Home » YouTube New Updates : ಯೂಟ್ಯೂಬ್ ನಲ್ಲಿ ಬಂತು ಹೊಸ ವೈಶಿಷ್ಟ್ಯ ! ಇಲ್ಲಿದೆ ಸಂಪೂರ್ಣ ವಿವರ!

YouTube New Updates : ಯೂಟ್ಯೂಬ್ ನಲ್ಲಿ ಬಂತು ಹೊಸ ವೈಶಿಷ್ಟ್ಯ ! ಇಲ್ಲಿದೆ ಸಂಪೂರ್ಣ ವಿವರ!

0 comments

ಇತ್ತೀಚೆಗೆ ತಂತ್ರಜ್ಞಾನದಲ್ಲಿ ಸಾಕಷ್ಟು ಅಭಿವೃದ್ಧಿಗಳು ಆಗುತ್ತಲೇ ಇವೆ. ಹಾಗೇ ಇದೀಗ ಯೂಟ್ಯೂಬ್​ನಲ್ಲಿ ಹೊಸ ಆ್ಯಂಬಿಯೆಂಟ್​ ಮೋಡ್ ಎಂಬ ಫೀಚರ್ಸ್​ ಬಿಡುಗಡೆಯಾಗಿದೆ. ಇದು ಗ್ರಾಹಕರಿಗೆ ವಿಡಿಯೋಗಳನ್ನು ಉತ್ತಮ ಗುಣಮಟ್ಟದಲ್ಲಿ ನೋಡಲು ಸಹಾಯಕಾರಿಯಾಗಿದೆ. ಇನ್ನೂ ಈ ಆ್ಯಂಬಿಯೆಂಟ್ ಮೋಡ್​ನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ಆ್ಯಂಬಿಯೆಂಟ್​ ಮೋಡ್ ಇಂಟರ್ಫೇಸ್​ ಬ್ಯಾಗ್​ರೌಂಡ್​ನ ಬಣ್ಣ ಬದಲಾಗುವ ಮೂಲಕ ವಿಡಿಯೋವನ್ನು ವೀಕ್ಷಿಸುವಾಗ ನೋಡುಗರಿಗೆ ಉತ್ತಮ ಅನುಭವವನ್ನು ನೀಡುತ್ತದೆ. ಈ ಆ್ಯಂಬಿಯೆಂಟ್​ ಫೀಚರ್ ಡೆಸ್ಕ್​ಟಾಪ್, ಆಂಡ್ರಾಯ್ಡ್​ ಮತ್ತು ಐಒಎಸ್​​ ಬಳಕೆದಾರರಿಗೆ ಮಾತ್ರ ಸಪೋರ್ಟ್​ ಮಾಡುತ್ತದೆ.

ಇನ್ನೂ ಈ ಫೀಚರ್ಸ್​ ಅನ್ನು ಯಾವ ರೀತಿ ಬಳಕೆ ಮಾಡಬಹುದು ಎಂದರೆ, ನಿಮ್ಮ ಸ್ಮಾರ್ಟ್​ಫೋನ್​ ಅಥವಾ ಡೆಸ್ಕ್​ಟಾಪ್​ನಲ್ಲಿ ಯೂಟ್ಯೂಬ್ ಆ್ಯಪ್ ಅನ್ನು ತೆರೆದು, ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿ, ‘Appearances’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. ನಂತರ ಸಿಗುವಂತಹ ‘ಡಾರ್ಕ್ ಥೀಮ್’ ಅನ್ನು ಆಯ್ಕೆ ಮಾಡಿ. ಯೂಟ್ಯೂಬ್​ನಲ್ಲಿ ವಿಡಿಯೋ ಪ್ಲೇ ಮಾಡಿದರೆ ಆಟೋಮ್ಯಾಟಿಕ್‌ ಆಗಿ ಈ ಫೀಚರ್ಸ್ ಆನ್‌ ಆಗುತ್ತದೆ. ​​ನಂತರ ನೀವು ಇದರ ಉತ್ತಮ ಅನುಭವವನ್ನು ಪಡೆಯಬಹುದು.

