Home » BBK 12: ದೆವ್ವ ಬಿಡಿಸೋಕೆ ಬರ್ತಿದ್ದಾರೆ ಕಿಚ್ಚ!

BBK 12: ದೆವ್ವ ಬಿಡಿಸೋಕೆ ಬರ್ತಿದ್ದಾರೆ ಕಿಚ್ಚ!

0 comments

BBK12: ಈ ಬಾರಿಯ ಬಿಗ್‌ಬಾಸ್‌ ನಲ್ಲಿ ಈ ವಾರ ನಡೆದ ಕೆಲವೊಂದು ಕಟ್ಟು ಕಥೆಯ ದೆವ್ವದ ವಿಚಾರಕ್ಕೆ ಸುದೀಪ್‌ ಬಿಸಿ ಮುಟ್ಟಿಸೋಕೆ ಬಂದಿದ್ದಾರೆ. ಹೌದು, ರಕ್ಷಿತಾ ಅವರನ್ನು ಒಂದು ವಾರ ಅವರ ಮೈ ಮೇಲೆ ದೆವ್ವ ಬರ್ತಿದೆ ಎಂದು ಸುಳ್ಳು ಹೇಳಿ ತಾವೇ ನಾಟಕವಾಡಿ ಮನೆ ಮಂದಿ ಎಲ್ಲಾ ರಕ್ಷಿತಾ ಅವರನ್ನು ಮಾನಸಿಕವಾಗಿ ಕುಗ್ಗಿಸಿ, ಆಕೆಯ ಆಟವನ್ನು ಮಟ್ಟ ಹಾಕುವ ಪ್ರಯತ್ನ ಮಾಡಿದ್ದಾರೆ.

ಇದು ಒಂದು ದಿನ ಎರಡು ದಿನ ನಡೆದಿಲ್ಲ ಭರ್ಜರಿ ಇದನ್ನು ವೈಯಕ್ತಿಕವಾಗಿ ತೆಗೆದುಕೊಂಡು ಆ ಮುಗ್ಧ ಬಾಲಕಿಯನ್ನು ದಬಾಯಿಸಿ ಆಕೆಯ ಆಟವನ್ನು ಕುಗ್ಗಿಸೋ ಪ್ರಯತ್ನ ನಡೆದಿದೆ. ಇದು ವೀಕ್ಷಕರಿಗೆ ಕಾಣುವಾಗ ಒಂದು ಮಟ್ಟಿಗೆ ರ್ಯಾಗಿಂಗ್‌, ಬುಲ್ಲಿಂಗ್‌ ರೀತಿ ಇತ್ತು ಎನ್ನಬಹುದು.

You may also like