6
Harshika Poonacha: ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ದಂಪತಿಗಳ ಮಗುವಿಗೆ ನಾಮಕರಣ ನಡೆದಿದ್ದು, ಮಗುವಿಗೆ ತ್ರಿದೇವಿ ಪೊನ್ನಕ್ಕ ಎಂದು ಹೆಸರಿಡಲಾಗಿದೆ.ಮಗುವಿನ ಫೋಟೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
https://www.instagram.com/p/DJLSgJmubym/?hl=en
ಪುತ್ರಿಗೆ ತ್ರಿದೇವಿ ಪೊನ್ನಕ್ಕ ಎಂದು ದೇವರ ಹೆಸರು ಇಡಲಾಗಿದೆ. ಅಂದಹಾಗೆ ಪೊನ್ನಕ್ಕ ಎಂಬುವುದು ಸರ್ ನೇಮ್ ಅಲ್ಲ, ಅದು ಕೂಡಾ ಹೆಸರು.
ಹರ್ಷಿಕಾ ಪೂಣಚ್ಚ 2024ರಲ್ಲಿ ಗರ್ಭಿಣಿ ಆಗಿದ್ದು, ಸೀಮಂತ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಲಾಗಿತ್ತು. ಚಿತ್ರರಂಗದ ಹಲವು ಸೆಲೆಬ್ರೆಟಿಗಳು, ಹರ್ಷಿಕಾ, ಭುವನ್ ಅವರ ಗೆಳೆಯರು ಕುಟುಂಬದವರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. 2024ರ ಸೆಪ್ಟೆಂಬರ್ ತಿಂಗಳಲ್ಲಿ ಮುದ್ದಾದ ಹೆಣ್ಣು ಮಗು ಜನಿಸಿತು.