ಆದರೆ ಯೂಟ್ಯೂಬ್​ನಲ್ಲಿ ವಿಡಿಯೋ ನೋಡುವಾಗ ಪ್ರತೀಸಲ ಆ್ಯಂಬಿಯೆಂಟ್​ ಮೋಡ್​ನಲ್ಲಿಟ್ಟು ನೋಡಬಾರದು. ಯಾಕೆಂದರೆ ಪ್ರತೀಸಲ ನೋಡಿದಾಗ ಆ ಫೀಚರ್ಸ್​ ಆಕರ್ಷಣೀಯ ಎನಿಸಲಿಕ್ಕಿಲ್ಲ. ಹಾಗಾಗಿ ತಮಗೆ ಬೇಕಾದ ಸಂದರ್ಭದಲ್ಲಿ ಮಾತ್ರ ಈ ಫೀಚರ್ ಬಳಸಬೇಕು. ನಿಮಗೇನಾದರೂ ಆ್ಯಂಬಿಯೆಂಟ್ ಮೋಡ್ ಬೇಡವೆಂದು ಎನಿಸಿದರೆ ಆಫ್ ಕೂಡಾ ಮಾಡ್ಬಹುದು. ಹೇಗೆಂದರೆ, ಯೂಟ್ಯೂಬ್‌ ಓಪನ್ ಮಾಡಿದ ನಂತರ ಅದರ ಸೆಟ್ಟಿಂಗ್‌ ಗೆ ಹೋಗಿ ಅಲ್ಲಿಯೇ ಕಾಣಿಸುವ ಆ್ಯಂಬಿಯೆಂಟ್ ಮೋಡ್ ಅನ್ನು ಟ್ಯಾಪ್ ಮಾಡಿದರೆ ಅದು ಆಟೋಮ್ಯಾಟಿಕ್‌ ಆಗಿ ಆಫ್ ಆಗುತ್ತದೆ.

ನೀವು ಯೂಟ್ಯೂಬ್​ನಲ್ಲಿ ವಿಡಿಯೋ ನೋಡುವಾಗ ಜಾಹೀರಾತುಗಳು ಬರುತ್ತಲೇ ಇರುತ್ತದೆ. ಇದರ ಬಗ್ಗೆ ಎಷ್ಟೋ ಜನರಿಗೆ ಅಸಮಾಧಾನವಿದೆ. ಆದರೆ ನೀವು ಯಾವುದೇ ಜಾಹಿರಾತು ಇಲ್ಲದೆ ವೀಡಿಯೋ ನೋಡಬಹುದು. ಹೇಗೆಂದು ಯೋಚನೆಯೇ? ಇಲ್ಲಿದೆ ಮಾಹಿತಿ.

ಯೂಟ್ಯೂಬ್​ನಲ್ಲಿ ವಿಡಿಯೋ ನೋಡುವಾಗ ಬರುವಂತಹ ಜಾಹೀರಾತಿಗೆ ಆ್ಯಡ್​ ಬ್ಲಾಕರ್​​ ಅಪ್ಲಿಕೇಶನ್​ಗಳನ್ನು ಉಪಯೋಗಿಸಿದರೆ ಯಾವುದೇ ಜಾಹೀರಾತಿನ ತೊಂದರೆ ಇಲ್ಲದೆ ಯೂಟ್ಯೂಬ್​ನಲ್ಲಿ ನಿರಾಳವಾಗಿ ವಿಡಿಯೋಗಳನ್ನು ನೋಡಬಹುದಾಗಿದೆ. ಇದಲ್ಲದೆ ಬೇರೆ ಆಯ್ಕೆಗಳು ಕೂಡ ಇವೆ. ಆ್ಯಡ್​​ಬ್ಲಾಕರ್‌ ಬಳಸಲು ಆಗದಿದ್ದರೆ, ಯೂಟ್ಯೂಬ್‌ ವಿಡಿಯೋದ URL ಮತ್ತು ಪದಗಳ ಮೂಲಕ AdlessTube, ViewPure ಮತ್ತು Voila ದಂತಹ ಸರ್ಚ್‌ ಇಂಜಿನ್‌ಗಳಲ್ಲಿ ನೀವು ಜಾಹೀರಾತು ಮುಕ್ತ ವಿಡಿಯೋಗಳನ್ನು ನೋಡಬಹುದಾಗಿದೆ.

You may also like

Leave a Comment