Kasturi Shankar: ನಟಿ, ಬಿಜೆಪಿ ವಕ್ತಾರೆ ಕಸ್ತೂರಿ ಶಂಕರ್ ಅವರನ್ನು ಚೆನ್ನೈ ಪೊಲೀಸರು ಹೈದರಾಬಾದ್‌ನ ಗಚ್ಚಿಬೋಲಿ ಪ್ರದೇಶದಲ್ಲಿ ಬಂಧನ ಮಾಡಿದ್ದಾರೆ. ಇಂದು (ನ.16) ರಂದು ಪೊಲೀಸರು ಬಂಧನ ಮಾಡಿದ್ದಾರೆ. ನಟಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರೂ ನ್ಯಾಯಾಲಯವು ಅರ್ಜಿ ನಿರಾಕರಿಸಿದ ಕಾರಣ ಬಂಧನವಾಗಿದೆ.
ಹಿಂದು ಮಕ್ಕಳ್ ಕಚ್ಚಿ ಸಂಘಟನೆ ಚೆನ್ನೈನಲ್ಲಿ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ನಟಿ ಕಸ್ತೂರಿ ಶಂಕರ್ ತೆಲುಗು ಜನರ ವಿರುದ್ಧ, ಅಬ್ರಾಹ್ಮಣರ ವಿರುದ್ಧ, ಅಬ್ರಾಹ್ಮಣರ ಸರಕಾರಿ ಸಿಬ್ಬಂದಿ ಕುರಿತು ವಿವಾದಾತ್ಮಕ ಮಾತುಗಳನ್ನು ಹೇಳಿದ್ದರು. ಈ ಕಾರ್ಯಕ್ರಮ ನವೆಂಬರ್‌ನಲ್ಲಿ ನಡೆದಿತುತ. ವಿವಾದಾತ್ಮಕ ಮಾತಿನ ಕುರಿತು ತೆಲುಗು ರಾಜ್ಯ ಸೇರಿ ತಮಿಳುನಾಡಿನಲ್ಲಿಯೂ ಪ್ರತಿಭಟನೆಗಳು ನಡೆದಿತ್ತು. ಹಾಗಾಗಿ ನಟಿ ವಿರುದ್ಧ ತಮಿಳುನಾಡಿನ ಡಿಎಂಕೆಯ ಕೆಲ ಮುಖಂಡರು ಸೇರಿ ಕೆಲವೆಡೆ ದೂರು ನೀಡಿದ್ದರು.
ನಟಿ ಹೇಳಿದ್ದೇನು?
ತಮಿಳು ರಾಜರು ಇರಿಸಿಕೊಂಡಿದ್ದ ವೇಶ್ಯೆಯರ ಸೇವೆ ಮಾಡಲು ಬಂದ ತೆಲುಗರು ಈಗ ತಾವೇ ತಮಿಳರು ಎಂದು ಹೇಳುತ್ತಿದ್ದಾರೆ. ಇಂಥವರು ಬ್ರಾಹ್ಮಣರು ಇಲ್ಲಿನವರಲ್ಲ ಹೊರಗಿನಿಂದ ಬಂದವರು ಎನ್ನುತ್ತಿದ್ದಾರೆʼ ಎಂದು ಹೇಳಿಕೆ ನೀಡಿದ್ದರು. ಇದರ ಜೊತೆಗೆ ಅಬ್ರಾಹ್ಮಣ ಸಿಬ್ಬಂದಿಯರೆಲ್ಲರು ಲಂಚ ಪಡೆಯುತ್ತಿದ್ದಾರೆ , ಸೋಮಾರಿಗಳು ಎಂದು ತಮ್ಮ ಭಾಷಣದಲ್ಲಿ ಹೇಳಿದ್ದರು. ನಾಲ್ಕು ವರ್ಣಗಳಿಂದ ದಲಿತ, ಆದಿವಾಸಿಗಳನ್ನು ಹೊರಗೆ ಇಡಬೇಕು. ಅವರ್ಣೀಯರು ಎಂದು ಕರೆಯಬೇಕು. ಜಾತಿ ವ್ಯವಸ್ಥೆ ಅಳಿಯುವುದೇ ಇಲ್ಲ, ಅದು ಇರಬೇಕು. ನಾಲ್ಕು ವರ್ಣಗಳು ಒಟ್ಟಾಗಿ ಒಗ್ಗಟ್ಟಿನಿಂದ ಮುಂದೆ ನಡೆದರೆ ಹಿಂದೂ ಧರ್ಮ ಬೆಳೆಯುತ್ತದೆ ಎಂಬ ಮಾತನ್ನೂ ಹೇಳಿದ್ದರು.
ನಟಿ ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಚೆನ್ನೈ ಬಿಟ್ಟು ಪರಾರಿಯಾಗಿದ್ದರು. ನಂತರ ನಿರೀಕ್ಷಣಾ ಜಾಮೀನು ಅರ್ಜಿ ಹಾಕಿದ್ದರೂ, ನ್ಯಾಯಾಲಯ ಅರ್ಜಿ ನಿರಾಕರಣೆ ಮಾಡಿತ್ತು. ಇದೀಗ ಪೊಲೀಸರು ನಟಿಯನ್ನು ಬಂಧನ ಮಾಡಿದ್ದಾರೆ.
