Aishwarya Rangarajan: ಕನ್ನಡದ ಖ್ಯಾತ ಗಾಯಕಿ ಐಶ್ವರ್ಯಾ ರಂಗರಾಜನ್ ಅವರು ಮಂಗಳೂರು ಹುಡುಗನ ಜೊತೆ ಇಂದು (ಮಾ.2) ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಕುಟುಂಬದವರ ಸಮ್ಮುಖದಲ್ಲಿ ತುಂಬಾ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಗಾಯಕಿ ಐಶ್ವರ್ಯಾ. ʼಬೆಂಗಳೂರು ಟು ಮಂಗಳೂರು, ಪರ್ಫೆಕ್ಟ್ ಪಿಚ್ʼ ಎಂಬ ಕ್ಯಾಪ್ಷನ್ ನೀಡಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಎಂಗೇಜ್ ಆಗಿದ್ದೀವಿ ಎನ್ನುವ ಸಿಹಿ ಸುದ್ದಿ ನೀಡಿದ್ದಾರೆ.
ಹುಡುಗನ ಬಗ್ಗೆ ಹೆಚ್ಚಿನ ವಿವರ ಬಿಟ್ಟುಕೊಡದೇ ಕೇವಲ ಮಂಗಳೂರು ಹುಡುಗ ಎಂದು ಬರೆದಿದ್ದು, ಬೇರೇನೂ ವಿವರ ಇಲ್ಲ. ಕ್ರಾಂತಿ ಸಿನಿಮಾದ ಶೇಕ್ ಇಟ್ ಪುಷ್ಪವತಿ , ಯುಐ ಸಿನಿಮಾದ ಟ್ರೋಲ್ ಆಗುತ್ತೆ, ಕಬ್ಜ ಸಿನಿಮಾನ ನಮಾಮಿ, ಏಕ್ ಲವ್ ಯಾ ಚಿತ್ರದ ಮೀಟ್ ಮಾಡೋಣ ಡೇಟ್ ಮಾಡೋಣ ಸಾಂಗ್ ಕುರಿತು ಹಲವು ಹಿಟ್ ಹಾಡುಗಳನ್ನು ಹಾಡಿದ್ದಾರೆ ಐಶ್ವರ್ಯ.
View this post on Instagram
