Home » Anchor Aparna: ನಿರೂಪಕಿ ಅಪರ್ಣಾ ನಿಧನ; ಕವನದ ಮೂಲಕದ ತನ್ನ ದುಃಖ ತೋಡಿಕೊಂಡ ಪತಿ ನಾಗರಾಜ್‌ ವಸ್ತಾರೆ

Anchor Aparna: ನಿರೂಪಕಿ ಅಪರ್ಣಾ ನಿಧನ; ಕವನದ ಮೂಲಕದ ತನ್ನ ದುಃಖ ತೋಡಿಕೊಂಡ ಪತಿ ನಾಗರಾಜ್‌ ವಸ್ತಾರೆ

0 comments
Anchor Aparna

Anchor Aparna: ನಿರೂಪಕಿ ಅಪರ್ಣಾ (Aparna Vastarey) ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗಿ ನಮ್ಮನಗಲಿ ಬಾರದ ಲೋಕಕ್ಕೆ ಹೋಗಿದ್ದಾರೆ. ಅಪರ್ಣಾ ನೆನೆದು ಅವರ ಪತಿ ನಾಗರಾಜ್‌ ವಸ್ತಾರೆ ಕಣ್ಣೀರಿಟ್ಟಿದ್ದು, ಕ್ಯಾನ್ಸರ್‌ ವಿರುದ್ಧ ಹೋರಾಟದಲ್ಲಿ ಇಬ್ಬರೂ ಸೋತಿದ್ದೇವೆ ಎಂದು ಪತ್ನಿಯನ್ನು ನೆನೆದು ಕಣ್ಣೀರು ಹಾಕಿದ್ದಾರೆ.

Aparna: ನಿರೂಪಕಿ ಅಪರ್ಣಾ ನಿಧನ – ಭಾವನಾತ್ಮಕ ನುಡಿಗಳಿಂದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸಂತಾಪ !!

ಬಾರದ ಲೋಕಕ್ಕೆ ಹೋದ ಪತ್ನಿ ಅಪರ್ಣಾರನ್ನು ನೆನೆದು ಪತಿ ನಾಗರಾಜ್‌ ಅವರ ತಮ್ಮ ದುಃಖವನ್ನು ಕವನದ ಮೂಲಕ ತೋಡಿಕೊಂಡಿದ್ದಾರೆ.

ಬೆಳಗಿಕೊಂಡಿರೆಂದು
ಕಿಡಿ ತಾಕಿಸಿ ಹೊರಟಿತು
ಹೆಣ್ಣು
ಚಿತ್ತು ತೆಗೆದು
ಬತ್ತಿಯ ನೆತ್ತಿ ಚೆನ್ನಾಗಿಸಿ
ತಿರುಪಿ ತಿದ್ದಿ
ಇರು
ತುಸುವಿರೆಂದು ಕರೆದರೂ
ನಿಲ್ಲದೆಯೇ
ಬೇರಾವುದೋ ಕರೆಗೆ
ತಣ್ಣಗೆ ಓಗೊಟ್ಟ ಮೇರೆ
ಯಲ್ಲಿ
ಒಂದೇ ಒಂದು
ನಿಮಿಷ
ಬಂದೇನೆಂದು ಕಡೆಗಳಿಗೆ
ಯ ಸೆರಗಿನ ಬೆನ್ನಿನಲ್ಲಿ
ಅಂದು.
ಕಾದಿದ್ದೇನೆ
ಈಗ ಬಂದಾಳೆಂದು
ಆಗ ಬಂದಾಳೆಂದು
ಮರಳಿ
ಜೀವ ತಂದಾಳೆಂದು
ಇದು
ಮೂರನೇ ದಿವಸ
ಇಷ್ಟಾಗಿ
ಬೆಳಗಲಿಟ್ಟ ಕಿರಿಸೊಡರ
ಬೆಳಕು ನಾನು
ಉರಿವುದಷ್ಟೇ ಕೆಲಸ
ಇರುವ ತನಕ.

You may also like

Leave a Comment