Home » 20 ವರ್ಷಕ್ಕೆ ತನ್ನ ಜೀವನ ಅಂತ್ಯಗೊಳಿಸಿದ ನಟಿ | ಸೀರಿಯಲ್ ಸೆಟ್ ನಲ್ಲೇ ಆತ್ಮಹತ್ಯೆ!

20 ವರ್ಷಕ್ಕೆ ತನ್ನ ಜೀವನ ಅಂತ್ಯಗೊಳಿಸಿದ ನಟಿ | ಸೀರಿಯಲ್ ಸೆಟ್ ನಲ್ಲೇ ಆತ್ಮಹತ್ಯೆ!

by Mallika
0 comments

ತುನೀಶಾ ಶರ್ಮಾ (20 ವರ್ಷ) ಎಂಬ ಕಿರುತೆರೆ ನಟಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿದೆ. 20 ವರ್ಷದ ಕಿರುತೆರೆ ನಟಿ ತುನೀಶಾ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. SAB ಟಿವಿಯ ದಸ್ತಾನ್-ಎ-ಕಾಬೂಲ್ ಶೋನಲ್ಲಿ ತುನಿಶಾ ಪ್ರಮುಖ ಪಾತ್ರವನ್ನು ಮಾಡುತ್ತಿದ್ದ ನಟಿಯಾಗಿದ್ದರು.

ಮಾಧ್ಯಮಗಳ ವರದಿಗಳ ಪ್ರಕಾರ, ಟಿವಿ ಸೀರಿಯಲ್ ನ ಸೆಟ್‌ನಲ್ಲಿ ತುನೀಶಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವರದಿಯಾಗಿದೆ. ನಾಯಕ ನಟನ ಮೇಕಪ್ ರೂಮ್‌ನಲ್ಲಿ ನೇಣು ಬಿಗಿದುಕೊಂಡಿರುವುದಾಗಿ ವರದಿಯಾಗಿದೆ. ನೇಣು ಬಿಗಿದುಕೊಂಡ ನಟಿಯನ್ನು ಕಂಡ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ನಟಿ ನಿಧನರಾಗಿದ್ದಾರೆಂದು ಘೋಷಿಸಲಾಯಿತು.

ಆದರೆ, ಸದ್ಯಕ್ಕೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ತುನೀಶಾ ಯಾಕೆ ಹೀಗೆ ಮಾಡಿದಳು, ಇಷ್ಟು ದೊಡ್ಡ ಹೆಜ್ಜೆ ಇಡಲು ಕಾರಣವೇನು ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಆದರೆ ಸೆಟ್‌ನಲ್ಲಿ ಇಂಥದ್ದೊಂದು ಹೆಜ್ಜೆ ಇಡುವ ಮೂಲಕ ಅಲ್ಲಿದ್ದ ಮಂದಿ ಬೆಚ್ಚಿ ಬಿದ್ದಿದ್ದಾರೆ.

ತುನೀಶಾಗೆ ಕೇವಲ 20 ವರ್ಷ ವಯಸ್ಸಾಗಿತ್ತು ಮತ್ತು ಇಷ್ಟು ಚಿಕ್ಕ ವಯಸ್ಸಿನಲ್ಲಿ ಜನಪ್ರಿಯ ಶೋನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವ ಅವಕಾಶ ಸಿಕ್ಕಿದ್ದು, ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದರು.

You may also like

Leave a Comment