Home » Actor Darshan Arrest: ನಟ ದರ್ಶನ್‌ ಅರೆಸ್ಟ್‌; ಕೊಲೆ ಮಾಡಿದ್ದು ಹೇಗೆ? ದರ್ಶನ್‌ ಮನೆಗೆ ಬಿಗಿ ಭದ್ರತೆ

Actor Darshan Arrest: ನಟ ದರ್ಶನ್‌ ಅರೆಸ್ಟ್‌; ಕೊಲೆ ಮಾಡಿದ್ದು ಹೇಗೆ? ದರ್ಶನ್‌ ಮನೆಗೆ ಬಿಗಿ ಭದ್ರತೆ

0 comments
Actor Darshan Arrest

Actor Darshan Arrest: ಚಿತ್ರದುರ್ಗ ಮೂಲದ ವ್ಯಕ್ತಿ ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿರುವ ಆರೋಪದಲ್ಲಿ ಸ್ಯಾಂಡಲ್‌ವುಡ್‌ ನಟ ದರ್ಶನ್‌ ಬಂಧನವಾಗಿದೆ. ಪೊಲೀಸರು ಈ ವಿಚಾರ ಖಚಿತಪಡಿಸಿದ್ದಾರೆ. ದರ್ಶನ್‌ ಗೆಳತಿ ಪವಿತ್ರಾ ಗೌಡ ಅವರ ವಿಚಾರದಲ್ಲಿ ಈ ಕೊಲೆ ನಡೆದಿದೆ. ಕೊಲೆಯಾದ ರೇಣುಕಾಸ್ವಾಮಿ ಪವಿತ್ರಾ ಗೌಡ ಕೆಟ್ಟದಾಗಿ ಮೆಸೇಜ್‌ ಮಾಡಿದ್ದು, ಫೋಟೋ ಕಳಿಸುವುದು ಈ ರೀತಿ ಮಾಡುತ್ತಿದ್ದನೆಂದು ರೇಣುಕಾಸ್ವಾಮಿಯನ್ನು ಒಂದು ವಾರದಿಂದ ಟ್ರ್ಯಾಕ್‌ ಮಾಡಲಾಗಿತ್ತು.

ಟ್ರಾಕ್‌ ಮಾಡಿದ ನಂತರ ರೇಣುಕಾಸ್ವಾಮಿಯನ್ನು ಚಿತ್ರದುರ್ಗ ದರ್ಶನ್‌ ಅಭಿಮಾನಿಗಳ ಸಂಘದ ಅಧ್ಯಕ್ಷ, ರಾಘವೇಂದ್ರ ಕರೆದುಕೊಂಡು ಬಂದಿದ್ದು, ನಂತರ ಆರ್‌ಆರ್‌ನಗರ ವಾಹನ ಸೀಜರ್‌ ಮಾಡಿ ಇಡುವ ಶೆಡ್‌ನಲ್ಲಿ ರೇಣುಕಾಸ್ವಾಮಿಗೆ ಹೊಡೆಯಲಾಗಿದೆಯಂತೆ.

Actor Darshan: ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಬಂಧನ

ಅನಂತರ ಶನಿವಾರ ನಡುರಾತ್ರಿ ಕಾಮಾಕ್ಷಿ ಪಾಳ್ಯದ ಸಲಾರ್‌ ಪುರ ಸತ್ವ ಬಳಿಯ ಮೋರಿಯಲ್ಲಿ ರೇಣುಕಾಸ್ವಾಮಿ ಮೃತದೇಹ ದೊರಕಿದೆ. ದರ್ಶನ್‌ ಅವರು ರೇಣುಕಾಸ್ವಾಮಿ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದಿದ್ದಾರೆ ಎನ್ನಲಾಗಿದೆ. ದರ್ಶನ್‌ ಜೊತೆಗೆ ವಿನಯ್‌ ಎಂಬಾತನನ್ನು ಕೂಡಾ ಬಂಧನ ಮಾಡಲಾಗಿದೆ.

ಜೂ.8 ರಂದು ರಾತ್ರಿ ವಿನಯ್‌ ಕಾರ್‌ಶೆಡ್‌ನಲ್ಲಿ ರೇಣುಕಾ ಸ್ವಾಮಿಯನ್ನು ಬಂಧಿಸಿ, ಹಲ್ಲೆ ಮಾಡಲಾಗಿತ್ತು ಎಂದು ವರದಿಯಾಗಿದೆ. ಗಿರಿನಗರ ಮೂಲದ ಹುಡುಗರು ಏಕಾಏಕಿ ಠಾಣೆಗೆ ಬಂದು ತಾವೇ ಈ ಕೊಲೆ ಮಾಡಿದ್ದು ಎಂದು ಸರೆಂಡರ್‌ ಆಗಿದ್ದಾರೆ. ಆದರೆ ಪೊಲೀಸರು ಅವರ ಮಾತನ್ನು ಕೇಳೋಕೆ ರೆಡಿ ಇರಲಿಲ್ಲ. ಕೊಲೆ ನಡೆದ ಜಾಗದಲ್ಲಿ ಕಂಡು ಬಂದ ಕೆಲವು ಕುರುಹುಗಳಿಂದ ಸಂಶಯ ಉಂಟಾಗಿದ್ದರಿಂದ ತನಿಖೆ ನಡೆಸಿದಾಗ ನಟ ದರ್ಶನ್‌ ಅವರ ಹೆಸರು ಹೊರ ಬಂದಿದೆ.

ವಿಜಯನಗರ ಎಸಿಪಿ ಚಂದನ್‌ ತಂಡ ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ನಟ ದರ್ಶನ್‌ ಅರೆಸ್ಟ್‌ ಮಾಡಿದ್ದಾರೆ. ಈ ಘಟನೆ ನಂತರ ಬೆಂಗಳೂರಿನಲ್ಲಿ ನಟ ದರ್ಶನ್‌ ಮನೆಗೆ ಪೊಲೀಸರು ಭದ್ರತೆ ನೀಡಿದ್ದಾರೆ. ದರ್ಶನ್‌ ಮನೆ ಬಳಿ ಬ್ಯಾರಿಕೇಡ್‌ ಹಾಕಿ 20 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

Sridevi Father Byrappa: ‘ನನ್ನ ಮಗಳು ವಿದ್ಯಾವಂತೆ, ಅವನು SSLC’- ಯುವ ಮಾವ ಭೈರಪ್ಪ ಮಾತು

You may also like

Leave a Comment