ಮಂಗಳೂರು: ಖಾಸಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿತ ಉಂಟಾಗಿರುವ ಹಿನ್ನೆಲೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 22 ಖಾಸಗಿ ಕಾಲೇಜುಗಳನ್ನು ಮುಚ್ಚಲು ಮಂಗಳೂರು ವಿಶ್ವವಿದ್ಯಾಲಯ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ವರದಿಯಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಈ ಕಾಲೇಜುಗಳು ಬಂದ್ ಆಗಲಿದೆ.
ಮುಚ್ಚಲಿರುವ ಕಾಲೇಜುಗಳು:
ಆಬಾ ವುಮೆನ್ಸ್ ಪ್ರಥಮ ದರ್ಜೆ ಕಾಲೇಜು ಸುರತ್ಕಲ್
ಅಂಜುಮನ್ ಪ್ರಥಮ ದರ್ಜೆ ಕಾಲೇಜು, ಮಂಗಳೂರು
ಅಮೃತ ಕಾಲೇಜು, ಪಡೀಲ್
ಸಿಲಿಕಾನ್ ಕಾಲೇಜ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್, ಕೊಂಚಾಡಿ
ಮೊಗ್ಲಿಂಗ್ ಇನ್ಸ್ಟಿಟ್ಯೂಟ್ ಆಫ್ ಜರ್ಮನ್ ಲ್ಯಾಂಗ್ವೇಜ್, ಬಲ್ಮಠ
ಸಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು, ಮಂಗಳೂರು
ರೊಸಾರಿಯೊ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್, ಬೋಳಾರ
ಕರಾವಳಿ ಕಾಲೇಜ್ ಆಫ್ ಎಜುಕೇಶನ್
ಪ್ರೇಮಕಾಂತಿ ಕಾಲೇಜ್ ಆಫ್ ಎಜುಕೇಶನ್
ಸೇಪಿಯೆನ್ಶಿಯ ಬೆಥನಿ ಪ್ರಥಮ ದರ್ಜೆ ಕಾಲೇಜು, ನೆಲ್ಯಾಡಿ
ಶಾರದಾ ಮಹಿಳಾ ಕಾಲೇಜು, ಸುಳ್ಯ
ರಾಮಕುಂಜೇಶ್ವರ ಕಾಲೇಜು
ಹಝ್ರತ್ ಸಯ್ಯದ್ ಮದನಿ ಮಹಿಳಾ ಕಾಲೇಜು, ಉಳ್ಳಾಲ
ಸೇಂಟ್ ಸೆಬಾಸ್ಟಿಯನ್ ಕಾಲೇಜ್ ಆಫ್ ಕಾಮರ್ಸ್
ಸೇಂಟ್ ಥಾಮಸ್ ಕಾಲೇಜು, ಬೆಳ್ತಂಗಡಿ
ಮಾರ್ ಇವಾನಿಯೋಸ್ ಕಾಲೇಜು, ಕಡಬ
ಮಾಧವ ಪೈ ಕಾಲೇಜು, ಮಣಿಪಾಲ
ಮೂಕಾಂಬಿಕಾ ಪ್ರಥಮ ದರ್ಜೆ ಕಾಲೇಜು, ಬೈಂದೂರು
ವರಸಿದ್ಧಿ ವಿನಾಯಕ ಪ್ರಥಮ ದರ್ಜೆ ಕಾಲೇಜು, ಕುಂದಾಪುರ
ಬಿ.ಡಿ. ಶೆಟ್ಟಿ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್, ಐರೋಡಿ ಉಡುಪಿ
ವಿದ್ಯಾನಿಕೇತನ ಪ್ರಥಮ ದರ್ಜೆ ಕಾಲೇಜು, ಕಾಪು
ಕೃಷ್ಣಭಾಯಿ ವಾಸುದೇವ್ ಶೆಣೈ ಸ್ಮಾರಕ ಕಾಲೇಜು, ಕಟಪಾಡಿ
