Home » BBK 11: ದೊಡ್ಮನೆಯಲ್ಲಿ ತಾರಕಕ್ಕೇರಿದ ಜಗಳ, ಬಿಗ್‌ಬಾಸ್‌ ಮನೆಯಿಂದ ಲಾಯರ್‌ ಜಗದೀಶ್‌, ರಂಜಿತ್‌ ಔಟ್‌?

BBK 11: ದೊಡ್ಮನೆಯಲ್ಲಿ ತಾರಕಕ್ಕೇರಿದ ಜಗಳ, ಬಿಗ್‌ಬಾಸ್‌ ಮನೆಯಿಂದ ಲಾಯರ್‌ ಜಗದೀಶ್‌, ರಂಜಿತ್‌ ಔಟ್‌?

0 comments

BBK 11: ಬಿಗ್‌ಬಾಸ್‌ ಮನೆಯಲ್ಲಿ ನಿನ್ನೆಯ ಎಪಿಸೋಡ್‌ನಲ್ಲಿ ಮನೆಮಂದಿ ಒಂದು ಕಡೆಯಾದರೆ, ಲಾಯರ್‌ ಜಗದೀಶ್‌ ಒಬ್ಬರೇ ಇದ್ದರು. ನಿನ್ನೆ ಎಪಿಸೋಡಲ್ಲಿ ಜಗದೀಶ್‌, ಉಗ್ರಂ ಮಂಜು ನಡುವೆ ವಾಕ್ಸಮರ ನಡೆದಿದ್ದು, ಇದಕ್ಕೆ ಮನೆಯ ಇತರ ಸದಸ್ಯರು ಕೂಡಾ ದನಿ ಸೇರಿಸಿದ್ದರು. ಇದೀಗ ಈ ಜಗಳ ಮುಂದುವರಿದಿದ್ದು, ಬಿಗ್‌ ಬಾಸ್‌ ತುಟಿಪಿಟಿಕ್‌ ಅನ್ನಬಾರದು ಎನ್ನುವ ಪ್ರೊಮೋವೊಂದು ಬಂದಿದೆ.

ಆದರೆ ವರದಿ ಪ್ರಕಾರ, ರಂಜಿತ್‌ ಮತ್ತು ಜಗದೀಶ್‌ ಜಗಳ ಮಾಡಿಕೊಂಡಿದ್ದು, ಬಿಗ್‌ಬಾಸ್‌ ರಂಜಿತ್‌ ಮತ್ತು ಜಗದೀಶರನ್ನು ಮನೆಯಿಂದ ಹೊರಗಡೆ ಹೋಗಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇಬ್ಬರ ಮಧ್ಯೆ ಜಗಳ ನಡೆದಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

rajuraj ಎಂಬ ಹೆಸರಿನ ವ್ಯಕ್ತಿಯೊಬ್ಬರು ಜಗದೀಶ್‌ ಜೊತೆ ಸೆಲ್ಫಿ ಕ್ಲಿಕ್‌ ಮಾಡಿಕೊಂಡು ಸ್ಟೇಟಸ್‌ಗೆ ಹಾಕಿದ್ದಾರೆ. ಜೊತೆಗೆ ಇದು ಇವತ್ತಿನ ಫೋಟೋ (16-10-24) ಎಂದು ಬರೆದಿದ್ದಾರೆ.

 

You may also like

Leave a Comment