Home » BBK Season 10: ದೊಡ್ಮನೆಗೆ ಮತ್ತೆ ಪೊಲೀಸರ ಎಂಟ್ರಿ; ತನಿಷಾ, ಡ್ರೋನ್‌ ಪ್ರತಾಪ್‌ ವಿಚಾರಣೆ

BBK Season 10: ದೊಡ್ಮನೆಗೆ ಮತ್ತೆ ಪೊಲೀಸರ ಎಂಟ್ರಿ; ತನಿಷಾ, ಡ್ರೋನ್‌ ಪ್ರತಾಪ್‌ ವಿಚಾರಣೆ

0 comments
BBK Season 10

BBK Season 10: ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಸೆಟ್‌ಗೆ ಇದೀಗ ಎರಡನೇ ಬಾರಿ ಪೊಲೀಸರ ಎಂಟ್ರಿ ಆಗಿದೆ. ಮೊದಲ ಬಾರಿ ವರ್ತೂರು ಸಂತೋಷ್‌ ಅವರ ಹುಲಿಉಗುರ ಪ್ರಕರಣ ಕುರಿತು ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದರೆ, ಈ ಬಾರಿ ತನಿಷಾ ಕುಪ್ಪಂಡ (Tanisha Kuppanda) ಅವರು ಅವಹೇಳನಕಾರಿ ಪದ ಹೇಳಿದ್ದಾರೆ ಎಂಬ ಆರೋಪದಡಿ ಪೊಲೀಸರು ಬಿಗ್‌ಬಾಸ್‌ ಮನೆಗೆ ಬಂದಿದ್ದಾರೆ. ತನಿಷಾ ಕುಪ್ಪಂಡ ಅವರ ಜೊತೆಗೆ ಡ್ರೋನ್‌ ಪ್ರತಾಪ್‌ (Drone Pratap) ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.

ವಡ್ಡರ ತರ ಆಡಬೇಡ ಎಂದು ತನಿಷಾ ಕುಪ್ಪಂದ ಅವರು ಹೇಳಿದ ಮಾತು ಇದೀಗ ಬಹಳ ಚರ್ಚೆಗೆ ಗ್ರಾಸವಾಗಿದ್ದು, ಕೆಲವೊಂದು ಜಾತಿವಾಚಕ ಶಬ್ದಗಳನ್ನು ಬಳಸದಂತೆ ಸೂಚನೆ ನೀಡಲಾಗಿದೆ. ವಡ್ಡ ಎನ್ನುವ ನಿಷೇಧಾತ್ಮಕ ಬಳಕೆ ಮೂಲಕ ಬೋವಿ ಜನಾಂಗವನ್ನು ಅಪಮಾನ ಮಾಡಲಾಗಿ ಎಂದು ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ ಪದ್ಮಾ ಅವರು ದೂರು ನೀಡಿದ್ದಾರೆ.

ಈ ಕುರಿತು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯಿದೆಯಡಿ ಪ್ರಕರಣ ದಾಖಲಾಗಿದೆ. ಮಾಗಡಿ ಡಿವೈಎಸ್ಪಿ ಪ್ರವೀಣ್, ಕುಂಬಳಗೋಡು ಇನ್ಸ್ ಪೆಕ್ಟರ್ ಶಿವಾರೆಡ್ಡಿ ನೇತೃತ್ವದ ತಂಡ ರಾಜರಾಜೇಶ್ವರಿ ನಗರದ ಹೊರವಲಯದಲ್ಲಿರುವ ಬಿಗ್‌ ಬಾಸ್‌ ಸೆಟ್‌ಗೆ ಭೇಟಿ ನೀಡಿದ್ದು, ತನಿಷಾ ಕುಪ್ಪಂಡ ಮತ್ತು ಡ್ರೋನ್‌ ಪ್ರತಾಪ್‌ ವಿಚಾರಣೆ ನಡೆಸಿದ್ದಾರೆ. ತನಿಷಾ ಅವರ ಧ್ವನಿ ಸ್ಯಾಂಪಲ್‌ ಸಂಗ್ರಹ ಮಾಡಲಾಗಿದ್ದು, ಪ್ರೊಮೋದಲ್ಲಿ ಇರುವ ಧ್ವನಿಗೂ ದೂರುದಾರರು ನೀಡಿರುವ ಧ್ವನಿಗೂ ಸಂಬಂಧವಿದೆಯೇ ಎಂದು ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ.

 

 

ಇದನ್ನು ಓದಿ: H D Kumarswamy: ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ FIR ಜಡಿದೇ ಬಿಟ್ಟ ಕಾಂಗ್ರೆಸ್ ಸರ್ಕಾರ

 

You may also like

Leave a Comment