Actor Sudeep: 2019 ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ.
2019 ರ ರಾಜ್ಯ ಸಿನಿಮಾ ಪ್ರಶಸ್ತಿಗಳನ್ನು ಕರ್ನಾಟಕ ಸರಕಾರ ಘೊಷಣೆ ಮಾಡಿದೆ. ಇಂದು (ಜ.22) ರಂದು 2019ರಲ್ಲಿ ಬಿಡುಗಡೆ ಆದ ಅಥವಾ ಸೆನ್ಸಾರ್ ಆದ ಸಿನಿಮಾಗಳಿಗೆ ಆರು ವರ್ಷಗಳ ಬಳಿಕ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
2019 ನೇ ಕ್ಯಾಲೆಂಡರ್ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯು 2019ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ ಒಟ್ಟು 180 ಚಲನಚಿತ್ರಗಳ ಪೈಕಿ, ನಿಯಮಾನುಸಾರ ಇಲ್ಲದಿರುವ 8 ಚಲನಚಿತ್ರಗಳನ್ನು ಹೊರತುಪಡಿಸಿ 172 ಚಲನಚಿತ್ರಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡು ಪ್ರಶಸ್ತಿಗಳ ಆಯ್ಕೆ ಮಾಡಲಾಗಿದೆ.
ನಟ ಸುದೀಪ್ ಅವರಿಗೆ ಪೈಲ್ವಾನ್ ಚಿತ್ರಕ್ಕೆ ಅತ್ಯುತ್ತಮ ನಟ (ಸುಬ್ಬಯ್ಯನಾಯ್ಡು ಪ್ರಶಸ್ತಿ) ಪ್ರಶಸ್ತಿ ಒಲಿದಿದೆ. ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕವನ್ನು ಇದು ಒಳಗೊಂಡಿದೆ.
ಅತ್ಯುತ್ತಮ ನಟಿ ಕುಮಾರಿ ಅನುಪಮಾ ಗೌಡ ಅವರಿಗೆ ಒಲಿದಿದೆ. ತ್ರಯಂಬಕಂ ಚಿತ್ರದಲ್ಲಿನ ನಟನೆಗೆ ಈ ಪ್ರಶಸ್ತಿ ಒಲಿದಿದೆ.
ನಟ-ನಟಿಯರಿಗೆ, ಯಾವ ಯಾವ ಸಿನಿಮಾಗಳಿಗೆ, ತಂತ್ರಜ್ಞರಿಗೆ ಪ್ರಶಸ್ತಿ ನೀಡಲಾಗಿದೆ? ಇಲ್ಲಿದೆ ಸಂಪೂರ್ಣ ಪಟ್ಟಿ
ಪ್ರಶಸ್ತಿಗಳ ವಿವರ:
ಮೊದಲನೇ ಅತ್ಯುತ್ತಮ ಚಿತ್ರ; ಮೋಹನದಾಸ
ನಿರ್ಮಾಪಕ-ಮಿತ್ರಚಿತ್ರ, ಶ್ರೀ ಪಿ.ಶೇಷಾದ್ರಿ
ನಿರ್ದೇಶಕ: ಶ್ರೀ ಪಿ.ಶೇಷಾದ್ರಿ
ಎರಡನೇ ಅತ್ಯುತ್ತಮ ಚಿತ್ರ: ಲವ್ ಮಾಕ್‌ಟೈಲ್
