Home » Suriya Kanguva Movie : ನಟ ಸೂರ್ಯ ನಟನೆಯ ʼಕಂಗುವʼ ಟೀಸರ್‌ ಬಿಡುಗಡೆ! ಯುದ್ಧಭೂಮಿಯ ರಣರೋಚಕತೆಯ ದೃಶ್ಯ ಮಿಸ್‌ ಮಾಡಬೇಡಿ!

Suriya Kanguva Movie : ನಟ ಸೂರ್ಯ ನಟನೆಯ ʼಕಂಗುವʼ ಟೀಸರ್‌ ಬಿಡುಗಡೆ! ಯುದ್ಧಭೂಮಿಯ ರಣರೋಚಕತೆಯ ದೃಶ್ಯ ಮಿಸ್‌ ಮಾಡಬೇಡಿ!

0 comments
Actor Suriya Kanguva movie

Actor Suriya Kanguva movie : ಟಾಲಿವುಡ್‌ ನಟ ಸೂರ್ಯ(Suriya) ಅತ್ಯುತ್ತಮ ನಟ ಜೊತೆ ಅಭಿಮಾನಿಗಳ ಪ್ರೀತಿಪಾತ್ರ ಎಂದು ಹೇಳಿದರೆ ತಪ್ಪಾಗಲಾರದು. ಹಲವಾರು ಹಿಟ್‌ ಸಿನಿಮಾಗಳ ಮೂಲಕ ತನ್ನನ್ನು ತಾನು ಗುರುತಿಸಿಕೊಂಡಂತಹ ಟಾಲಿವುಡ್(Tollywood) ನಟ ಸೂರ್ಯ ಇದೀಗ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಸಕ್ಕತ್ತಾಗಿ ಸದ್ದು ಮಾಡುತ್ತಿದ್ದಾರೆ. ಹಲವಾರು ಚಿತ್ರಗಳನ್ನು ಮಾಡಿದ ಬಳಿಕ ಇದೀಗ ಸೂರ್ಯ ಅವರ ಇನ್ನೊಂದು ಮುಂಬರುವ ಚಿತ್ರದ ಟೈಟಲ್‌ ಅನೌನ್ಸ್‌  (title announce) ಮಾಡಲಾಗಿದೆ. ಇಷ್ಟು ದಿನಗಳವರೆಗೆ ʼಸೂರ್ಯ 42ʼ ಎಂದು ಹೆಸರು ಕೊಟ್ಟಿದ್ದಾ ಸಿನಿಮಾಗೆ ಇದೀಗ ʼಕಂಗುವʼ (kanguva) ಎಂಬ ಟೈಟಲ್‌ ಫಿಕ್ಸ್‌ ಮಾಡಿದ್ದಾರೆ.

ಹೌದು, ನಟ ಸೂರ್ಯ ತಮ್ಮ ಕಂಗುವ ಚಿತ್ರದ ಟೈಟಲ್‌ ರಿವೀಲ್‌ (Actor Suriya Kanguva movie )ಟೀಸರ್‌ ಅನ್ನು ತಮ್ಮ ಟ್ವಿಟರ್‌ ನಲ್ಲಿ ತನ್ನ ಅಭಿಮಾನಿಗಳಿಗೋಸ್ಕರ ಹಂಚಿಕೊಂಡಿದ್ದಾರೆ. ಅಲ್ಲದೆ, ಡೈರೆಕ್ಟರ್‌ ಶಿವ (Shiva) ಮತ್ತು ತಂಡದೊಂದಿಗೆ ಕೆಲಸ ಮಾಡುತ್ತಿರುವುದು ಬಹಳಷ್ಟು ಸಂತೋಷ ನೀಡಿದೆ. ಹಾಗೆಯೇ ಟ್ವೀಟರ್ ನಲ್ಲಿ #Kanguva ಎಂದು ಬರೆದುಕೊಂಡು ಚಿತ್ರದ ಟೀಸರ್ ವಿಡಿಯೋ ಲಿಂಕ್‌ ಶೇರ್‌ ಮಾಡಿದ್ದಾರೆ.

