ನಟಿ ಸಾಯಿ ಪಲ್ಲವಿ ಸರಳತೆಗೆ ಹೆಸರುವಾಸಿಯಾದ ಸಿಂಪಲ್ ಬ್ಯೂಟಿ ಕ್ವೀನ್. ಸಾಯಿ ಪಲ್ಲವಿ ಹೆಣ್ಣು ಮಕ್ಕಳು ಮಾತ್ರವಲ್ಲ, ಹುಡುಗರಿಗೆ ಕೂಡಾ ತುಂಬಾನೇ ಇಷ್ಟ. ಸೌತ್ ಸಿನಿಮಾಗಳಲ್ಲಿ ನಟಿ ಸಾಯಿ ಪಲ್ಲವಿ ಡಿ-ಗ್ಲಾಮರಸ್ ರೋಲ್, ಸರಳತೆ, ನೋ-ಮೇಕಪ್ ಲುಕ್, ಒಳ್ಳೆಯ ಚಿತ್ರಗಳ ಆಯ್ಕೆಗೆ ನಟಿ ಸಾಯಿ ಪಲ್ಲವಿ ಹೆಸರುವಾಸಿ. ಅಲ್ಲದೆ, ಜನರಿಗೆ ಮಿಸ್ ಗೈಡ್ ಮಾಡುವ ಜಾಹೀರಾತುಗಳನ್ನು ನಿರಾಕರಿಸಿ ಜನರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಸಿನಿ ರಂಗದಲ್ಲಿ ಒಳ್ಳೆ ಹೆಸರು ಮಾಡಿರುವ ಸಾಯಿ ಪಲ್ಲವಿ ಕುರಿತು ಒಂದು ಆಸಕ್ತಿದಾಯಕ ವಿಚಾರ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಸಾಯಿ ಪಲ್ಲವಿ ತಾವೇಕೆ ಮೈಮಾಟ ಪ್ರದರ್ಶಿಸುವುದಿಲ್ಲ ಮತ್ತು ಮೈ ತುಂಬಾ ಬಟ್ಟೆ ಧರಿಸುತ್ತಾರೆ ಎಂಬುದಕ್ಕೆ ಉತ್ತರ ನೀಡಿದ್ದಾರೆ.
ನಾನು ಸಂಪ್ರದಾಯ ಕುಟುಂಬದಿಂದ ಬಂದವಳು. ತಂದೆ ಕೇಂದ್ರ ಸರ್ಕಾರದ ಉದ್ಯೋಗಿ. ನನಗೆ ಓರ್ವ ತಂಗಿ ಇದ್ದಾಳೆ. ನಾವಿಬ್ಬರು ಮನೆಯಲ್ಲಿ ಬ್ಯಾಡ್ಮಿಂಟನ್ ಆಡುತ್ತೇವೆ. ಆಟವಾಡುವಾಗ ಇಬ್ಬರು ಸೂಕ್ತ ಎನಿಸುವ ಉಡುಗೆ ಧರಿಸುತ್ತೇವೆ. ಆದರೆ, ಸಿನಿಮಾ ಇಂಡಸ್ಟ್ರಿಗೆ ಪ್ರವೇಶ ನೀಡಿದಾಗ ನಡೆದ ಆ ಒಂದು ಘಟನೆ ನಾನು ಡಿ ಗ್ಲಾಮರಸ್ ಪಾತ್ರಗಳಲ್ಲಿ ಮಾತ್ರ ನಟಿಸುವ ನಿರ್ಧಾರ ಮಾಡಿದೆ ಎಂದು ಹೇಳಿದ್ದಾರೆ.
ನನ್ನ ಶಿಕ್ಷಣಕ್ಕಾಗಿ ನಾನು ಜಾರ್ಜಿಯಾಕ್ಕೆ ಹೋದಾಗ, ನಾನು ಟ್ಯಾಂಗೋ ನೃತ್ಯವನ್ನು ಕಲಿತೆ. ಟ್ಯಾಂಗೋ ನೃತ್ಯವನ್ನು ಕಲಿಯುವಾಗ ವಿಶೇಷ ವೇಷಭೂಷಣಗಳನ್ನು ಧರಿಸಬೇಕು ಎಂದರು. ಈ ಸಂಗತಿಯನ್ನು ನನ್ನ ಪೋಷಕರಿಗೆ ಹೇಳಿದೆ ಹಾಗೂ ಅವರ ಅನುಮತಿಯೊಂದಿಗೆ ಆ ವೇಷಭೂಷಣಗಳ ನಂತರ, ನೃತ್ಯವನ್ನು ಕಲಿಯಲು ಪ್ರಾರಂಭಿಸಿದೆ ಎಂದರು.
ಅದಾದ ನಂತರ ಕೆಲವು ತಿಂಗಳುಗಳ ಬಳಿಕ ಪ್ರೇಮಂ ಸಿನಿಮಾದಲ್ಲಿ ನಟಿಸುವ ಅವಕಾಶ ದೊರೆಯಿತು. ಆದರೆ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ, ನನ್ನ ಟ್ಯಾಂಗೋ ನೃತ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ಈ ವೇಳೆ ವೀಡಿಯೋಗೆ ನೆಟ್ಟಿಗರು ಮಾಡಿದ ಕಾಮೆಂಟ್ ನನ್ನ ಹೃದಯಕ್ಕೆ ನೋವುಂಟು ಮಾಡಿತು. ಅಂದಿನಿಂದ ನಾನು ಪೂರ್ಣ ಪ್ರಮಾಣದ ಉಡುಗೆ ತೊಡುವ ನಿರ್ಧಾರಕ್ಕೆ ಬಂದೆ. ಯಾವುದೇ ಕಾರಣಕ್ಕೂ ಡಿ-ಗ್ಲಾಮರಸ್ ಪಾತ್ರಗಳಲ್ಲಿ ಕಾಣಿಸಿಕೊಳ್ಳದಿರಲು ನಿರ್ಧರಿಸಿದೆ ಎಂದ ಸಾಯಿ ಪಲ್ಲವಿ ಹೇಳಿದ್ದಾರೆ.
