Home » BBK 12: ಆ ಒಂದು ಕಾರಣಕ್ಕೆ ಚಂದ್ರಪ್ರಭಾ ಹೊರ ಬಂದ್ರಾ? ದೊಡ್ಮನೆಯಿಂದ ಹೊರಬಂದ ಹಾಸ್ಯನಟ ಫಸ್ಟ್‌ ರಿಯಾಕ್ಷನ್!

BBK 12: ಆ ಒಂದು ಕಾರಣಕ್ಕೆ ಚಂದ್ರಪ್ರಭಾ ಹೊರ ಬಂದ್ರಾ? ದೊಡ್ಮನೆಯಿಂದ ಹೊರಬಂದ ಹಾಸ್ಯನಟ ಫಸ್ಟ್‌ ರಿಯಾಕ್ಷನ್!

0 comments

BBK 12: ಹಾಸ್ಯನಟ ಚಂದ್ರಪ್ರಭ ಅವರು ನಿನ್ನೆ ದೊಡ್ಮನೆಯಿಂದ ಹೊರ ಬಂದಿದ್ದಾರೆ. ಆದರೆ ಚಂದ್ರಪ್ರಭಾ ಅವರು ಶೋ ಮಧ್ಯದಲ್ಲೇ ಸೀದಾ ಗೇಟ್‌ ಬಳಿ ಬಂದು ನಾನು ಹೊರಗೆ ಹೋಗ್ತೀನಿ ಎಂದು ಹೇಳಿ ದೊಡ್ಡ ಹೈಡ್ರಾಮ ಆಗಿತ್ತು. ಇದೀಗ ಮನೆಯಿಂದ ಹೊರಬಂದ ಚಂದ್ರಪ್ರಭಾ ಅವರು ಮಾಧ್ಯಮವೊಂದಕ್ಕೆ ನಾನೇಕೆ ಹೊರಬರಲು ನಿರ್ಧಾರ ಮಾಡಿದೆ ಎನ್ನುವುದನ್ನು ಈ ರೀತಿ ಹೇಳಿದ್ದಾರೆ.

ಬಿಗ್‌ಬಾಸ್‌ ನನಗೆ ತುಂಬಾ ಇಷ್ಟವಾದ ಶೋ. ಈ ಶೋ ನಲ್ಲಿ ಗೆಲ್ತೀನಿ ಅನ್ನೋದಕ್ಕಿಂತ ಈ ಮನೆಯಲ್ಲಿ ತುಂಬಾ ದಿನ ಇರ್ತೀನಿ ಅಂತ ಕಾನ್ಫಿಡೆನ್ಸ್‌ ಇತ್ತು. ನನಗೆ ಕಲಾವಿದನಾಗಿ ತುಂಬಾ ಬೇಸರ ಆಗಿತ್ತು. ಸುದೀಪ್‌ ಸರ್‌ ಕೇಳಿದಾಗಲೂ ನಾನು ಹೇಳಿಲ್ಲ. ನನ್ನ ಇಷ್ಟು ವರ್ಷದ ಜರ್ನಿಯಲ್ಲಿ ನನಗೆ ತುಂಬಾ ಬೇಸರವಾಗಿತ್ತು. ನನಗೇ ಬೇಡ ಅನಿಸ್ತು ಬಿಗ್ಬಾಸ್‌ ಬೇಡ ಅನಿಸ್ತು. ಇದಕ್ಕೆ ನಿಜವಾದ ಕಾರಣ ನಾನು ಸಮಯ ಬಂದಾಗ ಹೇಳ್ತೀನಿ. ಈಗ ನನಗೆ ಅದರ ಕುರಿತು ಹೇಳೋಕೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.

You may also like