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಪರೀಕ್ಷೆ -3 ಎಷ್ಟು ಅಗತ್ಯ ಮತ್ತು ಅನಗತ್ಯ ಎಂದು ಚರ್ಚೆ ಮಾಡಿ ವರದಿ ನೀಡಲು ಸೂಚನೆ ನೀಡಿರುವ ಕುರಿತು ವರದಿಯಾಗಿದೆ. ಈ ಕುರಿತು ಪಟ್ಟಿ ಸಿದ್ಧವಾಗುತ್ತಿದೆ.
ಜೂನ್/ಜುಲೈನಲ್ಲಿ ಪರೀಕ್ಷೆ -3 ನ್ನು ನಡೆಸಲಾಗುತ್ತಿದ್ದು, ಮುಂಗಾರು ಮಳೆ ಬಿರುಸಾಗಿರುವ ಕಾರಣ ಕರಾವಳಿ, ಮಲೆನಾಡು ಹಾಗೂ ಇನ್ನಿತರ ಭಾಗಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಬರಲು ಕಷ್ಟ ಪಡುವಂತಾಗಿದೆ.
ಪರೀಕ್ಷೆ-1 ರಲ್ಲಿ ಪ್ರತಿ ಹೋಬಳಿ, ಗ್ರಾಪಂ ಮಟ್ಟದಲ್ಲಿ ಪರೀಕ್ಷಾ ಕೇಂದ್ರಗಳು ಲಭ್ಯವಿರುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಮೂರರಿಂದ ನಾಲ್ಕು ಕಿ.ಮೀ. ದೂರ ಹೋಗಬೇಕು. ಆದರೆ ಪರೀಕ್ಷೆ-3 ರಲ್ಲಿ ತಾಲೂಕು ಮಟ್ಟದಲ್ಲಿ ಪರೀಕ್ಷಾ ಕೇಂದ್ರಗಳು ಇರುವುದರಿಂದ ಮಕ್ಕಳು ಪರೀಕ್ಷೆಗೆ 30 ಕಿ.ಮೀ ವರೆಗೆ ಪ್ರಯಾಣ ಮಾಡಬೇಕಾಗುತ್ತದೆ.
ಪರೀಕ್ಷೆ 3 ಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ. ಈ ಪರೀಕ್ಷೆಯಲ್ಲಿ ಪಾಸಾದರೂ ಉನ್ನತ ಶಿಕ್ಷಣಕ್ಕೆ ಎರಡ್ಮೂರು ತಿಂಗಳು ತಡವಾಗುತ್ತದೆ. ತಮ್ಮಿಷ್ಟ ಕೋರ್ಸಿಗೆ ಸೇರಲು ಅಸಾಧ್ಯವಾಗುತ್ತದೆ. ಸಿಇಟಿ ಪ್ರವೇಶ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅವಕಾಶ ತಪ್ಪಬಹುದು. ಈ ಎಲ್ಲಾ ಕಾರಣದಿಂದ ಪರೀಕ್ಷೆ-3 ನ್ನು ಕೈ ಬಿಡಬಹುದು ಎನ್ನಲಾಗಿದೆ.
ಆದರೂ ಪರೀಕ್ಷೆ-3 ಬರೆಯುವವರ ಸಂಖ್ಯೆ ಕಡಿಮೆ ಇರಬಹುದು. ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗಿಂತ ಪುನರಾವರ್ತಿತ (ರಿಪೀಟರ್ಸ್), ಖಾಸಗಿ ಅಭ್ಯರ್ಥಿಗಳು ಇರುತ್ತಾರೆ. ವೃತ್ತಿ ಬದುಕಿಗೆ ಸಹಕಾರಿ ಹಾಗೂ ಈ ಪರೀಕ್ಷೆ ಇರಲಿ ಎನ್ನುವುದೂ ಒಂದು ಕಾರಣವಿದೆ. ಅಂತಿಮವಾಗಿ ಸರಕಾರ ತೀರ್ಮಾನ ಯಾವ ರೀತಿ ಇರಲಿದೆ ಎನ್ನುವುದು ಕಾದು ನೋಡಬೇಕಿದೆ.
ಇತ್ತೀಚೆಗೆ ಬಂದ ವರದಿ ಪ್ರಕಾರ ಸರಕಾರ ಎಸ್ಸೆಸ್ಸೆಲ್ಸಿಯಲ್ಲಿ ಸಿಬಿಎಸ್‌ಇ ಮಾದರಿ ಪರೀಕ್ಷಾ ವ್ಯವಸ್ಥೆ ಜಾರಿಗೆ ಮಾಡುವ ಚಿಂತನೆ ಮಾಡುತ್ತಿದೆ. ಒಂದು ವೇಳೆ ಇದು ಈ ವರ್ಷವೇ ಜಾರಿಯಾದರೆ ಸಿಬಿಎಸ್‌ಇ ಮಾದರಿ ಮಾಡಲು ಹೊರಟರೆ ಪರೀಕ್ಷೆ 1, ಪರೀಕ್ಷೆ 2 ರಲ್ಲೇ ಫಲಿತಾಂಶ ಒಳ್ಳೆಯದು ಬರಬಹುದು ಎನ್ನುವ ಅಂದಾಜಿದೆ. ಹಾಗಾಗಿ ಪರೀಕ್ಷೆ 3 ನಡೆಸುವ ಅಗತ್ಯವಿಲ್ಲ ಎನ್ನಲಾಗಿದೆ.
Temple Theft: ದೇವಸ್ಥಾನದೊಳಗೆ ಕಳವು ಮಾಡಲು ಬಂದು ಗಾಢ ನಿದ್ದೆಗೆ ಜಾರಿದ ಕಳ್ಳ
