Home » Love ಬಗ್ಗೆ ಕೇಳಿದ್ದಕ್ಕೆ ಮೊದಲ ಬಾರಿಗೆ ಗರಂ ಆಗಿ ಉತ್ತರಿಸಿದ ನ್ಯಾಷನಲ್ ಕ್ರಶ್ ‘ ರಶ್ಮಿಕಾ ಮಂದಣ್ಣ’!!!

Love ಬಗ್ಗೆ ಕೇಳಿದ್ದಕ್ಕೆ ಮೊದಲ ಬಾರಿಗೆ ಗರಂ ಆಗಿ ಉತ್ತರಿಸಿದ ನ್ಯಾಷನಲ್ ಕ್ರಶ್ ‘ ರಶ್ಮಿಕಾ ಮಂದಣ್ಣ’!!!

by Mallika
0 comments

ಸ್ಯಾಂಡಲ್ ವುಡ್ ಮಾತ್ರವಲ್ಲದೇ, ಭಾರತೀಯ ಚಿತ್ರರಂಗದಲ್ಲೇ ತನ್ನ ಛಾಪು ಮೂಡಿಸಿದ ಬಹುಬೇಡಿಕೆಯ ನಟಿ ಎಂದರೆ ಕೊಡಗಿನ ಕುವರಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ. ಸದಾ ನಗುಮೊಗದಿಂದ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದ್ದ ಈ ನಟಿ ಗರಂ ಆಗಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಡೇಟಿಂಗ್, ಲವ್, ವೈಯಕ್ತಿಕ ಜೀವನದ ಬಗ್ಗೆ ಜನರು ಸಿಕ್ಕಾಪಟ್ಟೆ ಕುತೂಹಲ ಇಟ್ಟುಕೊಂಡು ಏನೇನೋ ಮಾತನಾಡುತ್ತಿರುವ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.

ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಜೊತೆ ಡೇಟ್ ಮಾಡುತ್ತಿದ್ದಾರೆ, ಬ್ರೇಕಪ್ ಆಗಿದೆ, ಈಗ ಫ್ರೆಂಡ್ಸ್ ತರ ಇದ್ದಾರೆ ಅಂತ ಕೂಡ ಹೇಳಲಾಗಿತ್ತು. ಬಾಲಿವುಡ್‌ನಲ್ಲಿ ಬ್ಯುಸಿಯಾಗುತ್ತಿರುವ ರಶ್ಮಿಕಾ ಮಂದಣ್ಣ ಈಗ ಸಂದರ್ಶನವೊಂದರಲ್ಲಿ ಸಿಟ್ಟಾಗಿ ಆಕ್ರೋಶ ಹೊರಹಾಕಿದ್ದಾರೆ.

” ವರ್ಷಕ್ಕೆ ನಾನು 5 ಸಿನಿಮಾ ಮಾಡುತ್ತೇನೆ. ಆದರೆ ನೀವೆಲ್ಲ ಯಾವಾಗಲೂ ಯಾರ ಜೊತೆ ಟೇಟ್ ಮಾಡುತ್ತೀನಿ? ವೈಯಕ್ತಿಕ ಜೀವನ ಹೇಗಿದೆ? ಎಂದು ಕೇಳುತ್ತೀರಿ. ನಾವು ಕಲಾವಿದರು, ನಮ್ಮ ಮೇಲೆ ಎಲ್ಲರ ಗಮನ ಇರುತ್ತದೆ, ಎಲ್ಲರಿಗೂ ನನ್ನ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇರುತ್ತದೆ ಎಂದು ನನಗೆ ಗೊತ್ತು. ನಾನಂತೂ ನನ್ನ ಕೆರಿಯರ್ ಶುರುವಾದಾಗಿನಿಂದ ಇದೇ ಪ್ರಶ್ನೆ ಕೇಳುತ್ತಿದ್ದೇನೆ. ಅವಳು ಇವನ ಜೊತೆಗಿದ್ದಾಳೆ, ಅವಳು ಅವನ ಜೊತೆ ಕಾಣಿಸಿಕೊಂಡಳು ಅಂತೆಲ್ಲ ಮಾತು ಬರುತ್ತದೆ. ” ಎಂದು ರಶ್ಮಿಕಾ ಮಂದಣ್ಣ ಸಿಟ್ಟಿನಿಂದ ಹೇಳಿದ್ದಾರೆ.

“ನಾವು ಪಬ್ಲಿಕ್ ಫಿಗರ್ಸ್, ನಮ್ಮ ಬಗ್ಗೆ ನೀವು ಮಾತನಾಡಬಹುದು, ಕೆಲವರು ನಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡೋದಿಲ್ಲ, ಬೇರೆ ಎಲ್ಲವನ್ನು ಮಾತನಾಡುತ್ತಾರೆ. ನೀವು ನಮ್ಮ ಬಗ್ಗೆ ಮಾತನಾಡುತ್ತೀರಿ, ಮಾತನಾಡಿ, ಆದರೆ ನಾನು ಹೇಳುವ ತನಕ ಜಡ್ಜ್‌ಮೆಂಟ್‌ಗೆ ಬರಬೇಡಿ” ಎಂದಿದ್ದಾರೆ ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ಇತ್ತೀಚೆಗೆ ಕಾಫಿ ವಿಥ್ ಕರಣ್ ಸೀಸನ್ 7 ಶೋಗೆ ಬಂದ ವಿಜಯ್ ದೇವರಕೊಂಡ ಅವರಲ್ಲಿ ಕರಣ್ ಜೋಹರ್ ಅವರು, ರಶ್ಮಿಕಾ ಮಂದಣ್ಣ ಸೇರಿದಂತೆ ಲವ್, ಮದುವೆ ಬಗ್ಗೆ ಪ್ರಶ್ನೆ ಕೇಳಿದಾಗ ಯಾವುದೇ ಕಾರಣಕ್ಕೂ ಈಗಲೇ ಹೇಳೋದಿಲ್ಲ ಎಂಬುದಾಗಿ ಹೇಳಿದ್ದಾರೆ. ಬಹುಶಃ ಇವೆಲ್ಲದರ ಪರಿಣಾಮವೋ ಏನೋ ಈ ಶೋ ನೋಡಿಯೋ ಏನೋ ನ್ಯಾಷನಲ್ ಕ್ರಶ್ ಸ್ವಲ್ಪ ಗರಂ ಆಗಿಯೇ ತಮ್ಮ ಅಸಹನೆಯನ್ನು ಹೊರಹಾಕಿದ್ದಾರೆ.

You may also like

Leave a Comment