ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಫೋಟೋ ಅಥವಾ ವಿಡಿಯೋಗಳನ್ನು ಹಂಚಿಕೊಂಡು ಸಾಕಷ್ಟು ಲೈಕ್ ಮತ್ತು ಕಾಮೆಂಟ್ ಗಳನ್ನು ಪಡೆಯುವುದೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಅದರಲ್ಲೂ ಸೆಲೆಬ್ರಿಟಿಗಳಿಗಂತೂ ಸಾಕಷ್ಟು ಫಾಲೋವರ್ಸ್ ಇದ್ದು, ಅವರು ಪೋಸ್ಟ್ ಹಾಕೋದನ್ನೇ ಕಾಯುತ್ತಿರುತ್ತಾರೆ. ಇನ್ನೂ ಮುಖ್ಯವಾಗಿ ಸಿನಿ ನಟಿಯರ ಪೋಸ್ಟ್ ಗಳಿಗಂತೂ ಹೆಚ್ಚಿನ ಬೇಡಿಕೆ ಇದ್ದು, ಪೋಸ್ಟ್ ಮಾಡುವುದೇ ತಡ ಅಭಿಮಾನಿಗಳು ಮುಗಿಬಿದ್ದು ಲೈಕ್ಸ್, ಕಾಮೆಂಟ್ಸ್ ನೀಡಿರುತ್ತಾರೆ. ಆದರೆ ಇಲ್ಲೊಬ್ಬರು ಖ್ಯಾತ ಸಿನಿ ನಟಿ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸದ್ಯ ಮಲೆಯಾಳಂ ಚಿತ್ರರಂಗದಲ್ಲಿ ಭಾರೀ ಬೇಡಿಕೆ ಇರುವ, ಸಾಲು ಸಾಲು ಚಿತ್ರಗಳು ಅರಸಿಕೊಂಡು ಬರುತ್ತಿರುವ, ಜನರಿಗೆ ಸಾಕಷ್ಟು ಇಷ್ಟವಾಗಿರುವ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಆಕ್ಟಿವ್ ಇದ್ದು ಸುಮಾರು 10ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ಖ್ಯಾತ ನಟಿ ಎಂದರೆ ಮಾಳವಿಕ ಮೆನನ್. ಹೌದು ಇದೇ ಮಾಳವಿಕ ಮೆನನ್ ಇದೀಗ ತಮ್ಮ ಇನ್ಸಟಾಗ್ರಾಮ್ ಪೋಸ್ಟ್ ಮೂಲಕ ಸುದ್ಧಿಯಲ್ಲಿದ್ದಾರೆ. ಅಷ್ಟಕ್ಕೂ ಮಾಳವಿಕ ಅವರ ಪೋಸ್ಟ್ ಗೆ ಅಭಿಮಾನಿಗಳು ಗರಂ ಆಗಿದ್ದಾದರು ಯಾಕೆ ಗೊತ್ತಾ?
ಇತ್ತೀಚೆಗೆ ಮಾಳವಿಕ ಅವರು ಹಳದಿ ಡ್ರೆಸ್ಸ್ ಧರಿಸಿ ವಿಡಿಯೋ ಮಾಡಿ ಇನ್ಸಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ನೋಡಿದ ಅಭಿಮಾನಿಗಳು, ಈ ವಿಡಿಯೋದಲ್ಲಿ ಮಾಳವಿಕ ಯಾವುದೇ ಒಳ ಉಡುಪುಗಳನ್ನು ಧರಿಸಿಲ್ಲ. ಬೇಕಾಬಿಟ್ಟಿ ಬಟ್ಟೆ ಹಾಕಿಕೊಂಡು ವಿಡಿಯೋ ಶೂಟ್ ಮಾಡಿದ್ದಾರೆ. ಇದು ಸಮಾಜದಲ್ಲಿ ಇತರೆ ಹೆಣ್ಣು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ದೂರಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

ಆದರೆ ಸಂದರ್ಶನವೊಂದರಲ್ಲಿ ಇದರ ಬಗ್ಗೆ ಮಾತನಾಡಿದ ಮಾಳವಿಕ ಮೆನನ್ ‘ಲೈಟ್ ನಿಂದ ಅದು ಹೀಗೆ ಕಾಣುತ್ತಿದ್ದು ಜನರು ವಿಡಿಯೋವನ್ನು ಕ್ಲೋಸ್ ಅಪ್ ಮಾಡಿ ನೋಡಿ ಹೀಗೆ ಹೇಳುತ್ತಿದ್ದಾರೆ. ಇದಕ್ಕೂ ಮೊದಲು ನಾನು ಅದೇ ಬಟ್ಟೆಯಲ್ಲಿನ ಫೋಟೋ ಪೋಸ್ಟ್ ಮಾಡಿದ್ದೆ. ಆದರೆ ಅದಕ್ಕೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ, ಇದಕ್ಕೆ ಮಾತ್ರ ಹೀಗೆ ಹೇಳುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಮಾಳವಿಕ ಮೆನನ್ ತಮ್ಮ ವಿಡಿಯೋ ಬಗ್ಗೆ, ಅದರ ಕುರಿತು ಕಮೆಂಟ್ ಹಾಕಿದವರಿಗೆ ಸ್ಪಷ್ಟೀಕರಣ ನೀಡಿದ್ದು ನಾನು ಯಾವುದೇ ರೀತಿ ಅಸಭ್ಯವಾದ ವಿಡಿಯೋ ಹಾಕಿಲ್ಲ, ನೋಡುವವರ ದೃಷ್ಟಿಗೆ ಸಂಬಂಧಿಸಿದ್ದು ಎಂದು ಹೇಳಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
