Home » ನನ್ನ ಮಗನ ವಯಸ್ಸಿನವರು ಅಂದರೂ, ಆ ನಿರ್ಮಾಪಕರು ಕೇಳಲಿಲ್ಲ : ಮಂಚದ ಕರಾಳ ಮುಖ ಬಿಚ್ಚಿಟ್ಟ ನಟಿ ಚಾರ್ಮಿಳಾ

ನನ್ನ ಮಗನ ವಯಸ್ಸಿನವರು ಅಂದರೂ, ಆ ನಿರ್ಮಾಪಕರು ಕೇಳಲಿಲ್ಲ : ಮಂಚದ ಕರಾಳ ಮುಖ ಬಿಚ್ಚಿಟ್ಟ ನಟಿ ಚಾರ್ಮಿಳಾ

0 comments

ಈಗ ಹಲವು ತಾಯಿ ಪಾತ್ರದಲ್ಲಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅನೇಕ ಸೂಪರ್ ಸ್ಟಾರ್ ಸಿನಿಮಾಗಳಲ್ಲಿ ನಾನಾ ರೀತಿಯ ಪಾತ್ರಗಳನ್ನೂ ಚಾರ್ಮಿಳಾ ಮಾಡಿದ್ದಾರೆ. ಅವರು ತಮ್ಮ ಸಂದರ್ಶನವೊಂದರಲ್ಲಿ ತಮ್ಮ ಜೀವನದಲ್ಲಿ ನಡೆದ ನಡೆಯಬಾರದ ಕಹಿ ಘಟನೆಗಳನ್ನು ಹಂಚಿಕೊಂಡಿದ್ದಾರೆ.

ಸಿನಿಮಾ ರಂಗಕ್ಕೆ ಬಾಲಕಲಾವಿದೆಯಾಗಿ ಪದಾರ್ಪಣೆ ಮಾಡಿರುವ ಚಾರ್ಮಿಳಾ, ಆನಂತರ ಒಯಿಲಟ್ಟಂ ಸಿನಿಮಾದ ಮೂಲಕ ನಾಯಕಿಯಾಗಿ ತಮಿಳು ಸಿನಿಮಾ ರಂಗದಲ್ಲಿ ನಟಿಸಿದವರು.
“ಒಮ್ಮೆ ಸಿನಿಮಾ ಶೂಟಿಂಗ್ ಗಾಗಿ ನಾನು ಕ್ಯಾಲಿಕಟ್ ಗೆ ಹೋಗಿದ್ದೆ. ಎರಡ್ಮೂರು ದಿನ ಶೂಟಿಂಗ್ ಚೆನ್ನಾಗಿಯೇ ನಡೆಯಿತು. ಆ ಸಿನಿಮಾದ ನಿರ್ಮಾಪಕರು ನನ್ನನ್ನು ಸಹೋದರಿ ಎಂದೇ ಕರೆಯುತ್ತಿದ್ದರು. ಇನ್ನೂ ಆ ನಿರ್ಮಾಪಕರಿಗೆ ವಯಸ್ಸು 24 ವರ್ಷ ಆಗಿದ್ದರಿಂದ ನಾನೂ ಕೂಡ ತಮ್ಮನಂತೆಯೇ ಸ್ವೀಕರಿಸಿದ್ದೆ. ಎರಡ್ಮೂರು ದಿನಗಳ ನಂತರ ಅವರು ಬೇರೆಯವರು ಮೂಲಕ ನನಗೆ ಆಫರ್ ನೀಡಿದರು. ನಮ್ಮಿಬ್ಬರಲ್ಲಿ ಒಬ್ಬರ ಜೊತೆ ಮಂಚ ಹತ್ತಿದರೆ ದುಡ್ಡು ಕೊಡುವುದಾಗಿ ತಿಳಿಸಿದರು. ಅವರ ಮಾತಿಂದ ನಾನು ಶಾಕ್ ಆದೆ ” ಎಂದು ಆಕೆ ಹೇಳಿಕೊಂಡಿದ್ದಾರೆ.

” ಹಾಗೆ ಅವತ್ತು ನನ್ನ ಮಂಚಕ್ಕೆ ಕರೆದ ಆ ಹುಡುಗರು ನನಗಿಂತ ಚಿಕ್ಕವರು. ಅವರು ನನ್ನ ಮಗನಿಗಿಂತ ಸ್ವಲ್ಪ ದೊಡ್ಡವರು ಇರಬಹುದು. ಅವರಿಗೆ ಇದನ್ನೇ ಹೇಳಿದೆ. ಏನೇ ಹೇಳಿದರೂ ಅವರು ಕೇಳಲಿಲ್ಲ. ರಿಕ್ವೆಸ್ಟ್ ನ ರೂಪದಲ್ಲಿ ಬೇಡಿಕೆ ಇಟ್ಟರು. ನಾನು ಕೋಪದಿಂದಲೇ ಆ ಸಿನಿಮಾದ ಶೂಟಿಂಗ್ ಅನ್ನು ಅರ್ಧಕ್ಕೆ ಬಿಟ್ಟು ವಿಮಾನ ಏರಿ ಚೆನ್ನೈಗೆ ಬಂದೆ. ಈ ರೀತಿಯ ಅನುಭವಗಳು ಬಹುತೇಕ ನಟಿಯರಿಗೆ ಆಗಿರುತ್ತವೆ. ಅದಕ್ಕೆ ಆಸ್ಪದ ಕೊಡಬಾರದು. ಒಂದುವೇಳೆ ಕೊಟ್ಟರೆ ಇಂತಹ ಪ್ರಕರಣಗಳು ಇನ್ನೂ ಹೆಚ್ಚಾಗುತ್ತವೆ “ಎಂದಿದ್ದಾರೆ ಆಕೆ.

You may also like

Leave a Comment