Home » Junior NTR: ನೀವು ಪದೇ ಪದೇ ಅದನ್ನೇ ಕೇಳ್ತಿದ್ರೆ ನಾನು ಸಿನಿಮಾ ಮಾಡೋದನ್ನೇ ನಿಲ್ಲಿಸ್ತೀನಿ: ಜೂ. ಎನ್‌ಟಿಆರ್!

Junior NTR: ನೀವು ಪದೇ ಪದೇ ಅದನ್ನೇ ಕೇಳ್ತಿದ್ರೆ ನಾನು ಸಿನಿಮಾ ಮಾಡೋದನ್ನೇ ನಿಲ್ಲಿಸ್ತೀನಿ: ಜೂ. ಎನ್‌ಟಿಆರ್!

by ಹೊಸಕನ್ನಡ
1 comment
Actor Jr. NTR

Actor Jr. NTR : ಸಿನಿ ರಂಗದಲ್ಲಿ ತಮ್ಮ ಫೇವರಿಟ್ ನಟ ಅಥವಾ ನಟಿಯರು ಯಾರಾದರೂ ಎದುರಾದರೆ ಅವರವರ ಫ್ಯಾನ್ಸ್ ಗಳು ಅವರನ್ನು ಕೊಂಡಾಡೋದು, ಪ್ರಶ್ನೆ ಕೇಳೋದು ಸಹಜ. ಆದರೆ ಪದೇ ಪದೇ ಕೇಳಿದ್ದನ್ನು ಕೇಳಿದ್ರೆ ಹೇಗಾಗಬೇಡ ಹೇಳಿ? ಅಂತೆಯೇ ಸದ್ಯ ಆಸ್ಕರ್ ಪಡೆದು ಭಾರತಕ್ಕೆ ಮರಳಿದ ಪ್ಯಾನ್ ಇಂಡಿಯಾ ಸ್ಟಾರ್ ಜೂ.ಎನ್‌ಟಿಆರ್‌ಗೆ ಅವರ ಫ್ಯಾನ್ಸ್ ಪದೇ ಪದೇ ಕೇಳುತ್ತಿರುವ ಆ ಒಂದು ಪ್ರಶ್ನೆ ಸಖತ್ ಕಿರಿ ಕಿರಿ ಉಂಟು ಮಾಡಿದೆ. ಇದಕ್ಕೆ ಎನ್‌ಟಿಆರ್‌(Actor Jr. NTR) ಕೂಡ ಕೊಂಚ ಗರಂ ಆಗಿಯೇ ರಿಯಾಕ್ಟ್ ಮಾಡಿದ್ದಾರೆ.

ಹೌದು, ಲಾಸ್‌ ಏಂಜಲೀಸ್‌ನಿಂದ ಮರಳಿರುವ ಎನ್‌ಟಿಆರ್, ಎಂದಿನಂತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಮಧ್ಯೆ ಅವರಿಗೆ ಒಂದು ಪ್ರಶ್ನೆ ಪದೇ ಪದೇ ಎದುರಾಗಿ ಕಿರಿಕಿರಿ ಉಂಟು ಮಾಡಿದೆ. ಅದಕ್ಕೆ ಗರಂ ಆಗಿ ಪ್ರತಿಕ್ರಿಯೆ ನೀಡಿರುವ ಎನ್‌ಟಿಆರ್, ‘ನೀವು ಮತ್ತೆ ಮತ್ತೆ ಅದನ್ನೇ ಕೇಳಿದ್ರೆ ನಾನು ಸಿನಿಮಾ ಮಾಡೋದನ್ನೇ ನಿಲ್ಲಿಸ್ತೀನಿ’ ಎಂದು ಎಚ್ಚರಿಕೆ ನೀಡಿದ್ದಾರೆ. ಹಾಗಾದ್ರೆ, ಆ ಪ್ರಶ್ನೆ ಏನು?