ಹಾಗೆಯೇ ಟೈಟಲ್‌ ರಿವೀಲ್‌ (title reveal) ಟೀಸರ್‌ನಲ್ಲಿ ಸಿನಿಮಾದ ಬಿಡುಗಡೆ ದಿನಾಂಕ ಮತ್ತು ಸಿನಿಮಾದ ಕಥೆಯನ್ನು ಇನ್ನೂ ಆ ವಿಡಿಯೋದಲ್ಲಿ ತೋರಿಸದಿದ್ದರೂ, ಟೀಸರ್(teaser) ಮಾತ್ರ ಯುದ್ಧಭೂಮಿಯ ರಣ ರೋಚಕತೆ ಎಂಬ ವಿಷಯದ ಬಗ್ಗೆ ತೋರಿಸುತ್ತದೆ. ಇದಲ್ಲದೆ ದೇವಿಶ್ರೀ ಪ್ರಸಾದ್ (Devi Sri Prasad) ನೀಡಿದ ಹಿನ್ನೆಲೆ ಸಂಗೀತ ತುಂಬಾನೇ ಅದ್ಭುತವಾಗಿದೆ. ಅದನ್ನು ಕೇಳಲು ಬಹಳಷ್ಟು ಆನಂದವಾಗುತ್ತದೆ.

ಇದೀಗ ಸೂರ್ಯ ನಟನೆಯ ಸಿನಿಮಾದ ಟೈಟಲ್ ರಿವೀಲ್ ಟೀಸರ್ ನೋಡಿದ ನಂತರ ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲ ಹೆಚ್ಚಾಗಿದೆ. ಸೂರ್ಯ ನಟನೆಯ ಈ ಚಲನಚಿತ್ರದ ಬಗ್ಗೆ ಅಭಿಮಾನಿಗಳು ತಮ್ಮ ಮನದ ಮಾತನ್ನು ಹೇಳಿಕೊಂಡಿದ್ದಾರೆ. ಹಾಗೆಯೇ ಟೀಸರ್‌ ನೋಡಿ ಬಳಿಕ ಗೂಸ್ಬಂಪ್ಸ್ (guse bumps)ಬಂತುʼ ಅಂತ ಕಾಮೆಂಟ್‌ ಮಾಡುವುದರ ಮೂಲಕ ಅಭಿಮಾನಿಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇನ್ನು ಕೆಲವರು ಅದ್ಭುತವಾಗಿದೆ ಅಂತ ಹೇಳುತ್ತಿದ್ದಾರೆ. ಅಲ್ಲದೆ, ಚಿತ್ರದ BGM ಅನ್ನು ತುಂಬಾನೇ ಇಷ್ಟಪಟ್ಟು ಅಭಿನಂದಿಸಿದ್ದಾರೆ. ಹಾಗೇ ಎಲ್ಲಾ ಅಭಿಮಾನಿಗಳು ಕೂಡ ಚಿತ್ರಕ್ಕೆ ಶುಭ ಹಾರೈಸಿ, ಬಿಗ್‌ ಸ್ಕ್ರೀನ್‌ (big screen)ಮೇಲೆ ಸಿನಿಮಾ ನೋಡಲು ಕಾಯುತ್ತಿದ್ದೇವೆ. ನಮನ್ನು ತುಂಬಾನೇ ಕಾಯಿಸಬೇಡಿ ಆದಷ್ಟು ಬೇಗ ಚಲನಚಿತ್ರವನ್ನು ರಿವೀಲ್ ಮಾಡಿ ಎಂದು ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ.

ಹಾಗೆಯೇ ಶಿವ ನಿರ್ದೇಶನ ಮಾಡುತ್ತಿರುವ ಸೂರ್ಯ ನಟನೆಯ ಕಂಗುವ ಚಿತ್ರ 10 ಬೇರೆ – ಬೇರೆ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಸೂರ್ಯ ಮಾತ್ರವಲ್ಲದೇ, ಯೋಗಿ ಬಾಬು (Yogi Babu), ದಿಶಾ ಪಟಾನಿ (Disha patani) ಮತ್ತು ಕೋವೈ ಸರಳಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು 2D ಮತ್ತು 3D ನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಸೂರ್ಯ 5 ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಈ ಚಿತ್ರವನ್ನು ಕೆ ಜ್ಞಾನವೇಲ್ ರಾಜಾ ನಿರ್ಮಿಸಿದ್ದಾರೆ. ಸೂರ್ಯ (Suriya)ನಟಿಸುತ್ತಿರುವ ಈ ಅತ್ಯದ್ಭುತ ಕಂಗುವ ಚಲನಚಿತ್ರ 2024 ರ ಆರಂಭದಲ್ಲಿ ಕನ್ನಡ ಸಿನಿ ತೆರೆಯಲ್ಲಿ ಕಾಣಿಸಿಕೊಳ್ಳಲಿದೆ ಎಂದು ತಿಳಿದು ಬಂದಿದೆ.

You may also like

Leave a Comment