Home » ನಟ ಶಿವಕುಮಾರ್ ಸುಬ್ರಮಣಿಯಂ ನಿಧನ!

ನಟ ಶಿವಕುಮಾರ್ ಸುಬ್ರಮಣಿಯಂ ನಿಧನ!

by Mallika
0 comments

ಬಾಲಿವುಡ್‌ನ ನಟ ಶಿವಕುಮಾರ್ ಸುಬ್ರಮಣಿಯಂ ಅವರು ನಿಧನರಾಗಿದ್ದಾರೆ. ಸೋಮವಾರ (ಏ.11) ಮುಂಜಾನೆ ಅವರ ಮರಣ ಹೊಂದಿದ್ದಾರೆ. ಸಾವಿನ ಸುದ್ದಿ ಕೇಳಿ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ವಿಪರ್ಯಾಸ ಎಂದರೆ, ಕೇವಲ ಎರಡು ತಿಂಗಳ ಹಿಂದೆ ಶಿವಕುಮಾರ್ ಶಿವಸುಬ್ರಮಣಿಯಂ ಅವರು ಮಗನನ್ನು ಕಳೆದುಕೊಂಡಿದ್ದರು. ಕ್ಯಾನ್ಸರ್‌ನಿಂದ ಅವರ ಪುತ್ರನ ಸಾವು ಸಂಭವಿಸಿತ್ತು. ಆ ನೋವು ಮಾಸುವ ಮುನ್ನವೇ ಶಿವಕುಮಾರ್ ಶಿವಸುಬ್ರಮಣಿಯಂ ಕೊನೆಯುಸಿರು ಎಳೆದಿರುವುದು ಇಡೀ ಕುಟುಂಬಕ್ಕೆ ಆಘಾತ ಉಂಟು ಮಾಡಿದೆ.

ಬಾಲಿವುಡ್ ಸಿನಿಮಾ ‘2 ಸ್ಟೇಟ್ಸ್’ಮೀನಾಕ್ಷಿ ಸುಂದರೇಶ್ವರ್, ‘ನೇಲ್ ಪಾಲಿಶ್’ಹಿಚಿ’ ಮುಂತಾದ ಬಾಲಿವುಡ್ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಕಥೆ ಮತ್ತು ಚಿತ್ರಕಥೆ ಬರಹಗಾರರಾಗಿಯೂ ಅವರು ಗುರುತಿಸಿಕೊಂಡಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಪ್ರಾರ್ಥಿಸುತ್ತಿದ್ದಾರೆ. ಮುಂಬೈನಲ್ಲಿ ಶಿವಕುಮಾರ್ ಸುಬ್ರಮಣಿಯಂ ಅವರ ಅಂತ್ಯಕ್ರಿಯೆ ಸೋಮವಾರ ನಡೆಯಲಿದೆ.

You may also like

Leave a Comment