Home » Actor Pratham: ಒಳ್ಳೆ ಹುಡುಗ ಪ್ರಥಮ್‌ ಮೇಲೆ ʼಡಿ ಬಾಸ್‌ʼ ಅಭಿಮಾನಿಗಳಿಂದ ಹಲ್ಲೆ? 50 ಜನರ ಮೇಲೆ ದೂರು ದಾಖಲು

Actor Pratham: ಒಳ್ಳೆ ಹುಡುಗ ಪ್ರಥಮ್‌ ಮೇಲೆ ʼಡಿ ಬಾಸ್‌ʼ ಅಭಿಮಾನಿಗಳಿಂದ ಹಲ್ಲೆ? 50 ಜನರ ಮೇಲೆ ದೂರು ದಾಖಲು

1 comment
Olle Huduga Pratham

Actor Pratham: ಬಿಗ್‌ಬಾಸ್‌ ಖ್ಯಾತಿ ನಟ ಒಳ್ಳೆ ಹುಡುಗ ಪ್ರಥಮ್‌ ಮೇಲೆ ನಟ ದರ್ಶನ್‌ ಅಭಿಮಾನಿಗಳು ಹೋಟೆಲ್‌ನಲ್ಲಿ ಹಲ್ಲೆ ಮಾಡಲು ಯತ್ನ ಮಾಡಿರುವುದಾಗಿ ವರದಿಯಾಗಿದೆ. ನಟ ಪ್ರಥಮ್‌ ಅವರು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದು, ನಂತರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡು, ಪೊಲೀಸರಿಗೆ ನಟ ದರ್ಶನ್‌ ಅವರ 60 ಅಭಿಮಾನಿಗಳ ವಿರುದ್ಧ ದೂರು ದಾಖಲು ಮಾಡಿದ್ದಾರೆ.

ಬೆಂಗಳೂರಿನ ಪಶ್ಚಿಮ ಸೆನ್‌ ಪೊಲೀಸ್‌ ಠಾಣೆಯಲ್ಲಿ ನಟ ದರ್ಶನ್‌ ಅಭಿಮಾನಿಗಳ ವಿರುದ್ಧ ನಟ ಪ್ರಥಮ್‌ ದೂರನ್ನು ದಾಖಲು ಮಾಡಿದ್ದಾರೆ.

ಇದು ಎರಡನೇ ಸಲ ಆಗ್ತಿರೋದು. ದರ್ಶನ್‌ ಅಭಿಮಾನಿಗಳು ನನ್ನ ಮೇಲೆ ಹಲ್ಲೆಗೆ ಯತ್ನ ಮಾಡಿದ್ದಾರೆ. ಒಂದೂವರೆ ತಿಂಗಳ ಹಿಂದೆ ಮೊದಲ ಸಲ ಹಲ್ಲೆ ಯತ್ನ ನಡೆದಿತ್ತು. ಆಗ ನಾನೇ ಬೇಡ ಎಂದು ದೂರು ನೀಡಿರಲಿಲ್ಲ. ಆದರೆ ನಿನ್ನೆ ಪ್ರತಿಷ್ಠಿತ ಹೋಟೆಲ್‌ನಲ್ಲಿ ಊಟಕ್ಕೆಂದು ಹೋಗಿದ್ದ ಸಂದರ್ಭದಲ್ಲಿ ದರ್ಶನ್‌ ಅಭಿಮಾನಿಗಳೇ ಬಂದು ಬಂದು ಕಿರುಚಾಡಿ ಗಲಾಟೆ ಮಾಡಿ ಹಲ್ಲೆಗೆ ಮುಂದಾಗಿದ್ದರು. ಇದಾದ ನಂತರ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದೆ. ನಂತರ ಬೆಂಗಳೂರು ವೆಸ್ಟ್‌ ಡಿಸಿಪಿ ಕರೆ ಮಾಡಿದ್ದು, ನಾನು ದೂರು ದಾಖಲು ಮಾಡಿದ್ದೇನೆ.

ಮೊದಲ ಸಲದ ಹಲ್ಲೆಯ ವೀಡಿಯೋ ಪೊಲೀಸರಿಗೆ ನೀಡಿದ್ದೀನಿ. ಅವತ್ತು ದೂರು ಬೇಡ ಎಂದು ಸುಮ್ಮನಿದ್ದೆ. ಅವತ್ತೇ ಕಂಪ್ಲೇಂಟ್‌ ಕೊಟ್ಟಿದ್ದರೆ ಇಷ್ಟು ದೊಡ್ಡ ಘಟನೆ ಆಗ್ತಿರಲಿಲ್ಲ ಎಂದು ಹೇಳಿದ್ದಾರೆ.

You may also like

Leave a Comment