ಎನ್‌ಟಿಆರ್ ಎಲ್ಲೇ ಹೋದರೂ, ಎಲ್ಲೇ ಬಂದರೂ ಹೊಸ ಸಿನಿಮಾದ ಬಗ್ಗೆ ಅಪ್‌ಡೇಟ್ ನೀಡಿ ಎಂದು ಫ್ಯಾನ್ಸ್ ಪ್ರಶ್ನೆ ಮಾಡುತ್ತಲೇ ಇರುತ್ತಾರೆ. ಇದು ಎನ್‌ಟಿಆರ್ ಕೋಪಕ್ಕೆ ಕಾರಣವಾಗಿದೆ. ಈಚೆಗೆ ಅವರು ನಟ ವಿಶ್ವಕ್ ಸೇನ್ ಅವರ ಹೊಸ ಸಿನಿಮಾ ‘ದಾಸ್‌ ಕಾ ಧಮ್ಕಿ’ ಸಿನಿಮಾದ ಪ್ರೀ ರಿಲೀಸ್ ಇವೆಂಟ್‌ಗೆ ಆಗಮಿಸಿದ್ದರು. ಇದೇ ವೇಳೆ ಫ್ಯಾನ್ಸ್ ಮುಂದಿನ ಸಿನಿಮಾದ ಅಪ್‌ಡೇಟ್ ನೀಡುವಂತೆ ಕೇಳಿದ್ದಾರೆ. ಇದು ಎನ್‌ಟಿಆರ್‌ಗೆ ಬೇಸರ ತಂದಿದೆ. ಆ ವೇದಿಕೆಯಲ್ಲೇ ಮಾತನಾಡಿದ ಅವರು, ‘ನೀವು ಮತ್ತೆ ಮತ್ತೆ ಅದನ್ನೇ ಕೇಳಿದ್ರೆ ನಾನು ಸಿನಿಮಾ ಮಾಡುವುದನ್ನೇ ನಿಲ್ಲಿಸ್ತೀನಿ..’ ಎಂದು ಕೋಪದಿಂದ ಹೇಳಿದ್ದಾರೆ.

ಬಳಿಕ ಮಾತನಾಡಿದ ಅವರು ನೀವು ಮತ್ತೆ ಮತ್ತೆ ‘ಎನ್‌ಟಿಆರ್ 30′ ಸಿನಿಮಾದ ಬಗ್ಗೆ ಅಪ್‌ಡೇಟ್ ಕೇಳುತ್ತಲೇ ಇದ್ದರೆ, ನಾನು ಆ ಸಿನಿಮಾವನ್ನೇ ಮಾಡೋದಿಲ್ಲ ಅಂತ ಹೇಳ್ತೀನಿ. ಆದ್ರೂ ಮತ್ತೆ ನೀವು ಪ್ರಶ್ನೆ ಮಾಡಿದ್ರೆ, ನಾನು ಯಾವ ಸಿನಿಮಾ ವನ್ನು ಮಾಡೋದಿಲ್ಲ. ಸಿನಿಮಾ ಮಾಡೋದನ್ನೇ ನಿಲ್ಲಿಸುತ್ತೇನೆ’ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ. ನಂತರ ‘ನಾನು ಸಿನಿಮಾಗಳನ್ನು ಮಾಡುವುದನ್ನು ನಿಲ್ಲೋಸಲ್ಲ ಎಂದು ನಿಮಗೆ ಗೊತ್ತಿದೆ. ಅಷ್ಟೇ ಏಕೆ, ನೀವು ಕೂಡ ಸಿನಿಮಾದಿಂದ ನಾನು ದೂರವಾಗಲು ಬಿಡುವುದಿಲ್ಲ. ಆದರೆ ದಯವಿಟ್ಟು ಅಪ್‌ಡೇಟ್ ಬಗ್ಗೆ ಪದೇ ಪದೇ ಕೇಳಬೇಡಿ. ನಾನು ಶೀಘ್ರದಲ್ಲೇ ಸಿನಿಮಾ ಶುರು ಆರಂಭಿಸುವೆ’ ಎಂದು ಹೇಳಿದ್ದಾರೆ.

ಜೂನಿಯರ್ ಎನ್‌ಟಿಆರ್ ನಟಿಸಿದ್ದ ‘ಆರ್‌ಆರ್‌ಆರ್’ ತೆರೆಕಂಡು ಒಂದು ವರ್ಷ ಆಗುತ್ತಿದೆ. ಆದರೂ ಕೂಡ ಅವರ ‘ಎನ್ ಟಿ ಆರ್ 30’ ಶೂಟಿಂಗ್ ಆರಂಭವಾಗಿಲ್ಲ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಬಾಲಿವುಡ್ ನಟಿ ಜಾಹ್ನವಿ ಕಪೂರ್ ಈ ಸಿನಿಮಾಗೆ ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ. ನಿರ್ದೇಶಕ ಕೊರಟಾಲ ಶಿವ ಅವರು ಎನ್‌ಟಿಆರ್ 30 ಸಿನಿಮಾವನ್ನು ನಿರ್ದೇಶನ ಮಾಡಬೇಕಿದೆ.

You may also like

Leave a Comment