Home » Hansika Motwani gossips: ಬಾಲ ಪ್ರತಿಭೆಯಾಗಿ ಮಿಂಚಿದ ಹನ್ಸಿಕಾ ಹಾರ್ಮೋನ್ ಇಂಜೆಕ್ಷನ್ ತಗೊಂಡಿದ್ದರ ಕುರಿತು ಕೊನೆಗೂ ಸತ್ಯ ಹೇಳಿದ ನಟಿ!

Hansika Motwani gossips: ಬಾಲ ಪ್ರತಿಭೆಯಾಗಿ ಮಿಂಚಿದ ಹನ್ಸಿಕಾ ಹಾರ್ಮೋನ್ ಇಂಜೆಕ್ಷನ್ ತಗೊಂಡಿದ್ದರ ಕುರಿತು ಕೊನೆಗೂ ಸತ್ಯ ಹೇಳಿದ ನಟಿ!

0 comments

Hansika Motwani Gossips : ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಹನ್ಸಿಕಾ ಹೃತಿಕ್ ರೋಷನ್ ನಟನೆಯ ‘ಕೋಯಿ ಮಿಲ್ ಗಯಾ’ ಸಿನಿಮಾದಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದು ಮಾತ್ರವಲ್ಲ. ತಮಿಳು, ತೆಲುಗು, ಮಲಯಾಳಂ,ಪುನೀತ್ ರಾಜ್ಕುಮಾರ್ ಜೊತೆ ‘ಬಿಂದಾಸ್’ ಸಿನಿಮಾದಲ್ಲಿ ನಟಿಸಿದ್ದ ಹನ್ಸಿಕಾ ಮೋಟ್ವಾನಿ ಅವರಿಗೆ ಕರುನಾಡಿನಲ್ಲಿ ಕೂಡ ಫೇಮಸ್ ಆಗಿದ್ದು, ಒಟ್ಟು 50 ಸಿನಿಮಾಗಳಲ್ಲಿ ನಟಿ ಹನ್ಸಿಕಾ ಬಣ್ಣ ಹಚ್ಚಿ ಅಭಿಮಾನಿಗಳನ್ನು ರಂಜಿಸಿದ್ದಾರೆ.

ತೆಲುಗಿನ ‘ದೇಶಮುದುರು’ ಸಿನಿಮಾ ಮೂಲಕ ನಾಯಕಿಯಾಗಿ ಬಣ್ಣ ಹಚ್ಚಿ ಬಾಲ ನಟಿಯಾಗಿ ಮಿಂಚಿದ ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ತನ್ನ ಮೈ ಕೈ ತುಂಬಿಕೊಂಡು ಮೋಹಕ ಮೈ ಮಾಟದ ಮೂಲಕ ಪಡ್ಡೆ ಹುಡುಗರ ನಿದ್ರೆಗೆಡಿಸಿದ್ದರು. ಈ ನಡುವೆ ನಟಿ ಹನ್ಸಿಕಾ ಮೋಟ್ವಾನಿ ತಾಯಿ ಹಾರ್ಮೋನ್ ಇಂಜೆಕ್ಷ್ ಕೊಟ್ಟ ಪರಿಣಾಮ ಹನ್ಸಿಕಾ ಮೈ ಕೈ ತುಂಬಿಕೊಂಡು (Hansika Motwani gossips) ಮತ್ತಷ್ಟು ಸುಂದರವಾಗಿ ಕಾಣುತ್ತಿದ್ದಾರೆ ಎಂಬ ಸುದ್ದಿ ಒಂದು ಕಾಲದಲ್ಲಿ ಎಲ್ಲೆಡೆ ಹಬ್ಬಿ ಅಭಿಮಾನಿಗಳ ನಡುವೆ ಚರ್ಚೆಗೆ ಒಂದು ಕಾರಣವಾಗಿ ಪರಿಣಮಿಸಿತ್ತು. ನಟಿ ಹನ್ಸಿಕಾ ಮೋಟ್ವಾನಿ ತಾಯಿ ವೃತ್ತಿಯಲ್ಲಿ ವೈದ್ಯರಾದ ಕಾರಣ ಈ ಊಹಾಪೋಹಗಳು ನಿಜವೇನೋ ಎಂಬ ಭಾವನೆ ಜನರಲ್ಲಿ ಮನೆ ಮಾಡಿತ್ತು. ಸದ್ಯ ಈ ವಿಚಾರದ ಬಗ್ಗೆ ಸುಳ್ಳು ಸುದ್ದಿ ಹಬ್ಬಿ ಎಷ್ಟೋ ಸಮಯದ ಬಳಿಕ ಈ ಕುರಿತು ಹನ್ಸಿಕಾ ತಾಯಿ ಮೌನ ಮುರಿದಿದ್ದು, ಅನುಮಾನಗಳಿಗೆ ತೆರೆ ಎಳೆಯುವ ಪ್ರಯತ್ನ ನಡೆಸಿದ್ದಾರೆ.

