Home » BBK Season 11: ಜಿಂಕೆ ಮರೀನಾ…ನೀ ಜಿಂಕೆ ಜಿಂಕೆ ಮರೀನಾ? ಬಿಗ್‌ಬಾಸ್‌ಗೆ ಟಾಂಗ್‌ ಕೊಟ್ಟ ಜಿಂಕೆ ಮರಿ!

BBK Season 11: ಜಿಂಕೆ ಮರೀನಾ…ನೀ ಜಿಂಕೆ ಜಿಂಕೆ ಮರೀನಾ? ಬಿಗ್‌ಬಾಸ್‌ಗೆ ಟಾಂಗ್‌ ಕೊಟ್ಟ ಜಿಂಕೆ ಮರಿ!

3 comments

BBK Season 11: ಬಿಗ್‌ಬಾಸ್‌ ಸೀಸನ್‌ 11 ಕ್ಕೆ ಕಾಲಿಟ್ಟಿರುವ ಮೂರನೇ ಸ್ಪರ್ಧಿ ಧನರಾಜ್‌ ಅವರಿಗೆ ಬಿಗ್‌ಬಾಸ್‌ ಟಾಸ್ಕ್‌ವೊಂದನ್ನು ನೀಡಿದ್ದು, ಜಿಂಕೆ ರೀತಿ ವರ್ತಿಸಲು ಹೇಳಿದ್ದಾರೆ.

ಕಲರ್ಸ್‌ ಕನ್ನಡ ಬಿಟ್ಟ ವೀಡಿಯೋದಲ್ಲಿ ಧನರಾಜ್‌ ಅವರಲ್ಲಿ ಪತ್ರವೊಂದನ್ನು ಓದಲು ಕನ್‌ಫೆಶನ್‌ ರೂಂಗೆ ಬರಲು ಹೇಳುತ್ತಾರೆ. ಆವಾಗ ನನಗೆ ನಿಮ್ಮ ವಾಯ್ಸ್‌ ಕೇಳುವುದಿಲ್ಲ ಎಂದು ಹೇಳುತ್ತಾರೆ. ಅದಕ್ಕೆ ಬಿಗ್‌ಬಾಸ್‌ , ಮೈಕ್‌ ಸರಿಯಾಗಿ ಹಾಕಿಕ್ಕೊಳ್ಳಿ ಎಂದು ಹೇಳಿದ ಮೊಟ್ಟಮೊದಲ ವ್ಯಕ್ತಿ ನೀವು ಎಂದು ಹೇಳಿದಾಗ, ಧನರಾಜ್‌ ಅವರು ತ್ಯಾಂಕ್ಯೂ ಎಂದು ಮೆಲ್ಲಗೆ ಹೇಳಿ, ಪೇಚಿಗೆ ಸಿಲುಕುತ್ತಾರೆ.

ಅನಂತರ ಸುದೀಪ್‌ ಅವರು ಏನಂತ ಹೇಳಿದ್ರು? ಎಂದು ಪ್ರಶ್ನೆ ಮಾಡುತ್ತಾರೆ, ಜಿಂಕೆ ತರಹ ನೀವು ಎಂದು ಸುದೀಪ್‌ ಹೇಳಿದ್ದು, ಜಿಂಕೆ ತರಹ ಉತ್ತರ ಕೊಡಬೇಕು ಎಂದು ಬಿಗ್‌ಬಾಸ್‌ ಹೇಳುತ್ತಾರೆ. ಆಮೇಲೆ ಜಿಂಕೆ ರೀತಿ ಹೋಗಿ, ಲೆಟರ್‌ ಓದಬೇಕು ಎಂದು ಹೇಳುತ್ತಾರೆ ಬಿಗ್‌. ಧನರಾಜ್‌ ಅವರು ಜಿಂಕೆ ರೀತಿ ಛಂಗನೆ ಹಾರುತ್ತಾ ಲಿವಿಂಗ್‌ ಏರಿಯಾಕ್ಕೆ ಓಡುತ್ತಾ, ಬನ್ನಿ ಎಲ್ಲರೂ ಎಂದು ಹೇಳುತ್ತಾರೆ.

ಅಷ್ಟಕ್ಕೂ ಈ ಎಪಿಸೋಡ್‌ ಇಂದು ರಾತ್ರಿ ಪ್ರಸಾರವಾಗಲಿದ್ದು, ಇದು ಯಾಕೆ? ಏನು ಎನ್ನುವುದನ್ನು ವೀಕ್ಷಕರು ಟಿವಿಯಲ್ಲಿ ನೋಡಬೇಕಾಗುತ್ತದೆ.

You may also like

Leave a Comment