Home » Anushree: ಪ್ರೀತಿಯಲ್ಲಿ ಮುಳುಗಿರುವ ಆಂಕರ್‌ ಅನುಶ್ರೀ!? ಅಷ್ಟಕ್ಕೂ ʼಜೋಡಿʼ ಯಾರು?

Anushree: ಪ್ರೀತಿಯಲ್ಲಿ ಮುಳುಗಿರುವ ಆಂಕರ್‌ ಅನುಶ್ರೀ!? ಅಷ್ಟಕ್ಕೂ ʼಜೋಡಿʼ ಯಾರು?

4 comments
Anushree

Anchor Anushree: ನಿರೂಪಣೆ ಮಾಡೋದು ಅಂದ್ರೆ ಅಷ್ಟು ಸುಲಭವಲ್ಲ ಅನ್ನುವುದು ನಮಗೆ ಗೊತ್ತಿರುವ ವಿಚಾರ. ಅದರಲ್ಲೂ ಅನುಶ್ರೀ (Anchor Anushree) ನಿರೂಪಣೆ ಮಾಡೋಕೆ ಶುರು ಮಾಡಿದರೆ ಸಾಕು, ಜನರು ಶಿಳ್ಳೆ ಹೊಡೆಯುತ್ತಾ ಕಣ್ಣು ಬಾಯಿ ಬಿಟ್ಟು ಆಕೆಯ ನಿರೂಪಣೆಯನ್ನು ಎಂಜಾಯ್ ಮಾಡುತ್ತಾರೆ. ಆದರೆ ಇವರ ಮದುವೆ ವಿಚಾರಕ್ಕೆ ಮಾತ್ರ ಇದುವರೆಗೂ ಉತ್ತರ ಕೊಡುವಲ್ಲಿ ನುನುಚಿಕೊಳ್ಳುತ್ತಿದ್ದ ಅನುಶ್ರೀ ಕಡೆಯಿಂದ ಗುಡ್ ನ್ಯೂಸ್ ಒಂದು ಇದೆ.

ಹೌದು, ಸೋಶಿಯಲ್‌ ಮೀಡಿಯಾ ಇನ್‌ʼಸ್ಟಾಗ್ರಾಂನಲ್ಲಿ ಪ್ರೋಮೋ ಶೇರ್‌ ಮಾಡಿರುವ ಅವರು, “ನಿಮಗೆ ನನ್ನ ಪ್ರೀತಿ ವಿಚಾರದಲ್ಲಿ ತುಂಬಾ ಪ್ರಶ್ನೆಗಳಿವೆ. ಇದೆಲ್ಲದಕ್ಕೂ ಉತ್ತರ ಕೊಡಲು ನಾನು ಬರ್ತಿದ್ದೇನೆ. ಹೊಸ ಪ್ರೀತಿ, ಹೊಸ ಮದುವೆ ಜೊತೆ, ಬನ್ನಿ ಪ್ರೀತಿಯನ್ನು ಸೆಲೆಬ್ರೇಟ್ ಮಾಡೋಣ” ಎಂದಿದ್ದಾರೆ.

ಇದೀಗ ಈ ಬಗ್ಗೆ ಅವರ ಅಭಿಮಾನಿಗಳು  ಕೊನೆಗೂ ಅನುಶ್ರೀ ಮದುವೆಯಾಗ್ತಿದ್ದಾರೆ ಎಂದು ಅಂದುಕೊಂಡಿದ್ದಾರೆ. ಒಟ್ಟಿನಲ್ಲಿ ಒಂದು ಬಲವಾದ ಕಾರಣ ಇದೆ ಅನ್ನೋದು ಅಭಿಮಾನಿಗಳಿಗೆ ಗ್ಯಾರಂಟಿ ಆಗಿದೆ. ಯಾಕೆಂದರೆ ಇಂತಹ ಪ್ರೋಮೋ ರಿಲೀಸ್‌ ಮಾಡಿರುವ ಅನುಶ್ರೀ ಇಲ್ಲಿ ಹೊಸ ಪ್ರೀತಿ, ಹೊಸ ಮದುವೆ ಎಂದು ಉಲ್ಲೇಖಿಸಿರುವ ಅವರು, ದಿಡೀರ್ ಎಂದು ಮದುವೆ ಮಾಡಿಕೊಂಡು ಬರಲೂಬಹುದು ಎಂಬ ಕುತೂಹಲ ಕೂಡಾ ಇದೆ.

You may also like

Leave a Comment