Home » Milana Nagaraj: ಸ್ಪೆಷಲ್ ಆಗಿ ಸೀಮಂತ ಮಾಡಿಸಿಕೊಂಡ ಮಿಲನಾ ನಾಗರಾಜ್‌!

Milana Nagaraj: ಸ್ಪೆಷಲ್ ಆಗಿ ಸೀಮಂತ ಮಾಡಿಸಿಕೊಂಡ ಮಿಲನಾ ನಾಗರಾಜ್‌!

0 comments
Milana Nagaraj

Milana Nagaraj: 2021ರಲ್ಲಿ ಮಿಲನಾ ನಾಗರಾಜ್ (Milana Nagaraj) – ಡಾರ್ಲಿಂಗ್ ಕೃಷ್ಣ ವೈವಾಹಿಕ ಜೀವನಕ್ಕೆ ಕಾಲಿಟ್ಟು ಇದೀಗ ಮದುವೆಯಾದ 3 ವರ್ಷಗಳ ಬಳಿಕ ದಂಪತಿ ಮಗುವಿನ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಪ್ರೆಗ್ನೆನ್ಸಿಯ ಪ್ರತಿ ಕ್ಷಣವನ್ನೂ ಅನುಭವಿಸುತ್ತಿರುವ ಮಿಲನಾ ನಾಗರಾಜ್ ಈಗ ತುಂಬು ಗರ್ಭಿಣಿ.ಸದ್ಯಕ್ಕೆ ಡಾಲಿಂಗ್ ಕುಟುಂಬದಲ್ಲಿ ಸಂಭ್ರಮವೋ ಸಂಭ್ರಮ ಅಲ್ಲದೇ ಸ್ಪೆಷಲ್ ಆಗಿ ಅದ್ಧೂರಿಯಾಗಿ ಸೀಮಂತ ಕೂಡಾ ನಡೆದಿದೆ.

ಹೌದು, ಸ್ಯಾಂಡಲ್‌ವುಡ್‌ ಸೆಲೆಬ್ರಿಟಿ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್‌ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆಗಸ್ಟ್‌ 9ರಂದು ಡಾಲಿಂಗ್ ಕೃಷ್ಣ ತಮ್ಮ ನಿವಾಸದಲ್ಲಿ ಪತ್ನಿಗಾಗಿ ಇಡೀ ಮನೆಯನ್ನು ಅದ್ಧೂರಿಯಾಗಿ ಅಲಂಕಾರ ಮಾಡಿಸಿ, ಸೀಮಂತ ಮಾಡಿದ್ದಾರೆ. ಸೀಮಂತಕ್ಕೆ ಮಿಲನ ಅವರು ನೀರಳೆ ಬಣ್ಣದ ರೇಶ್ಮೆ ಸೀರೆಯನ್ನು ಉಟ್ಟು ಸಿಂಗಾರಗೊಂಡಿದ್ದರು, ಇನ್ನು ರೇಶ್ಮೆ ಪಂಚೆ ಶರ್ಟ್‌ನಲ್ಲಿ ಡಾರ್ಲಿಂಗ್‌ ಕೃಷ್ಣ ರೆಡಿ ಆಗಿದ್ದರು. ಒಟ್ಟಾರೆಯಾಗಿ ಅದ್ದೂರಿಯಾಗಿ ಸೀಮಂತ ಮಾಡಿಸಿಕೊಂಡ ಮಿಲನ ಮುಖದಲ್ಲಿ ಸಾವಿರ ಮುತ್ತಿನ ನಗುವಿತ್ತು ಅಂದ್ರೆ ತಪ್ಪಾಗಲ್ಲ.

ಸಿಂಪಲ್ ಆಗಿ ಹೇಳೋದಾದ್ರೆ ಒಂದೆರಡು ಒಡವೆಗಳು, ಸಿಂಪಲ್ ಹೇರ್‌ಸ್ಟೈಲ್ ಹಾಗೂ ಸೀರೆಯಲ್ಲಿ ಡಿಸೈನ್ ಮಾಡಿರುವ ಡಾಬು ಹಾಕಿ ಮಿಲನಾ ನಾಗರರಾಜ್‌ ಫೋಟೋ ನೋಡಿ ಅಭಿಮಾನಿಗಳು ತುಂಬಾ ಖುಷಿ ಪಟ್ಟಿದ್ದಾರೆ. ಇನ್ನು ಅಭಿಮಾನಿಗಳ ಪ್ರಕಾರ ನಮಗೆ ಜ್ಯೂನಿಯರ್ ಕೃಷ್ಣ ಬಂದರೂ ಓಕೆ, ಜ್ಯೂನಿಯರ್ ಮಿಲನಾ ಬಂದರೂ ಓಕೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

 

View this post on Instagram

 

A post shared by Milana Nagaraj (@milananagaraj)

You may also like

Leave a Comment