Serial Actress: ಸಿನಿಮಾ ಆಫರ್‌ಗಳಿಗಾಗಿ ತಮ್ಮ ದೇಹದ ಆ ಭಾಗವನ್ನು ಸರ್ಜರಿ ಮಾಡಿಸಿಕೊಂಡಿದ್ದನ್ನು ಬಿಗ್ ಬಾಸ್ ಸ್ಪರ್ಧಿ ಶ್ರೀಸತ್ಯ ಒಪ್ಪಿಕೊಂಡಿದ್ದಾರೆ. ಆ ಭಾಗ ದೊಡ್ಡದಾಗಿ ಕಾಣಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ ಎಂದು ಆಕೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಶ್ರೀಸತ್ಯ ಬಿಗ್ ಬಾಸ್ ಸೀಸನ್ 6 ರ ಸ್ಪರ್ಧಿ. ಮಿಸ್ ವಿಜಯವಾಡ ಪಟ್ಟ ಗೆದ್ದ ಮತ್ತು ಗೆಲ್ಲುವ ಮೊದಲೇ ಆಕೆ ನಟಿಯಾಗಬೇಕೆಂದು ಇಂಡಸ್ಟ್ರಿಗೆ ಬಂದವರು.
ಶೈಲಜಾ ಅನ್ನುವ ಸಿನಿಮಾದಲ್ಲಿ ಆಕೆ ಸಣ್ಣದೊಂದು ಪಾತ್ರ ಮಾಡಿದ್ದರು. ಆ ಸಂದರ್ಭ ಆಕೆ ಕೆಲ ಧಾರಾವಾಹಿಗಳಲ್ಲೂ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು. ಆದರೆ ಆಕೆಗೆ ದೊಡ್ಡದಾಗಿ ಜನಪ್ರಿಯತೆ. ತಂದು ಕೊಟ್ಟದ್ದು ಬಿಗ್ ಬಾಸ್ ಶೋ. ಸೀಸನ್ 6ರಲ್ಲಿ ಶ್ರೀಸತ್ಯ ಸ್ಪರ್ಧಿಯಾಗಿದ್ದರು.
ಈಚೆಗೆ ಶ್ರೀಸತ್ಯ ಲುಕ್ ನೋಡಿ ಸಿನಿಪ್ರಿಯರು ಅವರಲ್ಲಿ ಬದಲಾವಣೆಯನ್ನು ಗುರುತಿಸಿದ್ದರು. ಸತ್ಯವಾಗಿ ಈಕೆಯೇ ಶ್ರೀಸತ್ಯಳಾ ಎಂದು ಕಣ್ಣುಜ್ಜಿ ನೋಡಿಕೊಳ್ಳುವ ಹಾಗಾಗಿತ್ತು. ಆಕೆಯಲ್ಲಿ ಆಗಿರುವ ಬದಲಾವಣೆ ಪತ್ತೆ ಮಾಡಲು ಜನ ಎಲ್ಲೆಲ್ಲೋ ನೋಡಲು ಶುರು ಮಾಡಿದ್ದರು. ಕೊನೆಗೂ ಗುಟ್ಟು ರಟ್ಟಾಗಿದೆ ಪ್ರೇಕ್ಷಕರು ಆಕೆಯಲ್ಲಾದ ಬದಲಾವಣೆಯನ್ನು ಖಚಿತವಾಗಿ ಗಮನಿಸಿದ್ದಾರೆ. ಆಕೆಯ ತುಟಿಗಳು ಮೊದಲಿಗಿಂತ ಭಿನ್ನವಾಗಿ ಕಾಣುತ್ತಿದ್ದು ನೆಟ್ಟಿಗರು ನೆಟ್ಟ ದೃಷ್ಠಿಯಿಂದ ತುಟಿಗಳನ್ನು ನೋಡುತ್ತಾ ವಿವಿಧ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಇದನ್ನೂ ಓದಿ:Madhu Bangarappa: ಓಪಿಎಸ್ ನಿರೀಕ್ಷೆಯಲ್ಲಿರುವ ಸರಕಾರಿ ನೌಕರರಿಗೆ ಸಿಹಿ ಸುದ್ದಿ
ಶ್ರೀಸತ್ಯ ಈ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಿದ್ದು, ಲಿಪ್ ಸರ್ಜರಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಸಿನಿಮಾ ಅವಕಾಶಗಳಿಗಾಗಿ ಶ್ರೀಸತ್ಯ ಸರ್ಜರಿಗೆ ಒಳಗಾಗಿದ್ದರು. ತುಟಿಗಳು ದೊಡ್ಡದಾಗಿ ಕಂಡರೆ ಚೆನ್ನಾಗಿ ಕಾಣಿಸುತ್ತೇನೆ ಎಂದು ಮಾಡಿಸಿದೆ. ಅಲ್ಲದೇ ಈಗ ನನ್ನ ಸ್ನೇಹಿತರು ಸಹ ಈಗ ನೀನು ಹೀರೋಯಿನ್ ತರ ಕಾಣುತ್ತೀಯಾ ಎಂದು ಹೇಳಿದ್ದಾರೆ. ಇನ್ನು ಮುಂದೆ ಸಿನಿಮಾಗಳತ್ತ ಗಮನ ಹರಿಸುತ್ತೇನೆ ಎಂದಿದ್ದಾರೆ ಶ್ರೀಸತ್ಯ.
