Sudha Rani: ಕನ್ನಡದ ಖ್ಯಾತ ನಟಿ ಸುಧಾರಾಣಿ(Sudha Rani) ಅವರಿಗೆ ಹೆಣ್ಣು ಮಗು ಜನನವಾಗಿದೆ. ಈ ಬೆನ್ನಲ್ಲೇ ಅವರ ಆರೋಗ್ಯದಲ್ಲೂ ಕೂಡ ಏರುಪೇರು ಆಗಿದೆ.
ಅರೆ ಇದೇನಿದು 50ರ ಆಸುಪಾಸಿನ ನಟಿಗೆ ಈಗ ಮಗುವಾಗಿದೆಯೇ? ತನ್ನಷ್ಟೇ ಎತ್ತರದ ಮಗಳು ಇರುವಾಗ ಸುಧಾರಾಣಿ ಮತ್ತೊಂದು ಮಗುವಿಗೆ ಜನನ ನೀಡಿದರೆ? ಇಂದಲ್ಲ ನಿಮ್ಮ ತಲೆಯಲ್ಲಿ ಓಡುತ್ತಿರಬಹುದು. ಆದರೆ ಸುಧಾರಾಣಿ ಮಗು ಹೊಡೆದದ್ದು ನಿಜ ಜೀವನದಲ್ಲಿ ಅಲ್ಲ ಬದಲಾಗಿ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ.
ಈ ಧಾರಾವಾಹಿ ಮೂಲಕ ಮತ್ತೆ ಸುಧಾರಾಣಿ ಕನ್ನಡದ ಕಿರುತೆರೆ ಲೋಕದಲ್ಲಿ ಆರ್ಭಟ ತೋರಿಸುತ್ತಿದ್ದು, ಇದೀಗ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ದೊಡ್ಡ ತಿರುವು ಪಡೆದಿದ್ದು ಸುಧಾರಾಣಿ ಅವರಿಗೆ ಹೆಣ್ಣು ಮಗು ಜನಿಸಿದೆ. ಆದರೆ ಆರೋಗ್ಯ ಏರುಪೇರಾಗಿದ್ದು, ಇಂದಿನ ಎಪಿಸೋಡ್ ಸಾಕಷ್ಟು ಗಮನ ಸೆಳೆದಿದೆ!
