Home » Actor Darshan: ನಟ ದರ್ಶನ್​ಬಿಡುಗಡೆಗೆ ಜೊತೆಗಿದ್ದವರೇ ಕಂಟಕ! ದರ್ಶನ್ ವಿರುದ್ಧ ನಿಂತ ಡಿಗ್ಯಾಂಗ್​?

Actor Darshan: ನಟ ದರ್ಶನ್​ಬಿಡುಗಡೆಗೆ ಜೊತೆಗಿದ್ದವರೇ ಕಂಟಕ! ದರ್ಶನ್ ವಿರುದ್ಧ ನಿಂತ ಡಿಗ್ಯಾಂಗ್​?

5 comments
Actor Darshan

Actor Darshan: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Actor Darshan) ಮತ್ತು ಆತನ ಕುಚಿಕು ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲು ಸೇರಿ ಎರಡು ತಿಂಗಳು ಕಳೆದರೂ ಇದುವರೆಗೆ ಎಷ್ಟೇ ಪ್ರಯತ್ನ ಪಟ್ಟರು ದರ್ಶನ್ ಬಿಡುಗಡೆ ಬಗ್ಗೆ ಯಾವುದೇ ಪಾಸಿಟಿವ್ ಮಾಹಿತಿ ಸಿಕ್ಕಿಲ್ಲ. ಹೌದು, ಯಾಕೆಂದರೆ ಈ ಕೊಲೆ ಕೇಸ್ ನಲ್ಲಿ ಗೆಳತಿ ಪವಿತ್ರಾ ಸೇರಿ ಆತನ ಸಹಚರರು ಕೂಡಾ ದರ್ಶನ್ ಪರ ನಿಲ್ಲೋದನ್ನು ಮರೆತಿದ್ದಾರೆ. ತಾನು ಒಮ್ಮೆ ಜೈಲಿಂದ ಬಚಾವಾದರೆ ಸಾಕು ಎಂಬುದು ಎಲ್ಲರ ಯೋಚನೆ ಆಗಿದೆ.

ಈಗಾಗಲೇ ಈ ಕೇಸ್ ನಲ್ಲಿ ಆರೋಪಿ ಸ್ಥಾನದಲ್ಲಿರುವ ದರ್ಶನ್ ಗೆ FSL ನಿಂದ ತಪ್ಪಿಸಿಕೊಳ್ಳಲು ಸಾಧ್ಯ ಇಲ್ಲದಂತೆ ಆಗಿದೆ. ದರ್ಶನ್ ವಿರುದ್ಧ ಸಿಕ್ಕಿರುವ ಸಾಕ್ಷ್ಯಗಳೇ ಕಂಟಕವಾಗಿ ಕಾಡೋದಕ್ಕೆ ಶುರುವಾಗಿವೆ. ಅದರಲ್ಲೂ ತಾಂತ್ರಿಕ ಹಾಗೂ ಮೆಡಿಕಲ್ ಸಾಕ್ಷ್ಯಗಳು ಸಿಕ್ಕಾಪಟ್ಟೆ ಸ್ಟ್ರಾಂಗ್​ ಆಗಿವೆಯಂತೆ. ಹಲವು ಸಾಕ್ಷ್ಯಗಳನ್ನ ಸಂಗ್ರಹಿಸಿರುವ ಪೊಲೀಸರು, ದರ್ಶನ್ ಆರೋಪಿ ಎಂದು ಸಾಬೀತು ಮಾಡುವಲ್ಲಿ ತುಂಬಾ ಸಮೀಪದಲ್ಲಿದ್ದಾರೆ.

ಒಟ್ಟಿನಲ್ಲಿ ಪ್ರತಿ ಸಾಕ್ಷ್ಯದಲ್ಲೂ ದರ್ಶನ್ ಪಾತ್ರ ಇರೋದು ಬಹುತೇಕ ಖಾಯಂ ಆಗಿದೆ. ಹೀಗಾಗಿ ದರ್ಶನ್​ ಕೇಸ್‌ ಕೈಗೆತ್ತಿಕೊಂಡರೆ ಹಿನ್ನೆಡೆ ಅನುಭವಿಸುವ ಆತಂಕದಿಂದ ವಕೀಲರು ಹಿಂದೇಟು ಹಾಕ್ತಿದ್ದಾರೆ. ಇದು ದರ್ಶನ್‌ಗೆ ಆರಂಭದಲ್ಲೇ ಬಿಗ್​ ಶಾಕ್​ ಕೊಟ್ಟಿದೆ ಎನ್ನಲಾಗಿದೆ.

ಇತ್ತ ಅಭಿಮಾನ, ಗೆಳೆತನ ಅನ್ನೋದು ಅತಿಯಾದರೆ ಏನಾಗುತ್ತೆ ಅಂತ ಜೈಲು ಸೇರಿರುವ ಇತರ ಆರೋಪಿಗಳಿಗೆ ಅರ್ಥವಾಗಿದೆ. ಹಾಗಾಗಿ ಕೊಲೆ ಪ್ರಕರಣದಲ್ಲಿ ದರ್ಶನ್ ಸಹಾಯ ಮಾಡ್ತಾರೆ ಅನ್ನೋ ನಂಬಿಕೆಯನ್ನೂ ಕಳ್ಕೊಂಡಿದ್ದಾರೆ. ಇದೇ ಕಾರಣಕ್ಕೆ ತಮ್ಮ ತಲೆಗೆ ತಮ್ಮದೇ ಕೈ ಅನ್ನೋದನ್ನ ಅರ್ಥ ಮಾಡ್ಕೊಂಡು ಪಶ್ಚಾತಾಪ ಪಡುತ್ತಿದ್ದಾರೆ. ಹೀಗಾಗಿಯೇ ನಾವ್​ ಬಚಾವ್​ ಆದ್ರೆ ಸಾಕು ಅನ್ನೋ ಹಂತಕ್ಕೆ ಬಂದಿದ್ದಾರಂತೆ. ಈಗಾಗಲೇ ಆರೋಪಿ ಅನುಕುಮಾರ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಚಾರ್ಜ್‌ಶೀಟ್‌ ಬಳಿಕ ಇನ್ನೂ ಹಲವರು ಬೇಲ್‌ಗೆ ಪ್ಲ್ಯಾನ್‌ ಮಾಡ್ಕೊಂಡಿದ್ದಾರಂತೆ. ಪವಿತ್ರಾ ಕೂಡಾ ಕಾನೂನು ತಜ್ಞರನ್ನು ನೇಮಿಸಿ ಜೈಲಿನಿಂದ ಹೇಗಾದರೂ ಹೊರ ಬರಲು ಮುಂದಾಗಿದ್ದಾರೆ.

You may also like

Leave a Comment