ಕಳೆದ ವರ್ಷವಷ್ಟೇ (ಡಿ.4)ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ಉದ್ಯಮಿ ಸೊಹೈಲ್ ಕತುರಿಯಾ (Sohael Kathuriya) ಜೊತೆ ಅವರು ಸಪ್ತಪದಿ ತುಳಿದಿದ್ದರು. ಇತ್ತೀಚೆಗೆ ಯಾವುದೋ ಕಾರ್ಯಕ್ರಮದ ವೇಳೆ, ಹನ್ಸಿಕಾ ಮೋಟ್ವಾನಿ ಬಗ್ಗೆ ಹರಡಿದ್ದ ಸುದ್ದಿಯ ಕುರಿತು ಬೇಸರ ವ್ಯಕ್ತ ಪಡಿಸಿದ್ದಾರೆ. ನನಗೆ 21 ವರ್ಷವಿರುವಾಗ ಜನರು ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುವಾಗ ತುಂಬಾ ಬೇಸರವಾಗುತ್ತಿತ್ತು. ಅಷ್ಟೇ ಸಾಲದು ಎಂಬಂತೆ, ತಾನು ಬೇಗ ಬೆಳೆಯಲು, ಮೈ ಕೈ ತುಂಬಿಕೊಳ್ಳಲು ಇಂಜೆಕ್ಷನ್ ತಗೊಂಡಿದ್ದೆ ಎಂದೆಲ್ಲ ಕೆಟ್ಟದಾಗಿ ನನ್ನ ಕುರಿತು ಬರೆದಿದ್ದರು. ನಾನು 8 ವರ್ಷಕ್ಕೆ ಬಣ್ಣ ಹಚ್ಚಿದ ಮಾತ್ರಕ್ಕೆ ನನ್ನ ತಾಯಿ ನನಗೆ ಹಾರ್ಮೋನ್ ಇಂಜೆಕ್ಷನ್ ಕೊಟ್ಟು ಬೇಗ ದೊಡ್ಡವಳಾಗುವಂತೆ ಮಾಡಿದ್ದಾರೆ ಎಂದು ಹೇಗೆ ಜನ ಅಂದುಕೊಳ್ಳುತ್ತಾರೆ ಎಂದು ಪ್ರಶ್ನಿಸಿ ಅಸಮಾಧಾನದ ಜೊತೆಗೆ ತಮ್ಮ ಮನದ ದುಃಖವನ್ನು ಹನ್ಸಿಕಾ ಹೊರಹಾಕಿದ್ದಾರೆ.

ಇದೇ ವೇಳೆ, ಹನ್ಸಿಕಾ ಮೋಟ್ವಾನಿ ತಾಯಿ, ಮೋನ ಅವರು ಕೂಡ ಪ್ರತಿಕ್ರಿಯೆ ನೀಡಿದ್ದು, “ಒಂದು ವೇಳೆ ಇದು ನಿಜ ಎಂದಾಗಿದ್ದಲ್ಲಿ ತಾನು ಟಾಟಾ ಬಿರ್ಲಾಗಿಂತ ಹೆಚ್ಚಿನ ಆದಾಯ ಗಳಿಸಿ ಶ್ರೀಮಂತರ ಪಟ್ಟಿಯಲ್ಲಿ ಗುರುತಿಸಿಕೊಳ್ಳುತ್ತಿದ್ದೆ. ಅಷ್ಟೇ ಏಕೆ? ಇದು ನಿಜವಾಗಿದ್ದರೆ ಹೆಚ್ಚಿನ ಹೆಣ್ಣು ಮಕ್ಕಳು ಬೇಗ ದೊಡ್ಡವರಾಗಲು ಸಲಹೆ ಕೇಳಲು ನನ್ನ ಬಳಿ ಮುಗಿ ಬೀಳುತ್ತಿದ್ದರು. ನಾವು ಪಂಜಾಬಿಗಳಾಗಿದ್ದು, ನಮ್ಮ ಮನೆಯ ಹೆಣ್ಣುಮಕ್ಕಳು 12ರಿಂದ 16 ವರ್ಷಕ್ಕೆ ದೊಡ್ಡವರಾಗುತ್ತಾರೆ. ಹೀಗಾಗಿ, ಹನ್ಸಿಕಾ ಕೂಡ ಮೈ ಕೈ ತುಂಬಿಕೊಂಡ ದೇಹ ಸಿರಿ ಹೊಂದಿದ್ದಾರೆ ಹೊರತು ಯಾವುದೇ ಇಂಜೆಕ್ಷನ್ ನಿಂದಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಇದೆಲ್ಲ ಸುಳ್ಳು ಸುದ್ದಿ ಎಂದು ಮೋನ ಹೇಳಿದ್ದಾರೆ. ಆದರೂ ಆ ರೀತಿಯಾಗಿ ಗಾಸಿಪ್ ಸುದ್ದಿಗಳನ್ನು ಬರೆಯುವವರಿಗೆ ಕಾಮನ್‌ ಸೆನ್ಸ್ ಬೇಡ್ವಾ? ಎಂದು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟ ಹನ್ಸಿಕಾ ಮೋಟ್ವಾನಿ ಅವರು ತಮ್ಮ ಮದುವೆಯ ವಿಡಿಯೋ ಪ್ರಸಾರ ಹಕ್ಕನ್ನು ಓಟಿಟಿಗೆ ನೀಡಿದ್ದು, ಈ ಎಪಿಸೋಡ್‌ಗಳಲ್ಲಿ ತಮ್ಮ ಲೈಫ್‌ ಬಗ್ಗೆಯೂ ಮಾತನಾಡಿದ್ದಾರೆ ಎನ್ನಲಾಗಿದೆ.

You may also like

Leave a Comment