Home » ಸ್ವಂತ ತಂಗಿಯ ವಿರುದ್ಧವೇ ಕೇಸು ದಾಖಲಿಸಿದ ನಟಿ ಕಾರುಣ್ಯ ರಾಮ್‌

ಸ್ವಂತ ತಂಗಿಯ ವಿರುದ್ಧವೇ ಕೇಸು ದಾಖಲಿಸಿದ ನಟಿ ಕಾರುಣ್ಯ ರಾಮ್‌

0 comments

ಕನ್ನಡ ಚಿತ್ರರಂಗದ ನಟಿ ಕಾರುಣ್ಯ ರಾಮ್‌ ತಮ್ಮ ಸ್ವಂತ ತಂಗಿಯ ವಿರುದ್ಧವೇ ಪೊಲೀಸ್‌ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ. ಕಾರುಣ್ಯ ರಾಮ್‌ ಸಹೋದರಿ ಸಮೃದ್ಧಿ ರಾಮ್‌ ಅವರು ಮನೆಯಲ್ಲಿರುವ ಹಣ, ಚಿನ್ನವನ್ನೆಲ್ಲ ದುರುಪಯೋಗ ಮಾಡಿ ಮನೆ ಬಿಟ್ಟು ಹೋಗಿದ್ದಾರೆ ಎಂದು ದೂರನ್ನು ಆರ್‌ಆರ್‌ ನಗರ ಪೊಲೀಸ್‌ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ.

ಸಮೃದ್ಧಿ ರಾಮ್‌ ಮೇಕಪ್‌ ಕಲಾವಿದೆ ಆಗಿದ್ದು, ಉದ್ಯಮವೊಂದನ್ನು ಮಾಡಿದ್ದರು. ಕಾರುಣ್ಯ ರಾಮ್‌ ನೀಡಿರುವ ದೂರಿನ ಪ್ರಕಾರ ಸಮೃದ್ಧಿ ರಾಮ್ ಬೆಟ್ಟಿಂಗ್‌ ಗೀಳಿಗೆ ಬಿದ್ದಿದ್ದು, ಇದರಿಂದ ಸುಮಾರು 25 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ಬೆಟ್ಟಿಂಗ್‌ಗಾಗಿ ಖಾಸಗಿ ವ್ಯಕ್ತಿಗಳಿಂದ ಬಡ್ಡಿಗೆ ಸಾಲ ಮಾಡಿ, ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿಯ ಹಣ ಮತ್ತು ಚಿನ್ನದ ಒಡವೆಗಳನ್ನು ಬಳಸಿ ಬೆಟ್ಟಿಂಗ್‌ ಆಡಿ ಹಾಳು ಮಾಡಿದ್ದಾರೆ. ಮನೆ ಮಂದಿ ಹಣ, ಚಿನ್ನದ ಕುರಿತು ಕೇಳಿದಾಗ ಸಮೃದ್ಧಿ ಮನೆ ಬಿಟ್ಟು ಹೋಗಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಸಾಲ ಕೊಟ್ಟವರು ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿ ಅಶ್ಲೀಲ ಸಂದೇಶ, ಬೆದರಿಕೆ ಸಂದೇಶ ಕಳುಹಿಸುತ್ತಿದ್ದಾರೆ ಕಾರುಣ್ಯರಾಮ್‌ ಆರೋಪ ಮಾಡಿದ್ದಾರೆ.

ಸಹೋದರಿಯ ಜೊತೆಗೆ ಪ್ರತಿಭಾ, ರಕ್ಷಿತ್‌, ಪ್ರಜ್ವಲ್‌,ಸಾಗರ್‌ ಎನ್ನುವವರ ವಿರುದ್ಧವೂ ಕಾರುಣ್ಯ ರಾಮ್‌ ದೂರು ದಾಖಲು ಮಾಡಿದ್ದಾರೆ.

You may also like