Home » Actor Vishal: ನಟ ವಿಶಾಲ್‌ ಮದುವೆ ನಿಗದಿ; ಇವರೇ ಆ ಹುಡುಗಿ

Actor Vishal: ನಟ ವಿಶಾಲ್‌ ಮದುವೆ ನಿಗದಿ; ಇವರೇ ಆ ಹುಡುಗಿ

0 comments

Actor Vishal: ಕಳೆದ ಕೆಲವು ವರ್ಷಗಳಿಂದ, ನಟ ವಿಶಾಲ್ ಅವರ ವಿವಾಹದ ಬಗ್ಗೆ ಹಲವಾರು ಸುದ್ದಿಗಳು ಹಬ್ಬಿದ್ದವು. ಇತ್ತೀಚಿನ ವರದಿಗಳ ಪ್ರಕಾರ, 47 ವರ್ಷದ ನಟ ಕಬಾಲಿ ಮತ್ತು ಸೋಲೋ ಚಿತ್ರಗಳಲ್ಲಿ ನಟಿಸಿದ್ದ ನಟಿ ಸಾಯಿ ಧನ್ಶಿಕಾ ಅವರನ್ನು ವಿವಾಹವಾಗಲಿದ್ದಾರೆ.

ಈ ಸುದ್ದಿಯನ್ನು ಇಬ್ಬರಿಂದಲೂ ದೃಢಪಟ್ಟಿಲ್ಲ. ಇತ್ತೀಚೆಗೆ ವಿಶಾಲ್ ತಮ್ಮ ಮದುವೆಯ ಕುರಿತು ಬಹಿರಂಗಪಡಿಸಿದರು. ಇದಕ್ಕೂ ಮೊದಲು, ನಡಿಗರ್ ಸಂಗಮ್ ಕಟ್ಟಡದ ನಿರ್ಮಾಣ ಪೂರ್ಣಗೊಂಡ ನಂತರ ಮದುವೆಯಾಗಿ ಹೇಳಿದ್ದರು. ಕಟ್ಟಡ ಪೂರ್ಣಗೊಳ್ಳುವ ಹಂತದಲ್ಲಿದ್ದಾಗ, ಇತ್ತೀಚಿಗೆ ಮದುವೆಯ ಬಗ್ಗೆ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ನಟ ವಿಶಾಲ್‌, ನಾನು ಮದುವೆಯಾಗಲು ವ್ಯಕ್ತಿಯನ್ನು ಕಂಡು ಹುಡಕಿದ್ದೇನೆ. ಇದೊಂದು ಪ್ರೇಮ ವಿವಾಹವಾಗಲಿದೆ ಎಂದು ಹೇಳಿದರು. ಈ ಕುರಿತು
ವಿವಾಹದ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಹೇಳಿದರು.

ಏತನ್ಮಧ್ಯೆ, ತಮಿಳು ಚಲನಚಿತ್ರೋದ್ಯಮದ ಒಳಗಿನ ವರದಿಗಳ ಪ್ರಕಾರ ವಧು ಬೇರೆ ಯಾರೂ ಅಲ್ಲ ಸಾಯಿ ಧನ್ಶಿಕಾ ಎಂದು ತಿಳಿದುಬಂದಿದೆ. ಇಂದು ರಾತ್ರಿ (ಮೇ 19) ನಡೆಯಲಿರುವ ಧನ್ಶಿಕಾ ಅವರ ಮುಂಬರುವ ಚಿತ್ರ ಯೋಗಿ ಡಾಗೆ ವಿಶಾಲ್ ಮುಖ್ಯ ಅತಿಥಿಯಾಗಿ ಹಾಜರಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿಶಾಲ್ ಇಂದು ಸಂಜೆ ಅಧಿಕೃತ ಘೋಷಣೆ ಮಾಡಬಹುದು ಎಂದು ಊಹಿಸಲಾಗಿದೆ.

ಹಿಂದೆ, ವಿಶಾಲ್ ವರಲಕ್ಷ್ಮಿ ಶರತ್‌ಕುಮಾರ್ ಅವರನ್ನು ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿ ಹಬ್ಬಿತ್ತು. ನಂತರ, ಅವರು ನಟಿ ಅನಿಶಾ ಅಲ್ಲಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು, ಆದರೆ ಕೆಲವೊಂದು ಕಾರಣಗಳಿಂದ ಅವರು ತಮ್ಮ ಮದುವೆಯನ್ನು ರದ್ದುಗೊಳಿಸಿದರು.

ವೃತ್ತಿಜೀವನದ ಕುರಿತು ಹೇಳುವುದಾದರೆ, ವಿಶಾಲ್ ಕೊನೆಯ ಬಾರಿಗೆ ‘ಮಧ ಗಜ ರಾಜ’ ಚಿತ್ರದಲ್ಲಿ ಕಾಣಿಸಿಕೊಂಡರು. ಇದು 12 ವರ್ಷಗಳ ವಿಳಂಬದ ನಂತರ ಬಿಡುಗಡೆಯಾದರೂ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸನ್ನು ಕಂಡಿತು.

You may also like