BBK10: ‘ಬಿಗ್ ಬಾಸ್ ಕನ್ನಡ ಸೀಸನ್ 10’ (BBK 10)ಮನೆಯಿಂದ ಸಿರಿ (Siri)ಅವರು ಹೊರಗೆ ಬಂದ ಬಳಿಕ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದು, ಅನೇಕ ಅನುಭವಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರಲ್ಲಿಯೂ ಡ್ರೋನ್ ಪ್ರತಾಪ್(Drone Prathap)ಬಗ್ಗೆ ಅಚ್ಚರಿಯ ಸಂಗತಿ ಬಿಚ್ಚಿಟ್ಟಿದ್ದಾರೆ.
ಬಿಗ್ ಬಾಸ್(BIGG BOSS)ಮನೆಯಿಂದ ಯಾವ ಡಿಗ್ನಿಟಿ ಇಟ್ಟುಕೊಂಡು ಒಳಗಡೆ ಹೋಗಿದ್ದರೋ ಅದೇ ಡಿಗ್ನಿಟಿ ಸಮೇತ ಹೊರಗಡೆ ಬಂದಿರುವುದು ಸಿರಿಯವರಿಗೆ ಪ್ಲಸ್ ಆಗಿ ಪರಿಣಮಿಸಿದೆ. ಬಿಗ್ ಬಾಸ್ ಮನೆಯಲ್ಲಿ ನಾವು ನಾವಾಗಿರೋದು ಮುಖ್ಯವಾಗುತ್ತದೆ. ಇದು ಕಷ್ಟವಾದ ವಿಷಯವಾಗಿದ್ದು, ಅದನ್ನು ಉಳಿಸಿಕೊಂಡಿದ್ದೀನಿ ಎನ್ನುವ ಮಾತು ಕೇಳಿ ಬರುತ್ತಿದೆ. ಇದೇ ದೊಡ್ಡ ಟಾಸ್ಕ್ ಆಗಿದ್ದು, ಎಲ್ಲರೂ ಪ್ರೀತಿ, ಅಭಿಮಾನ ತೋರಿಸುತ್ತಿರುವುದನ್ನ ಗಮನಿಸಿದಾಗ ತುಂಬ ಖುಷಿಯಾಗುತ್ತಿದೆ.
ನಾನು ಜನರಿಗೆ ಹತ್ತಿರ ಆಗಬೇಕು ಎಂಬ ಆಸೆಯಿತ್ತು. ರಿಯಲ್ ಲೈಫ್‌ನಲ್ಲಿ ಸಿರಿ ಹೇಗಿರ್ತಾಳೆ ಎನ್ನುವ ವಿಚಾರ ಎಲ್ಲರಿಗೂ ಗೊತ್ತಾಗಬೇಕಿತ್ತು. ಹೀಗಾಗಿ, ಬಿಗ್ ಬಾಸ್ ಮನೆಗೆ ಹೋದೆ. ನಿಜವಾಗಿಯೂ ನಾನು ಜನರಿಗೆ ಹತ್ತಿರ ಆಗಿದ್ದೀನಿ ಎಂಬ ಫೀಲ್ ಬರುತ್ತಿದೆ. ನಾನು ರಿಯಲ್ ಆಗಿ ಹೇಗಿರ್ತೀನಿ ಎನ್ನೋದು ಜನರಿಗೆ ಗೊತ್ತಾಗಬೇಕು, ಬಿಗ್ ಬಾಸ್ ಈ ನಿಟ್ಟಿನಲ್ಲಿ ತನಗೆ ಒಳ್ಳೆಯ ಪ್ಲಾಟ್ ಫಾರ್ಮ್ ಆಗಬಹುದು ಅಂದುಕೊಂಡೆ. ಬಿಗ್ ಬಾಸ್ ಅಂತ ಅಂದಕೂಡಲೇ ಕಾಂಟ್ರವರ್ಸಿ, ವಿವಾದ ಅಂತ ಹೇಳುವವರಿಗೆ ತಪ್ಪು ಗ್ರಹಿಕೆ ಇಟ್ಟುಕೊಂಡವರಿಗೆ ಒಳ್ಳೆಯ ಉದಾಹರಣೆ ಆಗಬಹುದು.
ನಾನು ಬಿಗ್ ಬಾಸ್ ಮನೆಯಿಂದ ಖುಷಿಯಿಂದ ಹೊರಗಡೆ ಬಂದಿದ್ದೇನೆ. ನಾನು ಬಿಗ್ ಬಾಸ್ ಎಪಿಸೋಡ್ ನೋಡಿಲ್ಲ. ಬಿಗ್ ಬಾಸ್ ಎಪಿಸೋಡ್‌ನಲ್ಲಿ ನನ್ನ ಬೆನ್ನ ಹಿಂದೆ ಯಾರಾದರೂ ಮಾತಾಡಿದರೆ ಬೇಸರ ಆಗತ್ತೆ. ಎಲ್ಲರ ಜೊತೆ ಒಳ್ಳೆಯ ಬಾಂಧವ್ಯವಿದೆ. ಅದು ಹಾಗೇ ಇರಲಿ ಎಂದು ಆಶಿಸುತ್ತೇನೆ. ವೈಲ್ಡ್ ಕಾರ್ಡ್ ಸ್ಪರ್ಧಿಗಳ ಬಳಿ ಪ್ರತಾಪ್ ಅವರು ಸಿರಿಯನ್ನು ಸೇವ್ ಮಾಡಿ ಅಂತ ಮನವಿ ಮಾಡಿದ್ದು ನನಗೆ ಗೊತ್ತೇ ಇರಲಿಲ್ಲ. ಈ ವಿಚಾರ ನನಗೆ ತುಂಬಾ ಸರ್ಪ್ರೈಸ್ ಹಾಗೂ ಖುಷಿಯನ್ನು ತಂದುಕೊಟ್ಟಿದೆ ಎಂದು ಡ್ರೋನ್ ಪ್ರತಾಪ್ ಬಗ್ಗೆ ಮನೆಯ ಹೊರ ಬಂದ ಬಳಿಕ ತಿಳಿದುಕೊಂಡ ವಿಚಾರದ ಬಗ್ಗೆ ಸಿರಿ ಮಾತಾಡಿದ್ದಾರೆ.