ನಿರ್ಮಾಪಕ: ಕೃಷ್ಣಟಾಕೀಸ್, ಶ್ರೀ ಎ ನಾಗಪ್ಪ
ನಿರ್ದೇಶಕ: ಶ್ರೀ ಡಾರ್ಲಿಂಗ್ ಕೃಷ್ಣ
ಮೂರನೇ ಅತ್ಯುತ್ತಮ ಚಲನಚಿತ್ರ: ಅರ್ಘ್ಯಂ
ನಿರ್ಮಾಪಕ : ಶ್ರೀ ಪರಮೇಶ್ವರಿ ಆರ್ಟ್ಸ್
ನಿರ್ದೇಶಕ : ಶ್ರೀ ವೈ ಶ್ರೀನಿವಾಸ್
ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಕನ್ನೇರಿ
ನಿರ್ಮಾಪಕ: ಬುಡ್ಡಿದೀಪ ಸಿನಿಮಾ ಹೌಸ್, ಶ್ರೀ ಮಂಜುನಾಥ ಎಸ್
ನಿರ್ದೇಶಕಳ ಶ್ರೀ ಮಂಜುನಾಥ್ ಎಸ್
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಇಡಿಯಾ vs ಇಂಗ್ಲೆಂಡ್
ನಿರ್ಮಾಪಕ: ನಾಗತಿಹಳ್ಳಿ ಸಿನಿಕಂಬೈನ್ಸ್, ಶ್ರೀ ವೈ ಎನ್ ಶಂಕರೇಗೌಡ
ನಿರ್ದೇಶಕ: ಡಾ.ನಾಗತಿಹಳ್ಳಿ ಚಂದ್ರಶೇಖರ್
ಅತ್ಯುತ್ತಮ ಮಕ್ಕಳ ಚಿತ್ರ: ಎಲ್ಲಿ ಆಡೋದು ನಾವು ಎಲ್ಲಿ ಆಡೋದು
ನಿರ್ಮಾಪಕ: ಎಸ್‌ಆರ್ ಎಂಟರ್‌ಪ್ರೈಸಸ್ ಶ್ರೀ ಶ್ರೀನಿವಾಸ್ ಡಿ
ನಿರ್ದೇಶಕ: ಶ್ರೀ ಜಿ.ಅರುಣ್ ಕುಮಾರ್
ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ಗೋಪಾಲಗಾಂಧಿ
ನಿರ್ಮಾಪಕ: ಶ್ರೀ ರೇವಣ್ಣ ಸಿದ್ದೇಶ್ವರ ಮೂವೀಸ್, ಶ್ರೀ ಎಸ್.ಅಶೋಕ್ ರಾವ್
ನಿರ್ದೇಶ: ಶ್ರೀ ನಾಗೇಶ್ ಎನ್
ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ : ಟ್ರಿಬಲ್ ತಲಾಕ್ (ಬ್ಯಾರಿ ಭಾಷೆ)
ನಿರ್ಮಾಪಕ್ : ಗುಲ್ವಾಡಿ ಟಾಕೀಸ್, ಶ್ರೀ ಯಾಕೂಬ್ ಖಾದರ್ ಗುಲ್ವಾಡಿ
ನಿರ್ದೇಶಕ: ಶ್ರೀ ಯಾಕೂಬ್ ಖಾದರ್ ಗುಲ್ವಾಡಿ
ಅತ್ಯುತ್ತಮ ನಟ : ಶ್ರೀ ಕಿಚ್ಚ ಸುದೀಪ್, ಚಿತ್ರ: ಪೈಲ್ವಾನ್
ಅತ್ಯುತ್ತಮ ನಟಿ : ಕುಮಾರಿ ಅನುಪಮಾ ಗೌಡ, ಚಿತ್ರ: ತ್ರಯಂಬಕಂ
ಅತ್ಯುತ್ತಮ ಪೋಷಕ ನಟ : ಶ್ರೀ ತಬಲ ನಾಣಿ, ಚಿತ್ರ: ಕೆಮಿಸ್ಟ್ರಿ ಆಫ್ ಕರಿಯಪ್ಪ
