Home » Anchor Anushree: ಕನ್ನಡದ ಶ್ರೀಮಂತ ನಿರೂಪಕಿ ಅನುಶ್ರೀ !! ಈಕೆ ಹೊಂದಿರೋ ಒಟ್ಟು ಆಸ್ತಿ ಎಷ್ಟು ಗೊತ್ತಾ?

Anchor Anushree: ಕನ್ನಡದ ಶ್ರೀಮಂತ ನಿರೂಪಕಿ ಅನುಶ್ರೀ !! ಈಕೆ ಹೊಂದಿರೋ ಒಟ್ಟು ಆಸ್ತಿ ಎಷ್ಟು ಗೊತ್ತಾ?

0 comments

Anchor Anushree: ಕನ್ನಡ ಕಿರುತೆರೆಯ ಮಾತಿನ ಮಲ್ಲಿ ಅನುಶ್ರೀ ಬಗ್ಗೆ ನಿಮಗೆಲ್ಲಾ ಬಿಡಿಸಿ ಹೇಳಬೇಕಿಲ್ಲ. ಮಾತಿನಲ್ಲೇ ಮೋಡಿ ಮಾಡುವ ಈ ನಿರೂಪಕಿಯನ್ನು ಆಂಕರ್ ಅನುಶ್ರೀ ಅಂತಲೇ ಜನಪ್ರಿಯ. ಆಕೆಯ ಮಾತಿಗೆ ಜನರನ್ನು ಹುಚ್ಚೆಬ್ಬಿಸೋ ಶಕ್ತಿ ಇದೆ. ಈಗಂತೂ ಇವರು ಇಲ್ಲದೇ ಇದ್ದರೆ ವೀಕ್ಷಕರು ರಿಯಾಲಿಟೀ ಶೋ ನೋಡುವುದೇ ಅನುಮಾನ ಅಂತಾಗಿಬಿಟ್ಟಿದೆ. ಇನ್ನು ಅನಶ್ರೀ(Anchor Anushree) ನಿರೂಪಣೆಯಲ್ಲಿ ಮಾತ್ರ ಎತ್ತಿದ ಕೈ ಅಲ್ಲ. ಆಕೆ ಶ್ರೀಮಂತಿಕೆಯಲ್ಲೂ ಎತ್ತಿದ ಕೈ!!

ಹೌದು, ಅನು ಶ್ರೀ ಅವರ ಜೀವನದ ಘಟ್ಟಗಳು ಹಲವರಿಗೆ ತಿಳಿದಿದೆ. ಎಷ್ಟು ಏಳು ಬೀಳುಗಳನ್ನು ಅವರು ನೋಡಿದ್ದಾರೆ ಎಂಬುದನ್ನು ಹೆಚ್ಚಿನವರು ತಿಳಿದಿದ್ದಾರೆ. ತುಂಬಾ ಕಷ್ಟ ಪಟ್ಟು ಮೇಲೆ ಬಂದ ನಿರೂಪಕಿ ಆಕೆ. ಅಂತೆಯೇ ಅವರು ತನ್ನ ಮಾತಿನ ಪ್ರತಿಭೆಯ ಮೂಲಕವೇ ಹಣ ಗಳಿಸಿ ಇಂದು ಸಿರಿವಂತ ನಿರೂಪಕಿ ಆಗಿದ್ದಾರೆ. ಆದರೆ ನೆನಪಿರಲಿ ಅದರ ಹಿಂದೆ ಪ್ರಾಮಾಣಿಕವಾದ ಶ್ರಮದ ಫಲವಿದೆ ಎಂಬುದು. ಹಾಗಿದ್ರೆ ಅನು ಶ್ರೀ ಹೊಂದಿರೋ ಒಟ್ಟು ಆಸ್ತಿ ಎಷ್ಟು? ಇಲ್ಲಿದೆ ನೋಡಿ ಡೀಟೇಲ್ಸ್.

ಯಸ್, ನಿರೂಪಣೆಯಿಂದೇ ಅನುಶ್ರೀ ಸುಮಾರು 50 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ ಅನ್ನೋ ವರದಿಯಾಗಿವೆ. ಆದರೆ, ಈ ಬಗ್ಗೆ ಎಲ್ಲೂ ಅಧಿಕೃತ ಮಾಹಿತಿಯಿಲ್ಲ. ಅನುಶ್ರೀ ಕೂಡ ಈ ಸಂಖ್ಯೆಯನ್ನು ಒಪ್ಪಿಕೊಳ್ಳುತ್ತಾರಾ? ಅನ್ನೋ ಕುತೂಹಲವಿದೆ. ಒಂದು ವೇಳೆ ನಿರೂಪಣೆ, ಯೂಟ್ಯೂಬ್ ಚಾನೆಲ್ ಹಾಗೂ ಇವೆಂಟ್‌ಗಳಿಂದಲೇ ಇಷ್ಟೊಂದು ಹಣ ಗಳಿಸಿದ್ದರೆ ಅದು ನಿಜಕ್ಕೂ ದೊಡ್ಡ ಸಾಧನೆಯೇ ಆಗತ್ತದೆ.

ಅಲ್ಲದೆ ಆಯಂಕರ್‌ ಅನುಶ್ರೀ ಇವೆಲ್ಲದರ ಜೊತೆಗೆ ಬೇರೆ ಯಾವುದಾದರೂ ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರಾ? ಅನ್ನೋದು ಗುಟ್ಟು ಇನ್ನೂ ರಟ್ಟಾಗಿಲ್ಲ. ಬಾಲ್ಯದಿಂದಲೂ ಕಷ್ಟಗಳನ್ನು ಎದುರಿಸಿ ಬಂದಿರುವ ಅನುಶ್ರೀ ತಮ್ಮ ಮಾತನ್ನೇ ಬಂಡವಾಳ ಮಾಡಿಕೊಂಡು ಈ ಮಟ್ಟಕ್ಕೆ ಬೆಳೆದು ಬಂದಿದ್ದಾರೆ.

You may also like

Leave a Comment