Home » Abhishek Ambarish: ಹೊಸ BMW X7 ಕಾರು ಖರೀದಿಸಿದ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್, ಈ ಬೆಂಕಿ ಕಾರಿನ ಬೆಲೆ ಕೇಳಿದ್ರೆ…!

Abhishek Ambarish: ಹೊಸ BMW X7 ಕಾರು ಖರೀದಿಸಿದ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್, ಈ ಬೆಂಕಿ ಕಾರಿನ ಬೆಲೆ ಕೇಳಿದ್ರೆ…!

by ಹೊಸಕನ್ನಡ
0 comments
Abhishek Ambareesh

Abhishek Ambarish: ರೆಬೆಲ್‌ಸ್ಟಾರ್ ಅಂಬರೀಶ್ ಮತ್ತು ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ (Abhishek Ambarish purchased BMW X 7 car) ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಹೆಸರು ಉಳಿಸಿಕೊಂಡ ಹುಡುಗ. ಯಂಗ್ ರೆಬಲ್ ಸ್ಟಾರ್ ಎಂದೇ ಫೇಮಸ್ ಆಗಿರುವ ಅಭಿ ಅಪ್ಪನಂತೆ ರೆಬೆಲ್ ಸ್ಯಾಂಡಲ್‌ವುಡ್‌ನಲ್ಲಿ ನಟಿಸುತ್ತಿದ್ದಾರೆ. ಜತೆಗೆ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಅಭಿಷೇಕ್ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಹೌದು, ಸ್ಯಾಂಡಲ್‌ವುಡ್ ನಟ ಅಭಿಷೇಕ್ ಅಂಬರೀಶ್ ದುಬಾರಿ ಕಾರೊಂದನ್ನು ಖರೀದಿ ಮಾಡಿದ್ದಾರೆ.

ಇದನ್ನೂ ಓದಿ: Actress Jyotika: ಆನ್‌ಲೈನ್ ಮೂಲಕ ವೋಟ್ ಮಾಡಿದ್ದೇನೆ ಎಂದ ತಮಿಳ್ ನಟಿ ಜ್ಯೋತಿಕಾ; ವ್ಯಾಪಕ ಟ್ರೊಲ್ !

ನಟ ಅಭಿಷೇಕ್ ಅಂಬರೀಶ್ ಅವರು ಹೊಸ ಅತಿಥಿ ಬಿಎಂಡಬ್ಲ್ಯೂ ಎಕ್ಸ್ x7 ಕಾರು. ಅವರು ತಮ್ಮ ಮನೆಯ ಸುತ್ತಮುತ್ತ ಈ ಕಾರನ್ನು ಡ್ರೈವ್ ಮಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಬಿಎಂಡಬ್ಲ್ಯೂ ಕಾರಿನ ಬೆಲೆ 1 ಕೋಟಿ 30 ಲಕ್ಷ ಬೆಲೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಹಾಗಾದ್ರೆ ಅಭಿಷೇಕ ಅಂಬರೀಶ್ ಕೊಂಡ ಬಿಎಂಡಬ್ಲ್ಯೂ ಈ ಕಾರಿನ ವೈಶಿಷ್ಟ್ಯತೆಗಳೇನು ಎಂಬುದನ್ನು ನೋಡೋಣ.

ಬಿ ಎಂ ಡಬ್ಲ್ಯೂ X 7 ಕಾರಿನ ವಿಶೇಷತೆ:
BMW X7, 6 ಆಸನಗಳ SUV. ಇದು 2 ರೂಪಾಂತರಗಳಲ್ಲಿ ಲಭ್ಯವಿದೆ. ಎಂಜಿನ್ ಆಯ್ಕೆಗಳು 2993 ರಿಂದ 2998 cc ಮತ್ತು 1 ಟ್ರಾನ್ಸ್ಮಿಷನ್ ಆಯ್ಕೆ, ಅಂದರೆ ಇದು ಸ್ವಯಂಚಾಲಿತ ಆಟೋ ಗೇರ್ ನ ಕಾರು. X7 ಒಟ್ಟು 8 ಏರ್ ಬ್ಯಾಗ್ ಗಳನ್ನು ಹೊಂದಿದ್ದು, ಅತ್ಯಂತ ಸುರಕ್ಷಿತ ಕಾರು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಾರು 221 mm ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಅಂದರೆ ಸಾಮಾನ್ಯವಾಗಿ ರಸ್ತೆಗಳಲ್ಲಿ ಕಂಡುಬರುವ ಟಾಟಾ ನೆಕ್ಸಾನ್ ಗಿಂತಲೂ ಹೆಚ್ಚು ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.
BMW X7 ಒಟ್ಟು 4 ಬಣ್ಣಗಳಲ್ಲಿ ಲಭ್ಯವಿದೆ. ಕಾರ್ಬನ್ ಬ್ಲಾಕ್, ಮಿನರಲ್ ವೈಟ್, ಡ್ರಾವಿಟ್ ಗ್ರೆ ಮತ್ತು ಟಾಂಜನೈಟ್ ಬ್ಲೂ ಹೀಗೆ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ.
X7 ಲೀಟರಿಗೆ 11.29 ರಿಂದ 14.31 (kmpl ) ಮೈಲೇಜ್ ನ್ನು ಹೊಂದಿರುವುದಾಗಿ ಬಳಕೆದಾರರು ವರದಿ ಮಾಡಿದ್ದಾರೆ. ಈ ಕಾರಿನ ಬೆಲೆ ಒಂದು ಕೋಟಿ ಇಪ್ಪತ್ತೇಳು ಲಕ್ಷದಿಂದ 1 ಕೋಟಿ 37 ಲಕ್ಷದವರೆಗೆ ಆಗುತ್ತದೆ.

 

 

You may also like

Leave a Comment