ಅತ್ಯುತ್ತಮ ಪೋಷಕ ನಟಿ: ಕುಮಾರಿ ಅನೂಷಾ ಕೃಷ್ಣ, ಚಿತ್ರ: ಬ್ರಾಹ್ಮಿ
ಅತ್ಯುತ್ತಮ ಕತೆ : ಶ್ರೀ ಜಯಂತ್ ಕಾಯ್ಕಿಣಿ, ಚಿತ್ರ: ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ
ಅತ್ಯುತ್ತಮ ಚಿತ್ರಕತೆ: ಶ್ರೀ ಡಾರ್ಲಿಂಗ್ ಕೃಷ್ಣ ಚಿತ್ರ: ಲವ್‌ಮಾಕ್ ಟೈಲ್
ಅತ್ಯುತ್ತಮ ಸಂಭಾಷಣೆ: ಶ್ರೀ ಬರಗೂರು ರಾಮಚಂದ್ರಪ್ಪ ಚಿತ್ರ : ಅಮೃತಮತಿ
ಅತ್ಯುತ್ತಮ ಛಾಯಾಗ್ರಹಣ : ಶ್ರೀ ಜಿ.ಎಸ್.ಭಾಸ್ಕರ್, ಚಿತ್ರ: ಮೋಹನದಾಸ
ಅತ್ಯುತ್ತಮ ಸಂಗೀತ ನಿರ್ದೇಶನ: ಶ್ರೀ ವಿ ಹರಿಕೃಷ್ಣ, ಚಿತ್ರ: ಯಜಮಾನ
ಅತ್ಯುತ್ತಮ ಸಂಕಲನ: ಶ್ರೀ ಜಿ.ಬಸವರಾಜ್ ಅರಸ್ (ಶಿವು), ಚಿತ್ರ ಝಾನ್ಸಿ, ಐಪಿಎಸ್
ಅತ್ಯುತ್ತಮ ಬಾಲನಟ : ಮಾಸ್ಟರ್ ಪ್ರೀತಂ ಚಿತ್ರ: ಮಿಂಚುಹುಳು
ಅತ್ಯುತ್ತಮ ಬಾಲ ನಟಿ: ಬೇಬಿ ವೈಷ್ಣವಿ ಅಡಿ ಚಿತ್ರ : ಸುಗಂಧಿ
ಅತ್ಯುತ್ತಮ ಕಲಾ ನಿರ್ದೇಶನ: ಶ್ರೀ ಹೊಸ್ಮನೆ ಮೂರ್ತಿ, ಚಿತ್ರ: ಮೋಹನದಾಸ
ಅತ್ಯುತ್ತಮ ಗೀತ ರಚನೆ: ಶ್ರೀ ರಝಾಕ್ ಪುತ್ತೂರು, ಚಿತ್ರ ಪೆನ್ಸಿಲ್ ಬಾಕ್ಸ್
ಅತ್ಯುತ್ತಮ ಹಿನ್ನೆಲೆ ಗಾಯಕ: ಶ್ರೀ ರಘು ದೀಕ್ಷಿತ್, ಚಿತ್ರ ಲವ್ ಮಾಕ್ ಟೈಲ್
ಅತ್ಯುತ್ತಮ ಹಿನ್ನೆಲೆ ಗಾಯಕಿ: ಡಾ.ಜಯದೇವಿ ಜಿಂಗಮ ಶೆಟ್ಟಿ, ಚಿತ್ರ: ರಾಗಭೈರವಿ
ತೀರ್ಪುಗಾರರ ವಿಶೇಷ ಪ್ರಶಸ್ತಿ;
ನಿರ್ಮಾಪಕರು: ಶ್ರೀ ಪುಟ್ಟಣ್ಣ ನಿರ್ಮಾಣ ಸಂಸ್ಥೆ: ಇಂಚರ ಪುಟ್ಟಣ್ಣ ಪ್ರೊಡಕ್ಷನ್ಸ್, ಚಿತ್ರ: ಅಮೃತಮತಿ ಹಾಗೂ ನಿರ್ಮಾಪಕರು: ಶ್ರೀ ಬಿಎನ್‌ಜಿ ರಾಜ್, ನಿರ್ಮಾಣ ಸಂಸ್ಥೆ: ಬಾಲಾಜಿ ಚಿತ್ರ, ಚಿತ್ರ: ತಮಟೆ ನರಸಿಂಹಯ್ಯ
ಅತ್ಯುತ್ತಮ ನಿರ್ಮಾಣ ನಿರ್ವಾಹಕ : ಶ್ರೀ ಆರ್. ಗಂಗಾಧರ್, ಚಿತ್ರ: ಮಕ್ಕಡ್ ಮನಸ್
