Home » 10th Board Exam: ಇನ್ಮುಂದೆ 10ನೇ ತರಗತಿ ಬೋರ್ಡ್‌ ಪರೀಕ್ಷೆಯೇ ಇಲ್ಲ ; ಹೈಸ್ಕೂಲ್‌ ಹೈಯರ್ ಸೆಕೆಂಡರಿ ಶಾಲೆಗಳಾಗಿ ಪರಿವರ್ತನೆಗೆ ಸರ್ಕಾರದ ಚಿಂತನೆ!!

10th Board Exam: ಇನ್ಮುಂದೆ 10ನೇ ತರಗತಿ ಬೋರ್ಡ್‌ ಪರೀಕ್ಷೆಯೇ ಇಲ್ಲ ; ಹೈಸ್ಕೂಲ್‌ ಹೈಯರ್ ಸೆಕೆಂಡರಿ ಶಾಲೆಗಳಾಗಿ ಪರಿವರ್ತನೆಗೆ ಸರ್ಕಾರದ ಚಿಂತನೆ!!

0 comments
10th Board Exam

10th board Exams: 10ನೇ ತರಗತಿಯ ಬೋರ್ಡ್‌ ಪರೀಕ್ಷೆ (10th board Exams) ವಿದ್ಯಾರ್ಥಿಗಳಿಗೆ ಅತಿಮುಖ್ಯವಾಗಿದೆ. ಹುದ್ದೆಗಳಿಗೆ ಹತ್ತನೇ ತರಗತಿಯ ಅಂಕಗಳು ಬೇಕೇ ಬೇಕು. ಆದರೆ, ಅಸ್ಸಾಂ (Assam) ರಾಜ್ಯದಲ್ಲಿ 10ನೇ ತರಗತಿ ಪರೀಕ್ಷೆಯೇ ಇಲ್ಲಾ. ವಿದ್ಯಾರ್ಥಿಗಳು ಹತ್ತನೇ ತರಗತಿ ಬೋರ್ಡ್ ಪರೀಕ್ಷೆ ಇಲ್ಲದೆ ಶಾಲಾ ಮಟ್ಟದ ಪರೀಕ್ಷೆ ಬರೆದು ನೇರವಾಗಿ 11ನೇ ತರಗತಿಗೆ ಪ್ರವೇಶ ಪಡೆಯಬಹುದು.

ಅಸ್ಸಾಂ ಸರ್ಕಾರ ಎನ್‌ಇಪಿ ಜಾರಿಗೊಳಿಸುತ್ತಿದೆ. ಈ ಹಿನ್ನೆಲೆ 10ನೇ ತರಗತಿ ಬೋರ್ಡ್‌ ಪರೀಕ್ಷೆ ರದ್ದುಗೊಳಿಸಿದೆ. ಅಸ್ಸಾಂ ಸರ್ಕಾರವು ಸೆಕೆಂಡರಿ ಮತ್ತು ಹೈಯರ್‌ ಸೆಕೆಂಡರಿ ಸ್ಕೂಲ್‌ ಬೋರ್ಡ್‌ಗಳನ್ನು ವಿಲೀನಗೊಳಿಸಲಿದೆ ಎಂದು ವರದಿಯಾಗಿದೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರ ಕಚೇರಿ (CMO) ಟ್ವೀಟ್‌ ಮಾಡಿದ್ದು, ” 10 ನೇ ತರಗತಿ ಪರೀಕ್ಷೆಯನ್ನು ಶಾಲಾ ಮಟ್ಟದಲ್ಲೆ ನಡೆಸಲಾಗುತ್ತದೆ. ವಿದ್ಯಾರ್ಥಿಗಳು ನೇರವಾಗಿ 11 ನೇ ತರಗತಿಗೆ ಪ್ರವೇಶ ಪಡೆಯಬಹುದು. ಎರಡು ಮಂಡಳಿಗಳ ವಿಲೀನ ಕೂಡ ನಡೆಯಲಿದೆ. ಯಾರೂ ತಮ್ಮ ಕೆಲಸವನ್ನು ಕಳೆದುಕೊಳ್ಳುವುದಿಲ್ಲ. ಯಾವುದೇ ನಷ್ಟ ಉಂಟಾಗುವುದಿಲ್ಲ. ಎನ್‌ಇಪಿಯನ್ನು ಜಾರಿಗೆ ತಂದ ಮತ್ತು ಶಿಕ್ಷಣ ಕ್ಷೇತ್ರವನ್ನು ತರ್ಕಬದ್ಧಗೊಳಿಸಿದ ಮೊದಲ ರಾಜ್ಯಗಳಲ್ಲಿ ಅಸ್ಸಾಂ ಒಂದಾಗಿ ಸಾಧನೆ ಮಾಡಿದೆ” ಎಂದು ಹೇಳಿದೆ.

ಗುವಾಹಟಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯೊಂದಿಗೆ ಪರಿಶೀಲನಾ ಸಭೆ ನಡೆಸಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರ್ಮಾ ಅವರು ಟ್ವೀಟ್ ಮಾಡಿದ್ದು, “ಎಲ್ಲ ಲೋಯರ್ ಪ್ರೈಮರಿಯನ್ನು ಹತ್ತಿರದ ಎಂಇ ಶಾಲೆಗಳೊಂದಿಗೆ ವಿಲೀನಗೊಳಿಸುವುದನ್ನು ಒಳಗೊಂಡಂತೆ ನಾವು ಹಲವಾರು ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಎಲ್ಲ ಹೈಸ್ಕೂಲ್‌ಗಳನ್ನು ಹೈಯರ್ ಸೆಕೆಂಡರಿ ಶಾಲೆಗಳಾಗಿ ಪರಿವರ್ತಿಸಲು ಸರ್ಕಾರ ನಿರ್ಧರಿಸಿದೆ” ಎಂದು ಹೇಳಿದರು.

 

ಇದನ್ನು ಓದಿ: DK Sivakumar: ಐಟಿ ರಿಟರ್ನ್ಸ್ ಸಲ್ಲಿಸುವವರು ಗೃಹಲಕ್ಷ್ಮಿ ಯೋಜನೆ ಬೇಡ ಎನ್ನುತ್ತಿದ್ದಾರೆ: ಡಿ.ಕೆ ಶಿವಕುಮಾರ್

You may also like

Leave a Comment